ಕೈಲಾಸ ಪರ್ವತದಲ್ಲಿ ಶಿವನೊಡನೆ ಭಕ್ತರು |
ಪ್ರಕಟಿಸಿದ ದಿನಾಂಕ : 2010-02-19
ಮಾಘ ಮಾಸದ ಕ್ರಿಷ್ಣ ಚರ್ತುದಶಿಯ ಫೆ. ೧೨ರಂದು ಬಂದ ಮಹಾಶಿವರಾತ್ರಿಯಂದು ಶುದ್ಧ ಮನಸಿನಿಂದ, ಶುದ್ಧ ಭಕ್ತಿಯಿಂದ ಕನ್ನಡ ಕೂಟದ ಸದಸ್ಯರಾದ ಶ್ರೀ ಮತಿ ಹಾಗು ಶ್ರೀ ಸಂತೋಷ್ ಕುಲ್ಕರ್ಣಿ ಮನೆಯಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಭಕ್ತ ವೃಂದದೊಂದಿಗೆ ಸರಿಯಾಗಿ ೬ ಗಂಟೆ ಗೆ ಸೇರಿ ಕನ್ನಡ ಕೂಟದ ಭಜನಾ ಮಂಡಳಿ ನಾಯಕರಾದ ಡಾ.ಸುರೇಂದ್ರ ನಾಯಕ್ ತಂಡ ದೊಂದಿಗೆ ಪ್ರಾರಂಭವಾದ "ಓಂ ನಮಃ ಶಿವಾಯದ ಜಪದ ಝೇಕಾಂರವು ಇಡೀ ಮನೆ-ಮನವನ್ನೆಲ್ಲಾ ತುಂಬಿ ಮುಂದಿನ ಭಕ್ತಿ ಗೀತೆಗಳಿಗೆ ಚಾಲನೆ ಕೊಟ್ಟಿತು.
ಸತತವಾಗಿ ಮೂರು ಗಂಟೆಗಳ ಕಾಲ ನೆಡೆದ ಭಜನೆಗಳಲ್ಲಿ ಮಹಿಳೆಯರೂ ಜೊತೆಗೂಡಿದರು. ನಂತರ ರಾತ್ರಿ ೯ ಗಂಟೆ ವೇಳೆಗೆ ಡಾ. ದಿವಾಕರ್ ಅವರ ಮಂತ್ರೋಪದೇಶಗಳು ಹಾಗೂ ಶಿವ ಲಿಂಗಾಕಷ್ಟಕಗಳೊಂದಿಗೆ ನೀಲಕಂಠೇಶ್ವರನಿಗೆ ಪಂಚಾಮೃತ ಅಭಿಷೇಕ ಬಿಲ್ವಾರ್ಚನೆ ಎಲ್ಲ ಸ್ನೇಹಿತರೂ ಹಾಗೂ ಸಂತೋಷ್ ದಂಪತಿಗಳಿಂದ ನೆರೆವೇರಿತು.
ನಂತರ ನೈವೇದ್ಯ ಆರತಿ ಮಂತ್ರ ಪುಷ್ಪ ಹಾಗೂ ಪ್ರಸಾದಗಳ ವಿನಿಯೋಗ ಮಾಡಲಾಯಿತು. ಫಲಹಾರಗಳನ್ನು ವೀಣಾ, ಮಾಧವಿ ಕುಲ್ಕರ್ಣಿ, ಶೈಲಜಾ ಹೊಂಬಾಳಿ, ಮಾಧುರಿ ಕಟ್ಟಿ, ನಿರುಪಮ ದಿನೇಶ್, ವಿದ್ಯಾ ಪ್ರಭಾಕರ್, ಸಂಗೀತಾ ಅಮೃತ್ ರಾಜ್ , ಸುಶೀಲಾ ಹೆಗಡೆ, ಸಂಧ್ಯಾ ಅರುಣ್, ಮಾಲಿನಿ ದಿವಾಕರ್, ಉಷಾ ಪ್ರಭು, ಬಹಳ ಶ್ರದ್ದೆ ಇಂದ ತಯಾರಿಸಿದ್ದರು.
ನಗೆ ಮೊಗದ ನೀಲನೇತ್ರನನ್ನು ಕೈಲಾಸ ಪರ್ವತದ ಕಲ್ಪನೆಯಲ್ಲಿ ಸ್ಥಾಪಿಸಲು ಸಂಪೂರ್ಣವಾಗಿ ಸಹಕರಿಸಿದ ಮಹೇಶ್ ದಂಪತಿಗಳಿಗೆ ತುಂಬಾ ಧನ್ಯವಾದಗಳು. ಇಲ್ಲಿ ನೆರೆವೇರಿದ ಎಲ್ಲ ಭಕ್ತ ವೃಂದಕ್ಕೂ ಶಿವನು ಒಳ್ಳೆಯದನ್ನು ಮಾಡಲೆಂದು ಪ್ರಾರ್ಥಿಸುತ್ತ ಸಹಾಯ ಮಾಡಿದ ಕುಟುಂಬ ಗಳಿಗೆ ಧನ್ಯವಾದಗಳು.
ವರದಿಯ ವಿವರಗಳು |
 |
ಕೃಪೆ : ಮೋಹನ್‌ದಾಸ್ ಕಾಮತ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-19 00:00:00
|
|
|