ಕುವೈತ್‌ನ ಇಂಡಿಯನ್ ಮುಸ್ಲಿಂ ವೆಲ್ ಫೇರ್ ಅಸೋಸಿಯೇಶನ್‌ನ ಪ್ರಶಸ್ತಿ ಪ್ರದಾನ |
ಪ್ರಕಟಿಸಿದ ದಿನಾಂಕ : 2010-02-09
ಕುವೈತ್,-.೮: ಇಂಡಿಯನ್ ಮುಸ್ಲಿಂ ವೆಲ್ ಫೆರ್ ಅಸೋಸಿಯೇಶನ್ ವತಿಯಿಂದ ನಡೆಸಲಾದ ವಾರ್ಷಿಕ ಇಸ್ಲಾಮಿಕ್ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ ೫ರಂದು ಕುವೈತ್‌ನ ರಾವಾದ ಉಮರ್ ಬಿನ್ ಖುತ್ತಾಬ್ ಸಭಾಭವನದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ೮೬ ಮಂದಿ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಉದ್ಘಾಟನಾ ಭಾಷಣ ಮಾಡಿದ ಡಾ. ಅಹ್ಮದ್ ಹುಸೈನ್ ಗಾಝಿ ಮಾತನಾಡಿ, ಇಸ್ಲಾಮಿ ಮತ್ತು ಶೈಕ್ಷಣಿಕ ಅಧ್ಯಯನಗಳಲ್ಲಿ ಮಕ್ಕಳು ಉತ್ಕೃಷ್ಟ ಸಾಧನೆ ಮಾಡಲು ಪೋಷಕರು ಮಹತ್ವದ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಕುವೈತ್‌ನಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಸಾಮುದಾಯಿಕ ವ್ಯವಹಾರಗಳ ಸಮಾ ಲೋಚಕ ಕೆ. ನರಸಿಂಗರಾವ್ ಮಾತನಾಡಿ ಐಎಂಡಬ್ಲ್ಯುಎಯ ಚಟುವಟಿಕೆಗಳನ್ನು ಶ್ಲಾಸಿದರು.
ಇಂಡಿಯನ್ ಮುಸ್ಲಿಂ ಅಸೋಸಿಯೇಶನ್‌ನ ಅಧ್ಯಕ್ಷ (ಎ-ಐಎಂಎ) ಸಿದ್ದಿಕ್ ವಲಿಯಾಕಾತ್ ಕುವೈತ್‌ನಲ್ಲಿ ಭಾರತೀಯ ಮುಸ್ಲಿಂ ಸಮುದಾಯದಲ್ಲಿರುವ ಪ್ರತಿಭೆಗಳಿಗೆ ಐಎಂಡಬ್ಲ್ಯುಎ ಪ್ರೋತ್ಸಾಹ ನೀಡುತ್ತಿರುವುದನ್ನು ಪ್ರಶಂಸಿಸಿದರು.
ಸ್ಥಳೀಯ ಇಂಡಿಯಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿನಿಯರು ಸಮೂಹ ಗೀತೆ ಹಾಡಿದರು.
ಐಎಂಡಬ್ಲ್ಯುಎನ ಜಂಟಿ ಖಜಾಂಚಿ ಡಾ. ಮುಹಮ್ಮದ್ ನಈಮುದ್ದೀನ್ ಧನ್ಯವಾದ ಅರ್ಪಿಸಿ ದರು.ಮುನಝಾ ಶರಪುದ್ದೀನ್ ಹಾಗೂ ಫರ್‌ಹೀನ್ ಸಬಾ ಜಂಟಿಯಾಗಿ ಕಾರ್ಯಕ್ರಮ ಆಯೋ ಜಿಸಿದರು. ಪವಿತ್ರ ಕುರ್‌ಆನ್‌ನ ಸೂಕ್ತಿಗಳ ಪಠಣದ
ಬಳಿಕ ಇಂಡಿಯಾ ಇಂಟರ್ ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿಗಳ ತಂಡವು ಭಾರತದ ರಾಷ್ಟ್ರ ಗೀತೆ ಹಾಗೂ ಕುವೈತ್‌ನ ರಾಷ್ಟ್ರಗೀತೆಗಳನ್ನು ಹಾಡಿದರು.
ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಈ ಸಲದ ಸ್ಪರ್ಧಾಕೂಟದಲ್ಲಿ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ೧೪ ದೇಶಗಳ ಸುಮಾರು ೪೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-09 00:00:00
|
|
|