ಖಾಝಿ ನಿಧನಕ್ಕೆ ರಿಯಾದ್‌ನಲ್ಲಿ ಸಂತಾಪ ಸಭೆ |
ಪ್ರಕಟಿಸಿದ ದಿನಾಂಕ : 2010-02-23
ರಿಯಾದ್, -.೨೨: ಇತ್ತೀಚೆಗೆ ನಿಧನರಾದ ಮಂಗಳೂರು ಖಾಝಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ಚಂಬರಿಕರ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಶನ್ ಸಂಘದ ವತಿಯಿಂದ ಸಂತಾಪ ಸಭೆ ಶುಕ್ರವಾರ ಜುಮಾ ನಮಾಝಿನ ಬಳಿಕ ರಿಯಾದ್‌ನ ಹರಾದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಯಂ. ಹನೀಫ್ರ ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ಖಯ್ಯೂಮ್‌ರ ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಸಂಘದ ಸಲಹೆಗಾರ ಫರ್ವೇಝ್ ಅಲಿ ಸಂತಾಪ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಪಿ.ಎಸ್.ಅಬ್ದುಲ್ ಅಝೀಝ್, ಸುಲೈಮಾನ್, ಸಂಘಟನಾ ಕಾರ್ಯದರ್ಶಿ ಎ.ಕೆ. ಶಬೀರ್, ಜತೆ ಕಾರ್ಯದರ್ಶಿ ಹುಸೈನ್ ಐಫ್ , ಕೋಶಾಧಿಕಾರಿ ಅಶಾಕ್ ಅಹ್ಮದ್, ಸಲಹಾ ಸಮಿತಿ ಸದಸ್ಯರುಗಳಾದ ಪಿ.ಎಂ.ಮನ್ಸೂರ್, ಪಿ.ಎಚ್ ಮಯ್ಯದ್ದಿ, ಅಮೀರುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-23 00:00:00
|
|
|