ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಬಿ‌ಎಸ್‌ಕೆಬಿ‌ಎ ಪ್ರಾಯೋಜಕತ್ವದ ಆಶ್ರಯದಲ್ಲಿ ಭಾವೈಕ್ಯತೆಯ ಸಹಮಿಲನ ಆಶ್ರಯವು ಸಮಗ್ರ ಜನತೆಗೆ ಆಸರೆ ನೀಡಬಲ್ಲ ವಿಶ್ವಪ್ರಿಯ ತಾಣವಾಗಲಿ : ನ್ಯಾ| ರೋಹಿಣಿ ಸಾಲ್ಯಾನ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಜಾತಿ-ಧರ್ಮ-ಮತ-ಪಂಥ-ಧರ್ಮ ಬರೇ ಮಾನವ ರೂಪಿಸಿದ ಸ್ವಾರ್ಥದ ಹಾದಿಯಾಗಿದ್ದು, ಇದು ಸರ್ವ ಧರ್ಮ ಸಮನ್ವಯತೆಯ ಬಾಳಿಗೆ ಅಡ್ಡಿಯಾಗದಿರಲಿ. ಬದಲಾಗಿ ಬ್ರಹ್ಮಶ್ರೀ ನಾರಾಯಣ ಗುರುವಿನ ಯುಕ್ತಿಯನುಸಾರ ರೂಪುಗೊಂಡ ಈ ಆಶ್ರಯ ಸಮಗ್ರ ಜನತೆಗೆ ಮಾರ್ಗದರ್ಶನ ನೀಡಬಲ್ಲ ಯೋಜನೆಯಾಗಲಿ. ಆಶ್ರಯ ತಾಣವು ಸುಖೋಷ್ಣತೆ ಭಾವನೆಯ ಕೇಂದ್ರವಾಗಿದ್ದು, ಜೀವನದ ಸಂಧ್ಯಾ ಕಾಲ ಕಳೆಯಲು ಸೂಕ್ತ ಇದು ಭವನ, ನನ್ನ ಮಾತಾಪಿತರ ಅಂದಿನ ಜೀವನ ವನ್ನು ಸದಾ ನೆನಪಿಸುತ್ತಾ, ಇವೆಲ್ಲಕ್ಕೂ ಇಂತಹ ಯೋಜನೆ ವರವಾಗಲಿ ಎಂದು ಮಹರಾಷ್ಟ್ರ ರಾಜ್ಯ ಸರಕಾರಿ ಪ್ರಾಸಿಕ್ಯೂಟರ್ ನ್ಯಾ| ರೋಹಿಣಿ ಜೆ.ಸಾಲ್ಯಾನ್ ನುಡಿದರು.

ಮುಂಬಯಿ ಮಹಾನಗರದಲ್ಲಿ ಹಲವಾರು ದಶಕಗಳಿಂದ ಸೇವಾ ನಿರತ ಕರ್ನಾಟಕ ಕರಾವಳಿ ಪ್ರಾಂತ್ಯದ ಬ್ರಾಹ್ಮಣ ಸಮೂದಾಯದ ಪ್ರತಿಷ್ಠಿತ ಸಂಸ್ಥೆ ಬಿ‌ಎಸ್‌ಕೆಬಿ ಎಸೋಸಿಯೇಶನ್ (ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್ಸ್ ಎಸೋಸಿಯೇಶನ್) ಮತ್ತು ಗೋಪಾಲಕ್ರಷ್ಣ ಪಬ್ಲಿಕ್ ಟ್ರಸ್ಟ್ ಇವುಗಳ ಸಂಚಾಲಕತ್ವದಲ್ಲಿ ಉಪನಗರ ನವಿ ಮುಂಬಯಿಯ ನೆರೂಳ್ ಇಲ್ಲಿನ ಸೆಕ್ಟರ್-೧೯ರಲ್ಲಿ ಸ್ಥಾಪಿಸಲ್ಪಟ್ಟ ವಯೋವೃದ್ಧರ ಮುದಿ ಜೀವಕ್ಕೆ ಸಾಂತ್ವನ ತುಂಬುವ ನೆಮ್ಮದಿಯ ತಾಣ ಮತ್ತು ಹಿರಿಯರ ನೆಮ್ಮದಿಯ ಬಾಳಸಂಜೆಗೊಂದು ಆಧಾರಕೇಂದ್ರ ಎಂದೇ ಕರೆಯಲ್ಪಡುವ ಆಶ್ರಯದ ಸಭಾಗೃಗದಲ್ಲಿ ಕಳೆದ (೦೬.೦೨.೨೦೧೦) ಶನಿವಾರ ಅಪರಾಹ್ನ ವೈಶಿಷ್ಟ್ಯಮಯವಾದ ಕಾರ್ಯ ಕ್ರವಾಗಿ 'ಭಾವೈಕ್ಯತೆಯ ಸಹಮಿಲನವನ್ನು ಆಯೋಜಿದ್ದು, ನ್ಯಾ| ರೋಹಿಣಿ ಸಾಲ್ಯಾನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಮಾತನಾಡಿದರು.

