ವಾರ್ತಾ ಭಾರತಿ ವರದಿಗಾರ ಆರೀಫ್ ಮಚ್ಚಂಪಾಡಿ ಮೇಲಿನ ಹಲ್ಲೆಗೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘ ಖಂಡನೆ. |
ಪ್ರಕಟಿಸಿದ ದಿನಾಂಕ : 2010-02-21
ರಿಯಾದ್: ಫೆಬ್ರವರಿ ೨೦ : ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವಾರ್ತಾ ಭಾರತಿಯ ವರದಿ ಗಾರ, ಮಂಗಳೂರು ವಿ.ವಿ.ಯ ಎಂಎ ವಿದ್ಯಾರ್ಥಿ ಆರೀಫ್ ಮಚ್ಚಂಪಾಡಿ ಅವರಿಗೆ ವಿನಾ ಕಾರಣ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿದ ಕಿಡಿಗೇಡಿಗಳ ದುಷ್ಕೃತ್ಯವನ್ನು ಖಂಡಿಸಿರುವ ಅನಿವಾಸಿ ಕನ್ನಡಿ ಗ ಪತ್ರಕರ್ತರ ಸಂಘ ಆರೋಪಿಯ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿ ಸಿದೆ.
ಇತ್ತೀಚಿಗೆ ಪತ್ರಕರ್ತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವುದು ಅತ್ಯಂತ ವ್ಯವ ಸ್ಥಿತ ಷಡ್ಯಂತ್ರದ ಭಾಗವಾಗಿದ್ದು ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾಂಗದ ಮೇಲೆ ನಡೆಯುತ್ತಿರುವ ಈ ರೀತಿಯ ದಾಳಿಗಳನ್ನು ತಡೆಯಲು ಒಂದು ಸೂಕ್ತ ಕಾನೂನು ರೂಪಿಸು ವಂತೆ ಅನಿವಾಸಿ ಕನ್ನಡಿಗ ಪತ್ರಕರ್ತರ ಸಂಘದ ಸಂಚಾಲಕ ಅಶ್ರಫ್ ಮಂಜ್ರಾಬಾದ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಅಶ್ರಫ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-21
|
|
|