ಅಕ್ಕ ವಿಶ್ವ ಕನ್ನಡ ಸಮ್ಮೇಳನ 2010 ಸ್ಮರಣ ಸಂಚಿಕೆ - ಲೇಖನಗಳಿಗೆ ಆಹ್ವಾನ |
ಪ್ರಕಟಿಸಿದ ದಿನಾಂಕ : 2010-02-22
೨೦೧೦ನೇ ಇಸವಿಯ ೬ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ನಿರ್ವಹಣೆಗೆ ಅಮೆರಿಕ ಕನ್ನಡ ಕೂಟಗಳ ಆಗರ (ಅಕ್ಕ) ಸಂಸ್ಥೆಯು ನ್ಯೂ ಜರ್ಸಿಯಲ್ಲಿರುವ ಬೃಂದಾವನ ಕನ್ನಡ ಕೂಟವನ್ನು ಆಯ್ಕೆಮಾಡಿದೆ. ಈ ಸಮ್ಮೇಳನವನ್ನು ಎಡಿಸನ್, ನ್ಯೂ ಜರ್ಸಿಯಲ್ಲಿರುವ ರಾರಿಟನ್ ಸೆಂಟರ್‌ನಲ್ಲಿ ಸೆಪ್ಟೆಂಬರ್ ೩ ರಿಂದ ೫ ರವರೆಗೆ ಆಚರಿಸಲು ಏರ್ಪಾಡುಮಾಡಿದೆ.
ಈ ಸಮ್ಮೇಳನದ ಸವಿನೆನಪಿಗೋಸ್ಕರ ಒಂದು ಸ್ಮರಣ ಸಂಚಿಕೆಯನ್ನು ಪ್ರಕಟಿಸಿ ಅದನ್ನು ಸಮ್ಮೇ ಳನಕ್ಕೆ ಬಂದವರಿಗೆಲ್ಲಾ ವಿತರಿಸಲಾಗುವುದು. ಗಣ್ಯ ಮಹನೀಯರ ಸಂದೇಶಗಳು, ಹೆಸರಾಂತ ಕವಿಗಳ ಮತ್ತು ಲೇಖಕರ ಕವನಗಳು, ಲೇಖನಗಳು, ಸಣ್ಣಕಥೆಗಳು, ಮತ್ತು ಮಕ್ಕಳ ಬರವಣಿಗೆ ಗಳನ್ನು ಈ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಅದಕ್ಕೋಸ್ಕರ ಅಕ್ಕ ೨೦೧೦ ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆ ಸಮಿತಿ ಈ ಮೂಲಕ ನಿಮ್ಮ ಬರವಣಿಗೆಗಳಿಗೆ ಆಹ್ವಾನ ನೀಡುತ್ತಿದೆ.
ಅಕ್ಕ ೨೦೧೦ ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸುವ ಲೇಖನ, ಕವನ, ಕಥೆ, ಇತ್ಯಾದಿ ಬರಹಗಳನ್ನು ಆಯ್ಕೆ ಮಾಡುವಾಗ ಈ ಕೆಳಗಿನ ನಿಯಮಗಳು ಅನ್ವಯವಾಗುತ್ತವೆ:
ಅಕ್ಕ ೨೦೧೦ ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲು ಕಳುಹಿಸಿದ ಬರಹಗಳು ಬೇರೆಲ್ಲೂ ಪ್ರಕಟವಾಗಿರಬಾರದು.
ಬರಹಗಳು ೮ ಪುಟಗಳಿಗಿಂತ ಹೆಚ್ಚಾಗಿರಬಾರದು (ಫಾಂಟ್ ಸೈಜ್: ೧೨ (ಕನ್ನ್ಡಡ), ೧೧ (ಆಂಗ್ಲ), single line spaced). ಬರಹಗಳ ಗುಣಮಟ್ಟ ಹಾಗೂ ವಿಶಿಷ್ಟತೆಗಳಿಗೆ ಅನುಗುಣವಾಗಿ ಕೆಲವು ರಿಯಾಯಿತಿಗಳು ಅನ್ವಯವಾಗುತ್ತವೆ.
ಕನ್ನಡ ಬರಹಗಳು `ಬರಹ'ದಲ್ಲಿರಬೇಕು, ಮತ್ತು ಆಂಗ್ಲ ಬರಹಗಳು `ಮೈಕ್ರೋಸಾಫ್ಟ್ ವರ್ಡ್'ನಲ್ಲಿ ರಬೇಕು.