ಬಿ.ಎಸ್.ಕೆ.ಬಿ ಎಸೋಸಿಯೇಶನ್‌ನ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲ್ ಇವರು ಸಮಾ ರಂಭದ ಅಧ್ಯಕ್ಷತೆಯನ್ನು ವಹಿಸಿದ್ದು, ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ದೇವಾಡಿಗರ ಸಂಘ ಮುಂಬಯಿ ಇದರ ನಿಕಟಪೂರ್ವ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಶಾಫಿ ಬ್ಯಾರಿ ವೆಲ್ಫೇರ್ ಎಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷ ನ್ಯಾ| ಬಿ.ಮೊಹಿದ್ಧೀನ್ ಮುಂಡ್ಕೂರು, ಭಂಡಾರಿ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಬಾಲಕ್ರಷ್ಣ ಪಿ.ಭಂಡಾರಿ, ಹೆಚ್‌ಡಿ‌ಎಫ್‌ಸಿ ಬ್ಯಾಂಕ್‌ನ ಪ್ರಧಾನ ಪ್ರಬಂಧಕ ದಿಲೀಪ್ ಶೆಟ್ಟಿ, ಗೋದ್ರೇಜ್ ಸಂಸ್ಥೆಯ ಉನ್ನತಾಧಿಕಾರಿ ಸೋಮನಾಥನ್, ಬಂಟರ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಡಾ| ಪದ್ಮನಾಭ ವಿ. ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಆಸೀನರಾಗಿದ್ದರು.

ಸಾಮರಸ್ಯದ ಬಾಳಿಗೆ ಮುಂಬಯಿಯಲ್ಲಿ ಉತ್ತಮವಾದ ವಾತಾವರಣ ಇದೆ. ನಮ್ಮೂರ ಜನತೆ ಯ ಸಾಂಘಿಕ ಬದುಕು ಇದಕ್ಕೆ ಉದಾಹರಣೆಯಾಗಿದ್ದು, ತವರೂರ ದೈವ-ದೇವರುಗಳ ಅನುಗ್ರಹ ಇದಕ್ಕೆ ವರವಾಗಿದೆ. ನನಗೆ ಮತ್ತು ಬಿ‌ಎಸ್‌ಕೆಬಿ ಸಂಸ್ಥೆಗೆ ಅವಿನಾಭಾವ ಸಂಭದವಿದೆ. ನಾನು ಬಂಟನಾಗಿದ್ದು, ಅವರು ಬ್ರಾಹ್ಮೀಣರು ಆಗಿರಬಹುದು. ಆದರೆ ನಮಗೆ ತಾಯಿ ಮಾತ್ರ ಒಬ್ಬಳೇ ಕಟೀಲಶ್ವರಿ ಆಗಿದ್ದಾರೆ.

ಹಿರಿಯ ನಾಗರಿಕರನ್ನು ಗೌರವದಿಂದ ಕಾಣುವ ಪಾವಿತ್ರ್ಯತೆಯ ಕಾಯಕಕ್ಕೆ ವಾತಾವರಣ ಸೃಷ್ಠಿಸಿದ ಈ ಸಂಸ್ಥೆಯ ನಿಜವಾಗಿಯೂ ಸಮಾಂಜಸ ಮತ್ತು ಅನುಕರಣೀಯವಾಗಿದೆ. ಆಶ್ರಯ ಯೋಜನೆ ೧೦೦% ಶತ ಫಲಧಿತ. ಇಲ್ಲಿ ಎನೂ ಕಡಿಮೆ ಇಲ್ಲದ ವ್ಯವಸ್ಥೆ ಮುಕ್ತ ಕಾಣಲು ಸಿಗುತ್ತಿ ದ್ದು, ನೋಡಲು ಬಂದವರಿಗೆ ತಂಗುವ ಬಯಕೆ ಇಲ್ಲಿ ನಿರ್ಮಾಣಗೊಂಡಿದೆ ಎಂದು ಐಕಳ ಹರೀಶ್ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ನ್ಯಾ| ಮೊಹಿದ್ದೀನ್ ಮಾತನಾಡಿ ಈ ಆಶ್ರಯಯದ ಕಟ್ಟಡ ಕೇವಲ ಸಿಮೆಂಟ್ ಮತ್ತು ಕಲ್ಲುಗಳ ಜೋಡಣೆಯಿಂದ ನಿರ್ಮಾಣ ಆಗಿಲ್ಲ. ಇದು ಪ್ರೀತಿ ಮತ್ತು ಮಮತೆಯಿಂದ ನಿರ್ಮಾಣಗೊಂಡ ಪುಣ್ಯ ಕಟ್ಟಿಕೊಳ್ಳುವ ತಾಣವಾಗಿದೆ. ಇದು ಮಾನವೀಯತೆಯನ್ನು ಮೆರೆಯುವ ಅತೀ ದೊಡ್ಡ ಸಾಧನೆ ಆಗಿದೆ. ನಮ್ಮ ಪವಿತ್ರ ಕುರಾನ್ ನುಡಿಯಂತೆ ಈ ಭವನ ಸಿದ್ಧಗೊಂಡಂತಿದೆ. ಜಾತಿ-ಮತ-ಧರ್ಮವನ್ನು ಬದಿಗಿರಿಸಿ ಮಾನವೀಯತೆಯ ಮೌಲ್ಯಕ್ಕೆ ಸ್ಪಂದಿಸಿ ವಯೋವೃದ್ಧರಿಗೆ ಬದುಕು ರೂಪಿಸುವ ಈ ಯೋಜನೆ ಎಲ್ಲರಿಗೂ ಮಾದರಿಯಾಗಲಿ ಎಂದರು.

