ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ಶೀಘ್ರದಲ್ಲಿ. |
ಪ್ರಕಟಿಸಿದ ದಿನಾಂಕ : 2007-10-15
ಕುವೈಟ್ ಹಾಗೂ ಮಂಗಳೂರಿನ ವಿಮಾನಯಾನ ಅಧಿಕಾರಿಗಳು ಕುವೈಟಿನಿಂದ ಮಂಗಳೂರಿಗೆ ನೇರ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ. ಶೀಘ್ರದಲ್ಲಿಯೇ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕುವೈಟಿನಿಂದ ಮಂಗಳೂರಿಗೆ ನೇರ ವಾಯುಯಾನ ಸಂಚಾರ ಆರಂಭಿಸಲಿದೆ ಎಂದು ಮಂಗಳೂರಿನ ವಿಮಾನ ನಿಲ್ಧಾಣ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಯಾನವು ಕುವೈಟಿನಲ್ಲಿರುವ ಭಾರತೀಯರ ಅದರಲ್ಲೂ ಅನಿವಾಸಿ ಕರಾವಳಿ ಕನ್ನಡಿಗರ ಬಹುದಿನದ ಕನಸಾಗಿದ್ದು ಕೆಲದಿನಗಳ ಹಿಂದೆ ದುಬೈ ಮಂಗಳೂರು ನೇರ ವಿಮಾನಯಾನ ಪ್ರಾರಂಭವಾದ ಮೇಲೆ ಈ ಕನಸಿಗೆ ಗರಿ ಮೂಡಿತ್ತು.
ಕಳೆದ ದಿನಗಳಲ್ಲಿ ಪ್ರಮುಖ ಮಂತ್ರಿಯೊಬ್ಬರನ್ನೊಳಗೊಂಡ ಕುವೈಟ್ ಕನ್ನಡಿಗರ ಬಳಗ ಈ ವಿಮಾನಯಾನವನ್ನು ಆದಷ್ಟು ಬೇಗನೇ ಆರಂಭಿಸುವಂತೆ ವಿಮಾನಯಾನ ಪ್ರಾಧಿಕಾರಕ್ಕೆ ತನ್ನ ಬೇಡಿಕೆ ಸಲ್ಲಿಸಿತ್ತು. ಇವರ ಮನವಿಯನ್ನು ಮನ್ನೈಸಿದ ಪ್ರಾಧಿಕಾರ ತನ್ನ ಸಮ್ಮತಿ ಸೂಚಿಸಿದೆ. ಮಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕರಾದ ಶ್ರೀ ಎಮ್.ಆರ್. ವಾಸುದೇವ್ ಅವರು ಈ ಬಗ್ಗೆ ವಿವರ ನೀಡುತ್ತಾ ಅಕ್ಟೋಬರ್ 28ರ ನಂತರ ಯಾವುದೇ ದಿನದಲ್ಲಿ ಈ ಯಾನ ಪ್ರಾರಂಭವಾಗಬಹುದೆಂದು ತಿಳಿಸಿದ್ದಾರೆ.
ವಿಮಾನಯಾನದ ಸಂಭಾವ್ಯ ವೇಳಾಪಟ್ಟಿ ಇಂತಿದೆ (ಅಂತಿಮ ಕ್ಷಣಗಳ ಬದಲಾವಣೆಗೆ ಒಳಪಟ್ಟಿದೆ):
ಪ್ರಯಾಣದ ದಿನಗಳು: ವಾರದಲ್ಲಿ ಮೂರು ದಿನಗಳು (ಮಂಗಳವಾರ, ಗುರುವಾರ, ಹಾಗೂ ಶನಿವಾರ)
ಕುವೈಟಿನಿಂದ ಹೊರಡುವ ಸಮಯ : ರಾತ್ರಿ 11:20
ಮಂಗಳೂರಿಗ ಆಗಮಿಸುವ ಸಮಯ: ಮರುದಿನ ಬೆಳಿಗ್ಗೆ 6:10ಕ್ಕೆ
ಮಂಗಳೂರಿನಿಂದ ಹೊರಡುವ ಸಮಯ : ರಾತ್ರಿ 10:10ಕ್ಕೆ
ಕುವೈಟಿಗೆ ಆಗಮಿಸುವ ಸಮಯ: ರಾತ್ರಿ 11:10 (ಕುವೈಟ್ ಸಮಯ)
ಕಳೆದವರ್ಷ ಅಕ್ಟೋಬರ್ 6 ರಿಂದ ದುಬೈ ಮಂಗಳೂರಿಗೆ ನೇರ ಪ್ರಯಾಣ ಆರಂಭಿಸಿ ಮಂಗಳೂರು ಅಂತರ್ರಾಷ್ಟ್ರೀಯ ವಾಯುಯಾನಕ್ಕೆ ನಾಂದಿ ಹಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ ಸಧ್ಯಕ್ಕೆ ಮಂಗಳೂರಿಗೆ ದೋಹಾ-ಬಹ್ರೈನ್, ದುಬೈ ಹಾಗೂ ಮಸ್ಕತ್ ನಗರಗಳಿಗೆ ನೇರ ಸಂಪರ್ಕ ಒದಗಿಸಿದ್ದು ಕುವೈಟಿನ ಈ ಯಾನದೊಂದಿಗೆ ಜಿ.ಸಿ.ಸಿ ದೇಶಗಳ ಐದು ನಗರಗಳ ಸಂಪರ್ಕ ಹೊಂದಿದಂತಾಗ್ದೆ. ಶೀಘ್ರದಲ್ಲಿ ಸೌದಿ ಅರೇಬಿಯಾಕ್ಕೂ ಈ ಸೇವೆ ವಿಸ್ತರಿಸಲಿದೆ.
ವರದಿಯ ವಿವರಗಳು |
 |
ಕೃಪೆ : ಕಾಮತ್, ಮಂಜೇಶ್ವರ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-10-15
|
|
| Iqbal, Mangalore | 2008-06-16 | | This is not True.This news released almost a year back still no flight from Kuwait has landed in Mangalore!. Where do you get this kind of rumors?.This is not ture at all..... |
| K.S. CHANDRASHEKAR, KASARAGOD | 2008-04-07 | | Iam Shekar from Kuwait.My State is Kerala but Iam a Kannadiga (Karavali).After reading this news I am very very happy. My next vacation is in June. So I will come directly to Mangalore and tell my family about it!. |
|