ಬರಹಗಳನ್ನು ಅಕ್ಕ ೨೦೧೦ ವಿಶ್ವ ಕನ್ನಡ ಸಮ್ಮೇಳನ ಸ್ಮರಣ ಸಂಚಿಕೆಯಲ್ಲಿ ಪ್ರಕಟಣೆಗೆಂದು ಆಯ್ಕೆಮಾಡುವಾಗ ಸ್ಮರಣ ಸಂಚಿಕೆ ಸಮಿತಿಯ ತೀರ್ಮಾನವೇ ಅಂತಿಮ.
ನಿಮ್ಮ ಬರಹಗಳ ಜೊತೆಗೆ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ನಿಮ್ಮ ಬಗ್ಗೆ ಸಂಕ್ಷಿಪ್ತ ವಿವರಣೆ (ಮಕ್ಕಳ ಲೇಖನಗಳಾದರೆ ಅವರ ವಯಸ್ಸು) ಮತ್ತು ನಿಮ್ಮ ಛಾಯಾಚಿತ್ರವನ್ನು ಸೇರಿಸಿ ದಯವಿಟ್ಟು ಮಾರ್ಚ್ ೩೧, ೨೦೧೦ರೊಳಗೆ AKKA2010.Souvenir@gmail.com ಗೆ ಈ-ಮೈಲ್ ಮಾಡಿ.
ದಯವಿಟ್ಟು ಈ ಕೆಳಗಿನ ವಿವರಗಳನ್ನು ಗಮನಿಸಿ:
೧. ಮಕ್ಕಳ ಲೇಖನಗಳು: ಸ್ಮರಣ ಸಂಚಿಕೆಗೆ ಕಳುಹಿಸಿಕೊಟ್ಟ ಮಕ್ಕಳ ಕೃತಿಗಳನ್ನು ಅವರ ವಯ ಸ್ಸಿನ ಪ್ರಕಾರ ಎರಡು ವಿಭಾಗ ಮಾಡಲಾಗುವುದು - ೧) ೧೨ ವರ್ಷ ಮತ್ತು ಅದಕ್ಕಿಂತ ಕಡಿಮೆ, ೨) ೧೩ ರಿಂದ ೧೮ ವರ್ಷದವರೆಗೆ. ಎರಡು ವಿಭಾಗದಿಂದಲೂ ತಲಾ ೫ ಕೃತಿಗಳನ್ನು ಆಯ್ಕೆ ಮಾಡಿ ನಗದು ಬಹುಮಾನಗಳನ್ನು ಕೊಡಲಾಗುವುದು.
೨. ಮಕ್ಕಳ ಪೇಂಟಿಂಗ್ ಗಳು: ಈ ಸಾರಿ ಮಕ್ಕಳ ಪೇಂಟಿಂಗ್ ಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಇದಕ್ಕೆ ವಯಸ್ಸಿನ ವಿಭಾಗ ಮೇಲಿನಂತೆಯೇ ಮಾಡಲಾಗುವುದು. ಎರಡು ವಿಭಾಗದಿಂದಲೂ ತಲಾ ೫ ಕೃತಿಗಳನ್ನು ಆಯ್ಕೆ ಮಾಡಿ ನಗದು ಬಹುಮಾನಗಳನ್ನು ಕೊಡಲಾ ಗುವುದು
ನಾವೆಲ್ಲರೂ ನಿಮ್ಮ ಬರಹಗಳನ್ನು ಆದಷ್ಟು ಬೇಗ ಸ್ವೀಕರಿಸುವ ನಿರೀಕ್ಷೆಯಲ್ಲಿದ್ದೇವೆ ಹಾಗೂ ನೀವು ಈ ಸಮ್ಮೇಳನಕ್ಕೆ ಆಗಮಿಸಿ ಈ ಸಮ್ಮೇಳನದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ನಿಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ. ಸಮ್ಮೇಳನಕ್ಕೆ ಸಂಬಂಧಪಟ್ಟಂತಹ ಎಲ್ಲಾ ಮಾಹಿತಿಗಳಿಗೆ ಅಕ್ಕ ಅಂತರ್ಜಾಲ ತಾಣಕ್ಕೆ (www.akkaonline.org) ಭೇಟಿಕೊಡಿ.
ವರದಿಯ ವಿವರಗಳು |
 |
ಕೃಪೆ : ಸತೀಶ್ ಹೊಸನಗರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-22 00:00:00
|
|
|