ಮಹಾನಗರಿಯಲ್ಲಿನ ನೂರಾರು ಹಿರಿಯ ನಾಗರಿಕರು ಉತ್ತಮ ವಾತಾವರಣ ಹರಸಿ ಕೊಯ ಮುತ್ತೂರು ಮತ್ತಿತರ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆಶ್ರಯದಂಥ ಕೇಂದ್ರಗಳಲ್ಲಿ ದಿನ ನಿತ್ಯದ ಸೇವಾಧಿಗಳಿಗೆ ಉತ್ತಮ ತರಬೇತಿ ನೀಡಿ ಹಿರಿಯ ನಾಗರಿಕರಿಗೆ ತಾಳ್ಮೆಯಿಂದ ಕಾಣುವು ದನ್ನು ಕಲಿಸುವುದು ಅತ್ಯವತ್ಯ, ವಯೋವೃದ್ಧರಿಗೆ ಅಥವಾ ಅವರ ಮಕ್ಕಳಿಗೆ ಹಣ ಮುಖ್ಯವಾಗಿ ಭಾದಿಸುವುದಿಲ್ಲ. ಎಲ್ಲರಿಗೂ ಸಹಿಷ್ಣುತೆಯಿ೦ದ ಕಾಣುವ ಸದ್ಗುಣಗಳ ಸೇವೆ ಅಗತ್ಯ ವಾಗಿರುತ್ತದೆ ಎಂದು ಸೋಮನಾಥನ್ ತಿಳಿಸಿದರು.

ಧರ್ಮಪಾಲ್ ದೇವಾಡಿಗ ಮಾತನಾಡಿ ಈ ಆಶ್ರಯ ಎಂದರೆ ಎಲ್ಲರ ಮನೆ ಇದ್ದಹಾಗೆ. ಇಲ್ಲಿ ಭಾರತಾಂಭೆಯ ಮಕ್ಕಳಿಗೆಲ್ಲರಿಗೂ ಒಂದೇ ಸೂರು ಕಾಣಸಿಗುತ್ತದೆ. ಸ್ನೇಹಮಯಿ ಜೀವನದ ಒಳ್ಳೆಯ ಸಂಸ್ಕೃತಿ ಇಲ್ಲಿ ಸೃಷ್ಟಿಸಿದ್ದಾರೆ. ರಾಷ್ಟ್ರದ ಸರ್ವಂಗೀಣ ಭವಿಷ್ಯಕ್ಕೆ ಇದು ಉತ್ತಮ ಯೋಜನೆಯಾಗಿದೆ. ಭವಿಷ್ಯತ್ತಿನ ಪೀಳಿಗೆಗೆ ಆದರಣೀಯವೂ ಹೌದು ಎಂದರು.

ಮಾನವೀಯತೆಯ ಭದ್ರತೆ ಪ್ರಸಕ್ತ ಜನತೆಯ ಆಶಯವಾಗಿದ್ದು, ಈ ಯೋಜನೆಯನ್ನು ಅಳತೆಗೈ ಯಲು ಮಾಪಣವೇ ಇಲ್ಲದಂತಿದೆ. ಇಂತಹ ಯೋಜನೆಯ ಮುಖೇನ ಹಿರಿಯ ನಾಗರಿಕರಿಕರನ್ನು ಪ್ರೀತಿಸುವ ಸದ್ಗುಣಗಳನ್ನು ಪ್ರಸಕ್ತ ಪೀಳಿಗೆಯ ಮಕ್ಕಳಲ್ಲಿ ಬೋಧಿಸುವ ಪ್ರಯತ್ನ ನಡೆಯಬೇಕಾ ಗಿದೆ ಎಂದು ದಿಲೀಪ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಉಚ್ಚರಿಸಿದರು.

