ಮಂಗಳೂರು: ಸಿಡಿಪಿ ಗೆ ತಿದ್ದುಪಡಿ ತರುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮನಾಪ ಎದುರು ಪ್ರತಿಭಟನೆ. |
ಪ್ರಕಟಿಸಿದ ದಿನಾಂಕ : 2010-02-08
(ವಿಶೇಷ ವರದಿ ಹಾಗೂ ಚಿತ್ರ: ಸತೀಶ್ ಕಾಪಿಕಾಡ್)
ಮಂಗಳೂರು,ಫೆ.೦೮: ಮಂಗಳೂರು ಮಹಾನಗರ ಪಾಲಿಕೆ ಪರಿಷ್ಕ್ರತ ಮಹಾಯೋಜನೆ(ಸಿ.ಡಿ.ಪಿ) ಗೆ ತಿದ್ದುಪಡಿ ತರಬೇಕೆಂದು ಅಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮ.ನ.ಪಾ ಕಚೇರಿ ಎದುರು ಇಂದು ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ರಮನಾಥ್ ರೈ ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.
ಸಿ.ಡಿ.ಪಿಯಿಂದ ಬಡ ಹಾಗೂ ಮದ್ಯಮ ವರ್ಗಗಳ ಜನರಿಗೆ ತುಂಬ ತೊಂದರೆಯಾಗುತ್ತಿದ್ದು, ಮನೆ ನಿರ್ಮಾಣಕ್ಕೆ ಕಷ್ಟ ಸಾದ್ಯವಾಗಿದೆ. ಈ ಯೋಜನೆಯಲ್ಲಿ ಬಿಲ್ಡರ್ ಮಾಫಿಯಗಳ ಕೈವಾಡವಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರು ತಕ್ಷಣ ಈ ಯೋಜನೆ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಮೇಯರ್ ಹಾಗೂ ಅಯುಕ್ತರ ಕೊಠಡಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರುಣ್ ಕುವೆಲ್ಲೋ, ಮಮತ ಗಟ್ಟಿ, ಸದಾಶಿವ ಉಳ್ಳಾಲ್, ಟಿ.ಕೆ.ಸುಧೀರ್, ರಮಾನಾಥ್ ರೈ, ವಿಜಯ್ ಕುಮಾರ್ ಶೆಟ್ಟಿ, ಹರಿನಾಥ್, ಶಶಿಧರ್ ಹೆಗ್ಡೆ, ಅಶ್ರಫ್, ಕ್ರಷ್ಣಪ್ಪ ಮೆಂಡನ್, ಎಂ.ಮಸೂದ್, ಪುರಂದರ ದಾಸ್, ಹರಿಕ್ರಷ್ಣ ಬಂಟ್ವಾಳ, ಇಬ್ರಾಹಿಂ,ಕೊಡಿಜಾಲ್, ಸದಾನಂದ ಪೂಂಜಾ ಮೊದಲಾದ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಕಾಂಗ್ರೆಸ್ ನಿಯೋಗವು ಮನಾಪ ಅಯುಕ್ತರಿಗೆ ಈ ಬಗ್ಗೆ ಮನವಿ ನೀಡಿದರು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-08
|
|
|