| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಕುಂದಾಪುರ: ಕಡಲ್ಕೊರೆತ ತಡೆಗೆ ‘ಹಸಿರು ಗೋಡೆ ನಿರ್ಮಾಣ ಯೋಜನೆ’: ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ |
ಪ್ರಕಟಿಸಿದ ದಿನಾಂಕ : 2010-02-10
ಕುಂದಾಪುರ, ಫೆ.೯: ಕರ್ನಾಟಕ ಕರಾವಳಿಯುದ್ದಕ್ಕೂ ಮಳೆಗಾಲದಲ್ಲಿ ಬಾಧಿಸುವ ಕಡಲ್ಕೊರೆತದ ಶಾಶ್ವತ ಪರಿಹಾರಕ್ಕೆ ಆದ್ಯತೆ ನೀಡಬೇಕಾಗಿದ್ದು, ಇದಕ್ಕಾಗಿ ‘ಹಸಿರು ಗೋಡೆ’ ನಿರ್ಮಾಣ ಯೋಜನೆಯನ್ನು ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.
ಕುಂದಾಪುರ ಅರಣ್ಯ ವಿಭಾಗದ ಆಶ್ರಯದಲ್ಲಿ ನಗರದ ಹೊಟೇಲ್ ಶೆರೋನ್ ಸಭಾಂಗಣದಲ್ಲಿ ಮಂಗಳ ವಾರ ನಡೆದ ಕರಾವಳಿ ಜೀವವೈವಿಧ್ಯ, ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆ ತಯಾರಿ ಬಗ್ಗೆ ಆಯೋಜಿ ಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಡಲ್ಕೊರೆತಕ್ಕೆ ಈಗ ಜಾರಿಯ ಲ್ಲಿರುವ ಕಲ್ಲಿನಗೋಡೆ ನಿರ್ಮಾಣ ಸೂಕ್ತ ವಲ್ಲ. ಇದಕ್ಕೆ ಬದಲಾಗಿ ಹಸಿರು ಗೋಡೆ-ಕೆಲವು ತಳಿ ಕಾಂಡ್ಲಾ ಸಸ್ಯಗಳು ಹಾಗೂ ಗಾಳಿ ಮರಗಳ ವನ ನಿರ್ಮಿಸ ಬೇಕಾಗಿದೆ. ಕರಾವಳಿಗೂ ಪಶ್ಚಿಮ ಘಟ್ಟಕ್ಕೂ ಅವಿನಾಭಾವ ಸಂಬಂಧವಿದೆ. ನದಿ ತಿರುಗಿಸಿದರೆ ಅದರಿಂದ ಕರಾ ವಳಿಗೆ ಭಾರೀ ಹೊಡೆತ ಬೀಳುವುದು ಖಂಡಿತ ಎಂದು ಅಶೀಸರ ಹೇಳಿದರು.
ಈ ಯೋಜನೆಗೆ ಈ ಬಾರಿ ಬಜೆಟ್‌ನಲ್ಲಿ ಆರು ಕೋಟಿ ರೂ.ಗಳನ್ನು ನೀಡಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಅನಂತ ಹೆಗಡೆ ವಿವರಿಸಿದರು.
ಕರಾವಳಿ ತೀರದ ಹಾಗೂ ಪಶ್ಚಿಮ ಘಟ್ಟದ ಪರಿಸರ ಮತ್ತು ಜೀವವೈವಿಧ್ಯದ ಉಳಿವಿಗಾಗಿ ಮುಖ್ಯಮಂತ್ರಿ ‘ಕರಾ ವಳಿ ಹಸಿರು ಕವಚ ಯೋಜನೆ’ಯನ್ನು ಡಿ.೭ರಂದು ಘೋಷಿಸಿದ್ದಾರೆ. ಕರಾವಳಿಯ ಜೀವವೈವಿದ್ಯದ ರಕ್ಷಣೆ ಸಂವರ್ಧನೆ ಬಗ್ಗೆ ಕಾರ್ಯ ಯೋಜನೆ ರೂಪಿಸಲಾ ಗುತ್ತಿದೆ ಎಂದು ಹೆಗಡೆ ಹೇಳಿದರು.
ಮಂಗಳೂರು ವೃತ್ತ ಅರಣ್ಯ ಸಂರಕ್ಷ ಣಾಧಿಕಾರಿ ಎಸ್.ಶಾಂತಪ್ಪ, ಸಂಪನ್ಮೂಲ ವ್ಯಕ್ತಿಗಳಾದ ವಿಜಯಕುಮಾರ್, ಗೋಕುಲ್, ಕೇಶವ ಕೊಡ್ಸೆ, ಡಾ.ಸುಭಾಶ್ಚಂದ್ರ ಕುಮಟ ಉಪಸ್ಥಿತರಿದ್ದರು. ಕುಂದಾಪುರ ವಿಭಾಗದ ಉಪಅರಣ್ಯ ಸಂರಕ್ಷಣಾಧಿ ಕಾರಿ ಓ.ಪಾಲಯ್ಯ ಸ್ವಾಗತಿಸಿದರು. ಯೋಗೀಶ್ವರ ಕಾರ್ಯಕ್ರಮ ನಿರ್ವಹಿಸಿದರು.
ರಾಜ್ಯದಲ್ಲಿ ಶೇ.೩೩ರಷ್ಟು ಅರಣ್ಯ ಯೋಜನೆ
ಈ ಭೂಮಿಯ ಮೇಲೆ ಶೇ.೩೩ ಭಾಗ ಅರಣ್ಯ ಪ್ರದೇಶ ಇರಲೇಬೇಕು. ಇಲ್ಲದಿದ್ದರೆ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಲಿದೆ ಎಂದು ಎಚ್ಚರಿಸಲಾ ಗಿದೆ. ರಾಜ್ಯದಲ್ಲೀಗ ಶೇ.೨೩.೨೧ಭಾಗ ಮಾತ್ರ ಅರಣ್ಯ ಇದೆ. ೨೦೨೦ರ ವೇಳೆಗೆ ರಾಜ್ಯದ ಶೇ.೩೩ ಭಾಗದಲ್ಲಿ ಅರಣ್ಯ ರಕ್ಷಾ ಕವಚ ನಿರ್ಮಿಸುವ ಗುರಿ ಹಾಕಿ ಕೊಳ್ಳಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರಕಾರದ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅಭಿವೃದ್ಧಿ) ಡಾ.ಕೆ.ಸುಂದರ ನಾಯಕ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಪ್ರತಿವರ್ಷ ೮೦ರಿಂದ ೮೫,೦೦೦ ಹೆಕ್ಟೇರ್ ಪ್ರದೇಶದಲ್ಲಿ ಕಾಡು ಬೆಳೆಸಲಾಗುತ್ತಿದೆ. ೨೦೨೦ರ ವೇಳೆಗೆ ಶೇ.೩೩ ಭಾಗ ಅರಣ್ಯವಾಗಬೇಕಿದ್ದರೆ, ಇದನ್ನು ೨.೨೦ ಲಕ್ಷ ಹೆಕ್ಟೇರ್‌ಗೆ ಏರಿಸಬೇಕಾಗಿದೆ ಎಂದು ನಾಯಕ್ ತಿಳಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-10 00:00:00
|
|
|
|
|