ಪುಣೆ ಸ್ಫೋಟ: ಉಗ್ರರ ಸುಳಿವು ನೀಡಿದವರಿಗೆ 1 ಕೋಟಿ ಬಹುಮಾನ? |
ಪ್ರಕಟಿಸಿದ ದಿನಾಂಕ : 2010-02-16
ನವದೆಹಲಿ: ಪುಣೆಯ ಜರ್ಮನ್ ಬೇಕರಿಯಲ್ಲಿ ಬಾಂಬ್ ಸ್ಫೋಟಿಸಿದ ಉಗ್ರರ ಬಗ್ಗೆ ಸುಳಿವು ನೀಡಿದವರಿಗೆ ಒಂದು ಕೋಟಿ ರುಪಾಯಿ ಬಹುಮಾನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಬಹುಮಾನ ನೀಡುವ ಪ್ರಸ್ತಾವನೆ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ಗಳು ತಿಳಿಸಿದ್ದಾರೆ.
ಒಂದು ವೇಳೆ ಬಹುಮಾನ ನೀಡುವ ನಿರ್ಧಾರ ತೆಗೆದುಕೊಂಡರೆ, ಉಗ್ರರ ಬಗ್ಗೆ ಮಾಹಿತಿ ಹೇಗೆ ನೀಡಬೇಕು ಎಂಬುದರ ಬಗ್ಗೆ ಜನತೆಗೆ ತಿಳಿಸುತ್ತೇವೆ ಮತ್ತು ಮಾಹಿತಿ ನೀಡಿದವರ ಬಗ್ಗೆ ಗೌಪ್ಯತೆ ಯನ್ನು ಕಾಪಾಡಲಾಗುವುದು. ನಾವು ಅವರ ಹೆಸರನ್ನು ಸಹ ಕೇಳುವುದಿಲ್ಲ, ಮಾಹಿತಿ ನೀಡಿದರೆ ಬಹುಮಾನ ಕೊಡುತ್ತೇವೆ. ಆದರೆ ಮಾಹಿತಿ ಸರಿಯಾಗಿರಬೇಕು ಎಂದು ಅಧಿಕಾರಿಗಳು ಹೇಳಿ ದ್ದಾರೆ.
ಸ್ಫೋಟದ ಬಗ್ಗೆ ಈವರೆಗೂ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗದೇ ಇರುವುದರಿಂದ ಮತ್ತು ತನಿಖೆಯ ಮೇಲೆ ಬೆಳಕು ಚೆಲ್ಲಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-16
|
|
| deepak, mangaloor | 2010-03-22 | | sanathan samsthe |
|