ಬಂಟರ ಸಂಘ ಕುವೈಟ್ ಆಚರಿಸಿದ ೭ನೆಯ ವಾರ್ಷಿಕೋತ್ಸವ: ವಿಶೇಷ ಆಕರ್ಷಣೆಯಾಗಿ ನೃತ್ಯ ಭಜನೆ |
ಪ್ರಕಟಿಸಿದ ದಿನಾಂಕ : 2008-01-08
ಕುವೈಟ್, ಜನವರಿ ೮:ಕುವೈಟ್ ಬಂಟರ ಸಂಘದ ತನ್ನ ಏಳನೆಯ ವಾರ್ಷಿಕೋತ್ಸವವನ್ನು ಕಳೆದ ನಾಲ್ಕನೆಯ ಜನವರಿಯಂದು ಕುವೈಟ್ ಇಂಡಿಯನ್ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಚರಿಸಿಕೊಂಡಿತು.
ಕುಮಾರ ಪೃಥ್ವಿಯ ಪ್ರಾರ್ಥನಾಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಅಧ್ಯಕ್ಷರಾದ ಶ್ರೀ ದಿವಿನ್ ಕುಮಾರ ಮೆಂಡ ಜಜ್ಪೆ ಹಾಗೂ ಉಪಾಧ್ಯಕ್ಷರಾದ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಹಾಗೂ ಸಹವರ್ತಿಗಳಾದ ಶ್ರೀ ಪ್ರಕಾಶ್ ಕೆ. ಶೆಟ್ಟಿ ಬಿಜಂತ್ಲ ಹಾಗೂ ಶ್ರೀ ವಿವೇಕ್ ಶೆಟ್ಟಿ ಬೆಳ್ಮಣ್ ಹಾಗೂ ಸಾಮಾನ್ಯ ಕಾರ್ಯದರ್ಶಿ ಶ್ರೀಮತಿ ಸನ್ಮತಿ ಡಿ ಮೆಂಡಾ ಬಜ್ಪೆ ಹಾಗೂ ಇತರ ಪ್ರಮುಖ ಸದಸ್ಯರು ಜ್ಯೋತಿ ಬೆಳಗಿಸುವ ಮೂಲಕ ಮುಂದುವರೆಯಿತು.
ಕಳೆದ ವರ್ಷದ ಲೆಕ ವೆಚ್ಚಗಳ ವಿವರಗಳನ್ನು ಸಾಮಾನ್ಯ ಕಾರ್ಯದರ್ಶಿ ಹಾಗೂ ಖಜಾಂಚಿಯವರು ತಮ್ಮ ತಮ್ಮ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು. ಈ ವರ್ಷದ ಕಾರ್ಯಕಾರಿ ಸಭೆಗೆ ಆಯ್ಕೆಯಾದ ಸದಸ್ಯರ ವಿವರಗಳನ್ನು ಪ್ರಕಟಿಸಲಾಯಿತು. ಹೊಸ ಕಾರ್ಯಕಾರಿ ಸಮಿತಿಯ ವಿವರಗಳು ಹೀಗಿವೆ:
ಅಧ್ಯಕ್ಷರು: ಶ್ರೀ ದಿವಿನ್ ಕುಮಾರ್ ಮೆಂಡಾ ಬಜ್ಪೆ (ಪುನಾರಾಯ್ಕೆ) ಉಪಾಧ್ಯಕ್ಷರು: ಶ್ರೀ ಶ್ರೀ ಕರುಣಾಕರ ಶೆಟ್ಟಿ ಅಜೆಕಳ (ಪುನಾರಾಯ್ಕೆ) ಸಾಮಾನ್ಯ ಕಾರ್ಯದರ್ಶಿ: ಶ್ರೀಮ್ ಮಹೇಶ್ ಬಂಡಾರಿ ಮುಂದ್ರಬೆಟ್ಟು ಗುಟ್ಟು ಸಹ ಕಾರ್ಯದರ್ಶಿ: ಶ್ರೀಮತಿ ಸುಪ್ರೀತಾ ವಿವೇಕ್ ಶೆಟ್ಟಿ ಬೆಳ್ಮಣ್ ಖಜಾಂಚಿ: ಶ್ರೀ ಚೇತನ್ ಅಡಪ್ಪ ಕಲ್ಯಾಣ ಕಾರ್ಯದರ್ಶಿ: ಶ್ರೀ ಬಾಲಕೃಷ್ಣ ಶೆಟ್ಟಿ ಮಕ್ಯೂರು ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀ ಮಧ್ವರಾಜ್ ರೈ ಅದ್ಯಾರ್ ಕ್ರೀಡಾ ಕಾರ್ಯದರ್ಶಿ: ಶ್ರೀ ಮನೋಜ್ ಶೆಟ್ಟಿ ಶಿರ್ವ ಜನತಾ ಪ್ರತಿನಿಧಿ: ಸೂರಜ್ ಶೆಟ್ಟಿ ಯೆಲ್ತರ ಗುಟ್ಟು.
ಹೊಸ ಸದಸ್ಯರನ್ನು ಸಂಘಟಕರಾದ ಶ್ರೀ ವಿವೇಕ್ ಬೆಲ್ಮಣ್ ಅವರು ಸ್ವಾಗತಿಸಿ ಸಭೆಗೆ ಪರಿಚಯಿಸಿದರು ಹಾಗೂ ಕಳೆದ ವರ್ಷದ ಸಂಘದ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ ಸಮಿತಿಗೆ ಧನ್ಯವಾದ ಅರ್ಪಿಸಿದರು.
ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಸಂಘದ ಸದಸ್ಯರು ವಿಶೇಷ -ನೃತ್ಯ ಭಜನೆ-ಯನ್ನು ನಿರೂಪಿಸಿದರು. ಅತ್ಯಂತ ಮನಮೋಹಕವಾಗಿ ಮೂಡಿ ಬಂದ ನೃತ್ಯ ಕಾರ್ಯಕ್ರಮ ಭಕ್ತರಿಗೆ ಪಾನಕ ಮತ್ತು ಪ್ರಸಾದ ನೀಡುವ ಮೂಲಕ ವಿಶಿಷ್ಟ ಅನುಭವ ನೀಡಿತು.
ಹವಳ್ಳಿಯ ಕ್ವೀನ್ಸ್ ರೆಸ್ಟೋರೆಂಟ್ ಸಾದರಪಡಿಸಿದ ಸ್ವಾದಿಷ್ಟ ಭೋಜನ ಸಭಿಕರ ಮೆಚ್ಚುಗೆ ಗಳಿಸಿತು. ಊಟದ ಬಳಿಕ ಮಕ್ಕಳಿಗೆ ಮತ್ತು ಹಿರಿಯರಿಗೆ ನಡೆಸಿದ ಹಾವು ಏಣಿಯಾಟ, ಮುಕ್ತ ರಸಪ್ರಶ್ನೆ ಕಾರ್ಯಕ್ರಮ, ಪಾಸಿಂಗ್ ದ ಬಾಲ್, ಹೌಸಿ ಹೌಸಿ ಆಟಗಳ ನೆರೆದವರನ್ನು ರಂಜಿಸಿದವು.
ಕಾರ್ಯದರ್ಶಿಗಳ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮಕ್ಕೆ ಇಲ್ಯುಮಿನೇಶನ್ಸ್ ಸಂಸ್ಥೆ ಬೆಳಕು ವ್ಯವಸ್ಥೆ ಒದಗಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ಕುವೈಟ್ ಬಂಟರ ಸಂಘ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-01-08
|
|
|