ಇಂದು ಇಲ್ಲಿ ಈ ಯೋಜನೆಯನ್ನು ಕಂಡು ನನಗೂ ನಾಳೆಯೇ ಇಲ್ಲಿ ಸೇರುವ ಆಕಾಂಕ್ಷೆ ಹುಟ್ಟಿದೆ. ಕಾರಣ ಇಲ್ಲಿನ ಶಾಂತತೆಯ ವಾತಾವರಣವಾಗಿದೆ. ಕರ್ಮಭೂಮಿಯ ಒತ್ತಡದ ಬದುಕಿನಿಂದ ಮುಕ್ತಿಯುತವಾಗಲು ಭಗವಂತನೇ ಸೃಷ್ಠಿಸಿದ ಆಶ್ರಯದಂತಿದೆ. ಭಾರತದಂತಹ ಏಕೈಕ ಪವಿತ್ರ ದೇಶದಲ್ಲಿ ಮಾತ್ರ ಇಂತಹ ಕೇಂದ್ರಗಳ ಸ್ಥಾಪನೆ ಸಾಧ್ಯ. ಇದೂ ದೇವರಿಗೆ ಅತೀ ಸಾಮೀಪ್ಯವುಳ್ಳ ಬ್ರಾಹ್ಮಣರ ಸಮೂದಾಯದಿಂದ ಕೊಡಲ್ಪಟ್ಟ ಕೊಡುಗೆಯಾಗಿದೆ. ಇಲ್ಲಿ ವಾಸಸುವ ೬೦ರ ಮುದುಕರೂ ೩೦ರ ಯುವಕರನ್ನು ಮೀರಿಸುವಂತಿದೆ. ಇದಕ್ಕೆಲ್ಲಾ ಇಲ್ಲಿನ ವಾತಾವರಣ ಕಾರಣ ವಾಗಿದ್ದು, ಇದು ನಮ್ಮ ದೇಶದ ಮೊದಲ ಯೋಜನೆ ಎಂದೆಣಿಸಿದ್ದೇನೆ ಎಂದು ಬಾಲಕ್ರಷ್ಣ ಭಂಡಾರಿ ತಿಳಿಸಿದರು.

ಬಿ.ಎಸ್.ಕೆ.ಬಿ.ಎ. ಸಂಸ್ಥೆಯು ತೆರೆಯ ಮರೆಯಲ್ಲಿದ್ದು ರೂಪಿಸಿದ ಈ ಯೋಜನೆ ಸಮಗ್ರ ಸಮೂ ದಾಯಗಳಿಗೆ ಮಾದರಿಯಾಗಿದೆ. ಬಿ.ಎಸ್.ಕೆ.ಬಿ.ಎ. ಸಂಸ್ಥೆಯ ಸದಸ್ಯರ ನಿರಂತರ ಸಹಕಾರ ಮತ್ತು ಶ್ರಮಭರಿತ ಕೆಲಸದಿಂದಾಗಿ ಸ್ವಾರ್ಥರಹಿತ ಉದ್ದೇಶ ಹೊಂದಿರುವ ಈ ಯೋಜನೆ ವಿಶ್ವದ ಜನತೆಗೆ ಅಮೂರ್ತ ಅನುತಾಪಕ್ಕೆ ಸಮಾನ ಎನ್ನುವಂತಹದ್ದು. ಸ್ವಾರ್ಥರಹಿತ ಉದ್ದೇಶ ಹೊಂದಿರುವ ಈ ಯೋಜನೆ ಸಂಸ್ಥೆಯ ಸದಸ್ಯರ ನಿರಂತರ ಶ್ರಮಭರಿತ ಕೆಲಸದ ಫಲವಾಗಿದೆ. ಇದರ ಲಾಭ ಭಾರತೀಯರಿಗೆ ಸಲ್ಲಲು ಸಂಸ್ಥೆಯು ಆಹ್ವಾನಿಸಿದ್ದು ಇದು ನಮ್ಮ ಭಾಗ್ಯವೇ ಸರಿ ಎಂದು ಡಾ| ಪಿ.ವಿ ಶೆಟ್ಟಿ ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ| ಸುರೇಶ್ ಎಸ್. ರಾವ್ ನೆರೆದ ಹಿತೈಷಿಗಳಿಗೆ-ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಗೆ ಪುಷ್ಪಗಳನ್ನಿತ್ತು ಗೌರವಿಸಿದರು. ಬಳಿಕ ಮಾತನಾಡಿದ ಡಾ| ಸುರೇಶ್ ರಾವ್ ಮಾತನಾಡಿ ಇಂದು ಮುಂಬಯಿ ಸೇರಿದಂತೆ ಇಡೀ ವಿಶ್ವದಲ್ಲೇ ಹಿರಿಯ ನಾಗರಿ ಕರ ಮೇಲೆ ಅನೇಕ ತರದ ಅತ್ಯಾಚಾರ-ಅನ್ಯಾಯಗಳು, ಹಿಂಸಾತ್ಮಕ ಅನಾಹುತಗಳು, ಕ್ರೈಮ್‌ ಗಳು ನಡೆಯುತ್ತಿವೆ. ದೇಶದ ರಕ್ಷಣೆಗೈದಂತಹ ವಯೋವೃದ್ಧರಿಗೆ ಕೂಡಾ ರಕ್ಷಣೆ ಇಲ್ಲದ ಯುಗ ಇದಾಗಿದೆ.

