ಮನಮೋಹನ್ ಸಿಂಗ್‌ಗೆ ಸೌದಿ ಡಾಕ್ಟರೇಟ್ ಪದವಿ |
ಪ್ರಕಟಿಸಿದ ದಿನಾಂಕ : 2010-03-02
ರಿಯಾದ್, ಮಾ. ೧: ಭಾರತದ ಆರ್ಥಿಕ ಸುಧಾರಣೆ ಗಳ ಶಿಲ್ಪಿ ಮತ್ತು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸೌದಿ ಅರೇಬಿಯದ ಪ್ರತಿಷ್ಠಿತ ಕಿಂಗ್ ಸಾವುದ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಪದವಿ ಸ್ವೀಕರಿಸಿ ಮಾತನಾಡಿದ ಮನಮೋಹನ್ ಸಿಂಗ್ ಅವರು ತಾನು ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳನ್ನು ನೆನೆದುಕೊಂಡರಲ್ಲದೆ, ಯುವ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವಲ್ಲಿ ತಾನು ವಹಿಸಿದ್ದ ಪಾತ್ರವನ್ನು ಸ್ಮರಿಸಿಕೊಂಡರು.
ಸಾಮಾಜಿಕ ಮತ್ತು ಆರ್ಥಿಕ ಸ್ಥಿತ್ಯಂತರವನ್ನು ಸಾಧಿಸುವಲ್ಲಿ ಶಿಕ್ಷಣ ಬಹು ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ೭೭ರ ಹರೆಯದ ಸಿಂಗ್ ಅಭಿಪ್ರಾಯಪಟ್ಟರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-02 00:00:00
|
|
| ZAINUDDIN , THODAR | 2010-03-22 | | good |
|