| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಪುತ್ತೂರು: ಮನೆಗಳ್ಳತನ ತಡೆಗೆ ಜಿಲ್ಲೆಯಲ್ಲಿ ವಿಶೇಷ ಕಾರ್ಯಪಡೆ ರಚನೆ: ಐಜಿಪಿ ಗೋಪಾಲ ಹೊಸೂರು |
ಪ್ರಕಟಿಸಿದ ದಿನಾಂಕ : 2010-02-10
ಪುತ್ತೂರು, ಫೆ.೯: ಸಂಸದ ಡಿ.ವಿ. ಸದಾನಂದ ಗೌಡರ ಮನೆ ಸೇರಿದಂತೆ ಜಿಲ್ಲೆಯಲ್ಲಿ ಅಲ್ಲಲ್ಲಿ ನಡೆಯುತ್ತಿರು ಮನೆಗಳ್ಳತನ ಪ್ರಕರಣವನ್ನು ಪತ್ತೆಹಚ್ಚಲು ವಿಶೇಷ ಕಾರ್ಯಪಡೆಯೊಂದನ್ನು ರಚಿ ಸುವುದಾಗಿ ಪಶ್ಚಿಮ ವಲಯ ಪೊಲೀಸ್ ವರಿಷ್ಠಾಧಿಕಾರಿ ಬಿ.ಗೋಪಾಲ ಹೊಸೂರ್ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಪುತ್ತೂರಿಗೆ ಆಗಮಿಸಿ, ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳ್ಳತನ ಸೇರಿ ದಂತೆ ಜಿಲ್ಲೆಯ ಸಮಸ್ಯೆಗಳ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿ ಸುವುದಾಗಿ ತಿಳಿಸಿದರು.
ಸಂಸದ ಡಿ.ವಿ.ಸದಾನಂದ ಗೌಡರ ಮನೆಯಲ್ಲಿ ೫ ಲಕ್ಷ ರೂ. ನಗದು ಹಾಗೂ ೫ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದನ್ನು ಸ್ಪಷ್ಟ ಪಡಿಸಿದ ಅವರು, ಈ ಕಳ್ಳತನ ಪ್ರಕರ ಣಕ್ಕೆ ಸಂಬಂಧಿಸಿ ಸಂಸದರ ಮನೆಯ ರಕ್ಷಣೆಯ ಜವಾಬ್ದಾರಿ ಹೊಂದಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಸುಂದರ ಮತ್ತು ನಗರ ಠಾಣೆಯ ಸಿಬ್ಬಂದಿ ದೇವರಾಜ್ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಪೊಲೀಸರ ನಿರ್ಲಕ್ಷ: ಸಂಸದರ ಮನೆ ಕಳ್ಳತನದ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ನಿರ್ಲಕ್ಷ ತನ್ನ ಗಮನಕ್ಕೆ ಬಂದಿದ್ದು, ಕಳ್ಳತನದ ಬಗ್ಗೆ ಸ್ಥಳೀಯರು ಪೂರ್ವಾಹ್ನ ೭:೩೦ರ ವೇಳೆಗೆ ದೂರು ನೀಡಿದ್ದರು. ಆದರೆ ಪೊಲೀಸರು ೧೦ಗಂಟೆಯ ತನಕ ಸ್ಥಳಕ್ಕೆ ಹೋಗಿಲ್ಲ ಎಂದ ಅವರು, ಪೊಲೀಸ್ ಬೇಜ ಬ್ದಾರಿಯ ಬಗ್ಗೆ ವಿಚಾರಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ನಕ್ಸಲ್ ಮತ್ತು ಕೋಮುಗಲಭೆಗಳು ಬಹುತೇಕ ನಿಯಂತ್ರಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡ ಶ್ರಮ ವಹಿಸುತ್ತಿದೆ ಎಂದ ಅವರು, ಮತೀಯ ಸೌಹಾರ್ದತೆಯ ಅಭಾವ, ಸಂಘಟಿತ ಅಪರಾಧ ಮತ್ತು ಭೂಗತ ಚಟುವಟಿಕೆಗಳನ್ನು ತಡೆದಲ್ಲಿ ಯಾವುದೇ ಅಶಾಂತಿ ನಡೆಯದು ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.
ಪೂರ್ವಾಗ್ರಹವಿಲ್ಲದೆ ತನಿಖೆ: ಇತ್ತೀಚೆಗೆ ಎಂಜಿನಿಯರ್ ವಿದ್ಯಾರ್ಥಿ ಮೋಹಕ್‌ಕುಮಾರ್ ಸಾವಿನ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾ ಗಿದ್ದು, ತನಿಖೆಯ ಪ್ರಾಥಮಿಕ ಹಂತ ಮುಗಿದಿದೆ. ಆತನಿಗೆ ಯಾರೊಂದಿಗೆ ವೈರತ್ವವಿತ್ತು ಮತ್ತು ಯಾಕಾಗಿ ವೈರತ್ವ ಎಂಬ ಕುರಿತೂ ತನಿಖೆ ನಡೆಸಲಾ ಗುತ್ತಿದ್ದು, ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಲು ಪೂರ್ವಾಗ್ರಹ ಪೀಡಿತ ರಾಗದೇ ತನಿಖೆ ನಡೆಸುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಪುತ್ತೂರು ಉಪವಿಭಾಗ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-10 00:00:00
|
|
|
|
|