ಜೀವನವಿಡೀ ಶ್ರಮಿಸಿ ಆಯುಷ್ಯದ ಕೊನೆಯ ದಿನಗಳನ್ನಾದರೂ ನೆಮ್ಮದಿಯಿಂದ ಕಳೆಯುವ ಲೆಕ್ಕಾಚಾರ ಹಾಕುವ ದಂಪತಿವರ್ಯರಿಗೆ ಆಶಿಸಿರುವ ಲೆಕ್ಕಾಚಾರಗಳು ತಲೆಕೆಳಗಾಗಿ ಬದುಕುವ ಆಸೆಯಿಂದ ವಂಚಿತರಾಗುತ್ತಾರೆ. ಇಂತಹ ಸಾವಿರಾರು ನಿದರ್ಶನಗಳನ್ನು ಮುಂದಿಟ್ಟು ಇಂಥ ವಯೋವೃದ್ಧರಿಗೆ ಕನಿಷ್ಟ ಮುಸ್ಸಂಜೆಯ ಬಾಳನ್ನು ನೆಮ್ಮದಿಯಿಂದ ಕಳೆಯುವ ಸೇವೆಗೆ ನಾವು ಸಂಕಲ್ಪ ಕೈಗೊಂಡಿರುತ್ತೇವೆ.

ಜಾತಿ-ಮತ-ಧರ್ಮದ ತಾರತಮ್ಯವಿಲ್ಲದೆ ೬೦ ವರ್ಷಕ್ಕೆ ಮೇಲ್ಪಟ್ಟ ಯಾರಿಗೂ ಆಶ್ರಯದ ಬಾಗಿಲು ತೆರೆದಿದೆ. ಇದೀಗಲೇ ಸಂಪೂರ್ಣಗೊಂಡ ಮೂರು ಮಹಡಿಯ ಈ ಕಟ್ಟಡದಲ್ಲಿ ಬಾಳಿನ ಮುಸ್ಸಂಜೆಯನ್ನು ಕಳೆಯಲು ಅಗತ್ಯವಿರುವ ಎಲ್ಲಾ ಸುಖೋಷ್ಣತೆ ಮುಂತಾದ ಭಾವನೆಗಳು ಸಹಜವಾಗಿಯೇ ಈ ಪ್ರಮುಖ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಶ್ರಯ ಸೇವೆಗೆ ಸನ್ನ ದ್ಧಾಗಿದೆ. ತಮ್ಮೆಲ್ಲರ ಸಹಕಾರ-ಸಹಾಯಹಸ್ತ ನಮಗೆ ಪ್ರೇರಣೆ ಆಗಬೇಕಾಗಿದೆ ಎಂದು ಆಶ್ರಯ ಯೋಜನೆಯ ಮಾಹಿತಿಯನ್ನು ಸವಿಸ್ತಾರವಾಗಿ ಬಿಚ್ಚಿಟ್ಟು ನುಡಿದರು.

ವಿ‌ಶೇಷ ಆಮಂತ್ರಿತರಾಗಿ ಬಾಂಬೇ ಬಂಟ್ಸ್ ಎಸೋಸಿಯೇಶನ್ ಇದರ ಉಪಾಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ಜವಾಬ್‌ನ ಮಾಜಿ ಅಧ್ಯಕ್ಷ ಎನ್.ಸಿ.ಶೆಟ್ಟಿ, ಫೆಡರೇಶನ್ ಆಫ್ ಮುಂಬಯಿಸ್ ಕೆನರಾ ಕಾಥೋಲಿಕ್ ಎಸೋಸಿಯೇಶನ್ಸ್ ಅಧ್ಯಕ್ಷ ನೊರ್‍ಬಟ್ ಎಲ್.ಫೆರ್ನಾಂಡಿಸ್, ಕರ್ನಾಟಕ ವಿಶ್ವ ಕರ್ಮ ಎಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷ ಜಿ.ಟಿ.ಆಚಾರ್ಯ, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಗೌ| ಪ್ರಧಾನ ಕಾರ್ಯದರ್ಶಿ ಬಿ.ವಿ ರಾವ್, ಸಾಫಲ್ಯ ಸೇವಾ ಸಂಘ ಮುಂಬಯಿ ಇದರ ಗೌ| ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್ ಸಾಲ್ಯಾನ್, ಗೋಕುಲ ಮಾಸಿಕದ ಗೌ| ಸಂಪಾದಕ ವ್ಯಾಸರಾಯ ನಿಂಜೂರು, ಪ್ರೊ. ಡಿ.ಕೆ ಕುಂದರ್, ವಿಶ್ವ ನಾಥ್ ಯು.ಮಾಡಾ, ಎಂ.ಸುಬ್ರಹ್ಮಣ್ಯ ಶಾಸ್ತ್ರಿ, ವಸಂತ್ ಎ.ನಾಯ್ಕ್, ಬ್ಯಾಂಕ್ ಉದ್ಯಮಿಗಳಾದ ಎ.ನರಸಿಂಹ ರಾವ್, ಮಹೇಂದ್ರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದು, ಸಂಸ್ಥೆಯ ಪದಾಧಿಕಾರಿ ಗಳು ಆಶ್ರಯದ ಸರ್ವ ಸೌಲತ್ತುಗಳನ್ನು ಮತ್ತು ಯೋಜನೆಯ ಮಾಹಿತಿಯನ್ನು ಕ್ರಮವಾಗಿ ತಿಳಿಸಿದರು.

