ಮು೦ಬಯಿ: ಬಾಳ್ ಠಾಕ್ರೆ ಅವರನ್ನು ಭೇಟಿಯಾದ ಕೇ೦ದ್ರ ಸಚಿವ ಶರದ್ ಪವಾರ್' |
ಪ್ರಕಟಿಸಿದ ದಿನಾಂಕ : 2010-02-09
ಮುಂಬಯಿ, ಫೆ.೮: ಐಪಿಎಲ್‌ನಲ್ಲಿ ಆಸ್ಟ್ರೇಲಿಯಾ ಆಟಗಾರರು ಭಾಗವಹಿಸುವ ವಿರುದ್ಧದ ಬೆದರಿಕೆ ಹಿಂದೆಗೆದುಕೊಳ್ಳುವಂತೆ ವಿನಂತಿಸಲು ಕೇಂದ್ರ ಸಚಿವ ಶರದ್ ಪವಾರ್ ಅವರು ಶಿವಸೇನಾ ಪ್ರಮುಖ ಬಾಳ್ ಠಾಕ್ರೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಬೆಳವಣಿಗೆ ದುರದೃಷ್ಟಕರ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಬಣ್ಣಿಸಿದೆ.
ಇಂತಹ ಕ್ರಮಗಳಿಂದಾಗಿ `ಹೆಚ್ಚಿನ ಸಂವಿಧಾನಾತ್ಮಕ ಅಥಾರಿಟಿಗಳ' ನೈತಿಕತೆ ಮಾತ್ರ ಹೆಚ್ಚಾಗುತ್ತದೆ. ಇದೊಂದು ದುರದೃಷ್ಟಕರ ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಹುಸೈನ್ ದಳವಾಯಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಶಾಂತವಾಗಿ ಐಪಿಎಲ್ ಪಂದ್ಯಗಳು ನಡೆಯುವಂತಾಗಲು ತನ್ನದೇ ಪಕ್ಷದ ಗೃಹ ಸಚಿವ ಆರ್.ಆರ್.ಪಾಟೀಲ್ ಮೇಲೆ ಶರದ್ ಪವಾರ್‌ಗೆ ವಿಶ್ವಾಸವಿಲ್ಲವೇ ಎಂದೂ ದಳವಾಯಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್‍ಯದರ್ಶಿ ರಾಹುಲ್ ಗಾಂಧಿ ಕಳೆದವಾರ ಮುಂಬಯಿ ಭೇಟಿಯನ್ನು ಯಶಸ್ವಿಯಾಗಿ ಪೂರೈಸಿರುವುದು ಸರ್ಕಾರ ವಿನಾಶಕಾರಿ ಶಕ್ತಿಗಳನ್ನು ಮಟ್ಟಹಾಕಲು ಬದ್ಧವಾಗಿದೆ ಎನ್ನುವುದು ತೋರಿಸಿಕೊಟ್ಟಿದೆ ಎಂದರು.
ಕಾಂಗ್ರೆಸ್ ಮೂಲೆಗೆ ತಳ್ಳಲು ಯತ್ನಿಸಿದಾಗೆಲ್ಲ ಪವಾರ್ ಶಿವಸೇನೆಯ ನೆರವು ಪಡೆಯುತ್ತಿದ್ದರು. ಈ ಬಾರಿ ಕೂಡ ಕಾಂಗ್ರೆಸ್ ಪಕ್ಷವನ್ನು ಬ್ಲ್ಯಾಕ್‌ಮೈಲ್ ಮಾಡುವ ಉದ್ದೇಶದಲ್ಲಿ ಠಾಕ್ರೆಯನ್ನು ಭೇಟಿಯಾಗಿದ್ದಾರೆ ಎಂದು ಬಿಜೆಪಿ ವಕ್ತಾರ ಮಾಧವ ಭಂಡಾರಿ ಪ್ರತಿಕ್ರಿಯಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ರೋನ್ಸ್ ಬ೦ಟ್ವಾಳ್ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-09
|
|
| ಬದ್ರುದ್ದೀನ್ ಹೆಂತಾರ್, ದುಬೈ | 2010-02-09 | | ಸಾರ್ವಭೌಮತೆಯನ್ನು ಠಾಕ್ರೆ ಪಾದ ಕಮಲಕ್ಕೆ ಅರ್ಪಿಸಿದ ಶರದ್ ಪವಾರ್ ಓರ್ವ ನಿಷ್ಟಾವಂತ ರಾಜಕಾರಣಿಯಲ್ಲ ಎಂದು ಮಗದೊಮ್ಮೆ ಸಾಬೀತು ಪಡಿಸಿದ್ದು ತುಂಬಾ ಹಾಸ್ಯಾಸ್ಪದ.
ಭಾರತ ದೇಶದ ಸಂವಿದಾನದ ತತ್ವವನ್ನು (ನ್ಯಾಯ,ಸಮಾನತೆ,ಸ್ವಾತಂತ್ರ್ಯ,ಸಹೋದರತೆ)ಗಾಳಿಗೆ ತೂರಿ ೧೯೯೨-೯೩ ರ ಮುಂಬೈ ಗಲಭೆಗೆ ಕಾರಣಕರ್ತರಾದ ಹಾಗೂ ವಿಷಪೂರಿತ ಮಾತುಗಳಿಂದ ಸಹೋದರತೆಯನ್ನು ನಿರ್ಣಾಮ ಮಾಡಿದ ಓರ್ವ ವ್ಯಕ್ತಿಯ ಅಭಯಕ್ಕೆ ಅಂಗಲಾಚಿದ ಜನರ ಪ್ರತಿನಿಧಿ ಆ ಹುದ್ದೆಯಲ್ಲಿ ಮುಂದುವರಿಯುವುದು ಭಾರತ ಮಾತೆಗೆ ಮಾಡುವ ಮಹಾ ದ್ರೋಹವಾಗಿರುತ್ತದೆ. ಪವಾರ್ ರನ್ನು ತನ್ನ ಹುದ್ದೆಯಲ್ಲಿ ಇನ್ನು ಮುಂದವರಿಯಲು ಕಾಂಗ್ರೆಸ್ ಅನುಮತಿ ನೀಡದೆ ತಕ್ಷಣ ಹೊರಹಾಕಬೇಕು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಕಳುಹಿಸಲಾಗಿದೆ ಎಂಬ ನಿಜಾಂಶ ಬಹಿರಂಗಗೊಳಿಸಬೇಕು |
|