ಮಹಿಳಾ ವಿಭಾಗದ ಕಾರ್ಯಾದ್ಯಕ್ಷೆ ಶ್ರೀಮತಿ ಸುಮನ್ ಚಿಂಪ್ಲೂಣ್ಕರ್ ಸ್ವಾಗತಿಸಿದರು. ಕು| ಉಜ್ವಲಾ ಆಚಾರ್ಯ ಪ್ರಾರ್ತನೆಯನ್ನಾಡಿದರು. ಉಪಾಧ್ಯಕ್ಷ ಲಕ್ಷೀಶ್ ಆಚಾರ್ಯ ಪ್ರಾಸ್ತವಿಕ ನುಡಿಗಳನ್ನಾಡಿದರು. ಜತೆ ಕಾರ್ಯದರ್ಶಿ ಶ್ರೀಮತಿ ಚಿತ್ರಾ ಎ. ಮೇಲ್ಮನೆ ಕಾರ್ಯಕ್ರಮ ನಿರೂಪಿ ಸಿದರು. ಗೌ| ಕಾರ್ಯದರ್ಶಿ ಅನಂತ ಪಿ.ಕೆ. ಪೋತಿ, ಜತೆ ಕಾರ್ಯದರ್ಶಿಗಳಾದ ಪ್ರಶಾಂತ್ ಆರ್.ಹೆರ್ಲೆ, ಕ್ರಷ್ಣ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದು, ಮೇಲ್ವಿಚಾರಕಿ ಶ್ರೀಮತಿ ಚಂದ್ರಾವತಿ ಕೆ.ರಾವ್ ವಂದನಾರ್ಪಣೆಗೈದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರೋನ್ಸ್ ಬ೦ಟ್ವಾಳ್
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-08 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಮುಂಬೈ]

»ಚಿನ್ನ, ಬೆಳ್ಳಿ ಧಾರಣೆಯಲ್ಲಿ ತೀವ್ರ ಕುಸಿತ
»ಭಾರತ್ ಬ್ಯಾಂಕ್ ನ ಆಡಳಿತ-ನಿರ್ದೇಶಕರಾಗಿ ಚಂದ್ರಶೇಖರ್ ಆರ್. ಮೂಲ್ಕಿ ನೇಮಕ
»ಬಿ.ಎಸ್.ಕೆ.ಬಿ.ಸಂಸ್ಥೆಯ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ ನ ವತಿಯಿಂದ ಶ್ರೀ ಮಧ್ವ ನವಮಿ ಆಚರಣೆ
»‘ಆವಯ್ಚಿ ಆಶಾ’ ಕೊಂಕಣಿ ಕಥಾ ಪುಸ್ತಕ ಬಿಡುಗಡೆ ಮತ್ತು ಕೊಂಕಣಿ ಲೇಖಕ ರೋನ್ ಮಾಯ್ಕಲ್ ಅವರಿಗೆ ಸನ್ಮಾನ
»ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ 2012-15ರ ನೂತನ ಪದಾಧಿಕಾರಿಗಳ ಆಯ್ಕೆ
»‘ಅವಮಾನ’: ಕಾಂಗ್ರೆಸ್‌ಗೆ ಪ್ರಿಯಾ ದೂರು
»ಕಲ್ಲಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯೋಜನಾ ಬ್ರೊಶರ್ ಬಿಡುಗಡೆ
»ಮುಂಬಯಿ ಸಾಮರಸ್ಯ ಬದುಕಿನ ಪವಾಡಗಳ ಪುಣ್ಯಭೂಮಿ : ಹೆಚ್.ಡಿ ರೇವಣ್ಣ
»ಶೆಟ್ಟಿ ಟೀ ಹೌಸ್ ಮಾಲಕ ಸಂಜೀವ ಪಿ.ಶೆಟ್ಟಿ ನಿಧನ
»ಮುಂಬೈ: ಹುಡುಗಿಗೆ ಆ್ಯಸಿಡ್ ಎರಚಿದ ಆರೋಪಿಯ ಬಂಧನ
»ಸಲೀಂ ವಿರುದ್ಧದ ವಿಚಾರಣೆ ಮುಕ್ತಾಯಕ್ಕೆ ಸಿಬಿಐ ವಿರೋಧ
»ಕೆಸಿ‌ಎ ನಲಸೋಫರಾ ಸಂಸ್ಥೆಯಿಂದ 16ನೇ ವಾರ್ಷಿಕೋತ್ಸವ ಸಂಭ್ರಮ
»ಫೆ.11: ಖಾರ್ ಪೂರ್ವದ ಪಹೇಲ್ವಾನ್ ಚಾಳ್‌ನಲ್ಲಿ 45ನೇ ವಾರ್ಷಿಕ ಶನೀಶ್ವರ ಮಹಾಪೂಜೆ
»ಇಂದು ಅಸಲ್ಫಾದಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ದಂಪತಿ ಭೇಟಿ
»ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
»ವಡಲಾ ರಾಮ ಮಂದಿರದಲ್ಲಿ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂಭ್ರಮ
»ಹಿರಿಯ ಅಧಿಕಾರಿಯ ಕಿರುಕುಳ: ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಕಾನ್ಸ್‌ಟೇಬಲ್
»ಮಲಾಡ್ ಪೂರ್ವದ ರಾಯನ್ ಟಿವಿ ಸ್ಟೂಡಿಯೋದಲ್ಲಿ ಕನ್ನಡಿಗ ಪತ್ರಕರ್ತರ ಕಾರ್ಯಕ್ರಮ: ಬೃಹದಾದ ಕನಸು ಕಂಡು ಗೆಲ್ಲುವ ಛಲವನ್ನು ಮೈಗೂಡಿಸಿ : ಮೇಡಂ ಪಿಂಟೋ
»ರಾಷ್ಟ್ರದ ಕನ್ನಡ ಪತ್ರಿಕಾ ರಂಗದಲ್ಲಿ ಇತಿಹಾಸ ರೂಪಿಸಿದ ಕನ್ನಡ ಪತ್ರಿಕಾ ಪ್ರತಿನಿಧಿಗಳ ಸಮ್ಮೇಳನ: ಕಪಸಮ ಮುಂಬಯಿಯಲ್ಲಿ ಭಾಷಾ ಬೆಸೆಯುವ ಕೆಲಸ ಮಾಡುತ್ತಿದೆ: ಸಾಂಡ್‌ಭೋರ್
»ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಕ್ರೀಡೋತ್ಸವ-೨೦೧೨:ಕ್ರೀಡೆ ನಮ್ಮ ಬದುಕಿನ ಜೀವಾಳವಾಗಿದೆ : ಜಯ ಶೆಟ್ಟಿ
»ಜಯಕರ ಡಿ.ಪೂಜಾರಿ ಬರಹದ ‘ತುಳು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»ಉಗ್ರರಿಗೆ ನೆರವಾಗುತ್ತಿರುವ ನಕಲಿ ಸಿಮ್ ಕಾರ್ಡ್‌: ಮಹಾರಾಷ್ಟ್ರ ಎಟಿಎಸ್
»ಜ.28: ದೇವಾಡಿಗ ಸೆಂಟರ್‌ನಲ್ಲಿ ‘ತುಲು ಲಿಪಿ ತೆರಿಲೆ’ ಪುಸ್ತಕ ಬಿಡುಗಡೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್ ಮಾನೆ ಪೊಲೀಸ್ ವಶಕ್ಕೆ
»ಖೋಜಾಗಳಿಗೂ ಸಮಾನ ಹಕ್ಕುಗಳಿವೆ: ಬಾಂಬೆ ಹೈಕೋರ್ಟ್
»ಪುಣೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ದೇವಾಡಿಗ ಸಂಘ: ಅಧ್ಯಕ್ಷರಾಗಿ ಪ್ರಭಾಕರ ಜಿ. ದೇವಾಡಿಗ ಆಯ್ಕೆ
»9 ಜನರ ಪಾಲಿಗೆ ಯಮಸ್ವರೂಪಿಯಾದ ಸರಕಾರಿ ಬಸ್ ಡ್ರೈವರ್
»ಧರ್ಮಪಾಲ ಯು. ದೇವಾಡಿಗರಿಗೆ ಕುವೆಂಪು ವಿಶ್ವ ಮಾನವ ಅಂತರಾಷ್ಟ್ರೀಯ ಪ್ರಶಸ್ತಿ
»ಸಂಚಾರ ಸಾಗರ ಮತ್ತು ಮಿಲೇನಿಯಂ ಸೂರ್ಯ ಕೃತಿ ಬಿಡುಗಡೆ
»ಉತ್ತರ ಪ್ರದೇಶ ಚುನಾವಣೆಗೆ ಸ್ಪರ್ಧಿಸಲಿರುವ ಮಾಲೆಗಾಂವ್ ಸ್ಫೋಟ ಆರೋಪಿ
»ಅಖಿಲ ಭಾರತ ಕನ್ನಡ ಪತ್ರಿಕಾ ಸಂಘಟನೆಗಳ ಪ್ರತಿನಿಧಿಗಳ ಮಹಾ ಸಹಮಿಲನ-ಸಂವಾದ ಕಾರ್ಯಕ್ರಮ
»ಯುಪಿ, ಬಿಹಾರ್ ಭಯೋತ್ಪಾದನೆಯ ಕೇಂದ್ರಗಳು: ರಾಜ್ ಠಾಕ್ರೆ
»ಜ.26 ರಿಂದ ಚೆಂಬೂರು ಕರ್ನಾಟಕ ಸಂಘದ ಸರಣಿ ಕಾರ್ಯಕ್ರಮಗಳು
»ಮಾಹೆ ಮಾಜಿ ಉಪಕುಲಪತಿ ಪದ್ಮಭೂಷಣ ಡಾ|ಬಿ.ಎಂ.ಹೆಗ್ಡೆಗೆ ಚೆಂಬೂರು ಕರ್ನಾಟಕ ಸಂಘದ ಚೊಚ್ಚಲ ರಾಷ್ಟ್ರೀಯ ಕನ್ನಡ ರತ್ನ ಪ್ರಶಸ್ತಿ
»ಮುಂಬೈ ತ್ರಿವಳಿ ಸ್ಫೋಟ: ಇಬ್ಬರು ಬಂಧನ | ತಪ್ಪು ವ್ಯಕ್ತಿಗಳ ಬಂಧನ:ಗೃಹ ಸಚಿವಾಲಯ
»ಗತ ವೈಭವದೊಂದಿಗೆ ದಶಮಾನೋತ್ಸವ ಸಂಭ್ರಮಿಸಿದ ಬಿಲ್ಲವರ ಜಾಗೃತಿ ಬಳಗ: ಯುವ ಶಕ್ತಿಯ ಪ್ರೋತ್ಸಾಹದಿಂದಲೇ ಜನಾಂಗೀಯ ಪ್ರಗತಿ: ಸುಚಿತ್ ಕುಮಾರ್
»ಪ್ರಜ್ಞಾ ಸಿಂಗ್‌ಗೆ ವಿಮಾನ, ಹವಾನಿಯಂತ್ರಿತ ರೈಲು ಪ್ರಯಾಣಕ್ಕೆ ಅನುಮತಿ ನಿರಾಕರಿಸಿದ ನ್ಯಾಯಾಲಯ
»ಬಂಟರ ಸಂಘ ಮುಂಬಯಿ ವಾರ್ಷಿಕ ಕ್ರೀಡೋತ್ಸವ -2012
»ಭಾಂಡೂಪ್‌ನ ನಿತ್ಯಾನಂದ ಮಂದಿರದಲ್ಲಿ ಜರುಗಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಬ್ರಹ್ಮ ಕ್ಷೇತ್ರದ ಮುಂಬಯಿ ಸಮಿತಿಯ ಸಭೆ
»54ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಸಾಂತಾಕ್ರೂಜ್ ಕನ್ನಡ ಸಂಘ
»ಹಝಾರೆ ತಂಡದ ಅಭಿಯಾನದಲ್ಲಿ ಗಾಂಧಿವಾದವಿಲ್ಲ: ಅರುಂಧತಿ ರಾಯ್
»ಅಣ್ಣಾ ತಂಡದಿಂದ ಗಾಂಧಿವಾದ ವಿರೋಧಿ ವರ್ತನೆ: ಅರುಂಧತಿ
»ತಾ.21 ರ ರೋನ್ಸ್ ರವರ ಚಿತ್ರವರದಿಗಳು
»ಎಂಎಂಆರ್‌ಡಿಎ ವತಿಯಿಂದ ಶೀಘ್ರದಲ್ಲಿ ಸಂಚರಿಸಲಿದೆ ದೇಶದ ಪ್ರಪ್ರಥಮ ಮೊನೋ ರೈಲು
»ಕೊಂಕಣಿ ಭಾಷಾ ಮಂಡಳಿ ಮಹಾರಾಷ್ಟ್ರ ಇದರ ಕಮಿಟಿ ಸದಸ್ಯರ ಅಯ್ಕೆ
»ಕರ್ನಾಟಕ ಸಂಘ ಭಾಂಡೂಪ್ ಮತ್ತು ಮುಂಬಯಿ ತುಳು ಕನ್ನಡಿಗರ ವತಿಯಿಂದ ಲೋನಾವಲದ ಕಾರ್ಪೋರೇಟಗಳಿಗೆ ಸತ್ಕಾರ ಸಮಾರಂಭ
»ಸಿಂಡಿಕೇಟ್ ಟ್ರಾವೆಲ್ಸ್‌ನ ಶ್ರೀಮತಿ ಸುನೀತಾ ಆರ್.ಶೆಟ್ಟಿ ನಿಧನ
»ಏಳು ಮಹಡಿಯಿಂದ ಕೆಳಗೆ ಬಿದ್ದರೂ ಜೀವಂತವಾಗಿ ಉಳಿದ ಬಾಲಕಿ!
»ಅಜ್ಜಿಗಾಗಿ ಒಬ್ಬಳೇ ಮುಂಬೈ ನಗರ ಸುತ್ತಾಡಿದ 5ರ ಪೋರಿ
»ಗೋಪಿನಾಥ ಮುಂಢೆ ಹಿರಿಯಣ್ಣ ಪಂಡಿತಣ್ಣ ಮುಂಢೆ ಎನ್‌ಸಿಪಿಗೆ ಪಕ್ಷಾಂತರ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri