ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ಬಿ‌ಎಸ್‌ವೈ ಸಂಬಂಧಿ ಅಲ್ಲ, ಆರೋಪಗಳೆಲ್ಲ ಸುಳ್ಳು: ಬನ್ನೂರುಮಠ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕಲೆಯಲ್ಲೇ ನೆಲೆ ಕಂಡ ಕೆಲವೇ ಕಲಾವಿದರ ಪಟ್ಟಿಯಲ್ಲಿ ಅಗ್ರಪಂಕ್ತಿಯ ಹೆಸರು ಶಶಿಕಾಂತ ಶೆಟ್ಟಿ ಕಾರ್ಕಳ!

ಕರಾವಳಿ ಕರ್ನಾಟಕದ ಅಸ್ಮಿತೆಯಾಗಿ ದೇಶ - ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಯಕ್ಷಗಾನ ಕಲೆಗೆ ಸಮರ್ಪಣಗೊಂಡ ಹಲವಾರು ಹಿರಿತಲೆಮಾರುಗಳ ಕೊಂಡಿಗಳನೇಕ ಕಳಚುತ್ತಾ ಹೋಗು ತ್ತಿರುವಂತೆ ಯಕ್ಷ ಪ್ರೇಮಿಗಳಲ್ಲಿ ಆತಂಕದ ಛಾಯೆ. ಅದಕ್ಕೆ ಕಾರಣವೆಂದರೆ ಈಗಾಗಲೇ ಜಾಗತೀ ಕರಣಕ್ಕೆ ಮುಖಮಾಡಿರುವ ಹೊಸ ಪೀಳಿಗೆಯ ಯುವಕ - ಯುವತಿಯರು ಯಕ್ಷಗಾನಕ್ಕೆ ಬಹುತೇ ಕ ಬೆನ್ನು ಹಾಕಿರುವುದೇ ಆಗಿದೆ.

ಒಂದೆಡೆ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಾದರೆ ಮತ್ತೊಂದೆಡೆ ರಂಗಕ್ಕೆ ಯುವ ಕಲಾವಿದರು ಪ್ರವೇಶಿಸಲು ಹಿಂಜರಿಯುತ್ತಿರುವುದು. ಹವ್ಯಾಸಿಗಳಾಗಿ ಅನೇಕ ಸೆಳೆಮಿಂಚುಗಳು ಅಲ್ಲಲ್ಲಿ ಗುರು ತಿಸಿಕೊಂಡಿವೆಯಾದರೂ ಅವರು ವೃತ್ತಿಪರರಾಗಲು ಹಿಂಜರಿಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಎಳೆ ಹರೆಯದಲ್ಲಿ ಯಕ್ಷಗಾನವನ್ನು ವೃತ್ತಿಯಾಗಿ, ಉಸಿರಾಗಿ, ಆರಿಸಿಕೊಂಡು ಕಲೆಯಲ್ಲೇ ನೆಲೆ ಕಂಡ ಕೆಲವೇ ಕಲಾವಿದರ ಪಟ್ಟಿಯಲ್ಲಿ ಅಗ್ರಪಂಕ್ತಿಯ ಹೆಸರು ಶಶಿಕಾಂತ ಶೆಟ್ಟಿ ಕಾರ್ಕಳ!

ಅವರೀಗ ವೃತ್ತಿಸಾಧನೆಯ ಹತ್ತನೇ ವರ್ಷದಲ್ಲಿದ್ದಾರೆ. ಈ ಅಲ್ಪ ಅವಧಿಯಲ್ಲಿ ಅವರಿಗೆ ಸ್ತ್ರೀವೇಷ ಧಾರಿಯಾಗಿ ಅಪಾರ ಜನಮನ್ನಣೆ, ಕೀರ್ತಿ, ಯಶಸ್ಸು, ಅಭಿಮಾನಿ ವರ್ಗ ಎಲ್ಲವೂ ದೊರೆತಿರು ವುದು ಹಾಗೂ ಅವರು ಕೀರ್ತಿಶನಿಯ ಪ್ರಭಾವಕ್ಕೆ ಒಳಗಾಗದಿರುವುದು ಯಕ್ಷಕಲೆಯ ಸೌಭಾಗ್ಯ.

ಕಾರ್ಕಳದ ದಿ| ಧರ್ನಪ್ಪ ಶೆಟ್ಟಿ ಮತ್ತು ಲಲಿತಾ ದಂಪತಿಯ ಎರಡನೇ ಮಗನಾಗಿ ಜನಿಸಿದ ಶಶಿ ಕಾಂತನಿಗೆ ಲಕ್ಷ್ಮಿಯ ಅವಕೃಪೆ ಬಾಲ್ಯದಲ್ಲಿ ಕಾಡಿದ್ದರಿಂದ ೯ನೆಯ ತರಗತಿಗೆ ವಿದ್ಯಾಭ್ಯಾಸ ನಿಂತು ಹೋಯಿತು. ಮನೆಯಲ್ಲಿ ಯಕ್ಷಗಾನದ ಹಿನ್ನೆಲೆಯ ಕಲಾವಿದರು ಯಾರೂ ಇರಲಿಲ್ಲ. ಆದರೆ ದೈವದತ್ತವಾಗಿ ಬಂದ ಮೃದುಕಂಠ ಮತ್ತು ಶಾರೀರ ನಾಟಕಗಳಲ್ಲಿ ಸ್ತ್ರೀಪಾತ್ರಗಳಿಗೆ ಹೇಳಿಮಾಡಿಸಿದಂತಿತ್ತು.

ನಾಟಕದ ಅಭಿನಯದ ಗೀಳು ಬಲಗೊಂಡಿತು. ಹೊಟ್ಟೆ ಪಾಡಿಗಾಗಿ ಕಾರ್ಕಳದ ಶಿವಾಜಿ ಟೈಲ ರ್‌ನಲ್ಲಿ ದರ್ಜಿ ವೃತ್ತಿ. ಅಲ್ಲಿಯೂ ಲೇಡೀಸ್ ಸ್ಪೆಶಲಿಸ್ಟ್ ಆಗಿ ಪ್ರಸಿದ್ಧಿ! ಕಾರ್ಕಳದ ಮಾರಿ ಗುಡಿಯಲ್ಲಿ ವಾರಕ್ಕೊಂದಾವರ್ತಿ ನಡೆಯುತ್ತಿದ್ದ ಯಕ್ಷ ತರಗತಿ ಯಲ್ಲಿ ಸತೀಶ್ ಎಂ. ಕಾರ್ಕಳ ಇವರಲ್ಲಿ ತೆಂಕುತಿಟ್ಟಿನ ಹೆಜ್ಜೆಗಾರಿಕೆ ಕಲಿತರು.

ಹಲವು ಸಂಘಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹವ್ಯಾಸಿಯಾಗಿ ಗೆಜ್ಜೆ ಕಟ್ಟಿದರು. ಬಾಲಗೋಪಾಲನಿಂದ ಸಖೀಪಾತ್ರ, ಅಲ್ಲಿಂದ ಪೀಠಿಕೆಯ ಸ್ತ್ರೀ ವೇಷಗಳಿಗೆ ಅತ್ಯಲ್ಪ ಅವಧಿಯಲ್ಲಿ ಭಡ್ತಿ!

ಕಲಿಯುವ ದಾಹ ತೀವ್ರವಾದಂತೆ ದರ್ಜಿ ವೃತ್ತಿಗೆ ಟಾಟಾ ಮಾಡಿ ಮಂದರ್ತಿ ಮೇಳಕ್ಕೆ ಸೇರಿ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಸ್ವಪರಿಶ್ರಮದಿಂದ ಕಲಿತರು. ಒಂದೇ ವರ್ಷದಲ್ಲಿ ಮಂದರ್ತಿ ಮೇಳದ ಪ್ರಧಾನ ಸ್ತ್ರೀಪಾತ್ರಧಾರಿಯಾಗಿ ಪದೋನ್ನತಿ. ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳ ಸಾಲಿ ಗ್ರಾಮ ಮೇಳದ ಯಜಮಾನ ಕಿಶನ್ ಹೆಗ್ಡೆಯವರಿಂದ ಕರೆ ಬಂತು. ಅಲ್ಲಿ ಖ್ಯಾತ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗರಿಂದ ನಿರ್ದೇಶನದ ಸೌಭಾಗ್ಯ.

ಮೊದಲ ವರ್ಷವೇ ಸೂಪರ್ ಹಿಟ್ ಪ್ರಸಂಗ ಈಶ್ವರಿ - ಪರಮೇಶ್ವರಿಯ ಈಶ್ವರಿ (ಅತ್ತೆ)ಯ ಪಾತ್ರ. ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆಯವರ ಸೊಸೆಗೆ ಇವರ ಅತ್ತೆಯ ಕಾಂಬಿ ನೇಶನ್ ಗಲ್ಲಾಪೆಟ್ಟಿಗೆ ತುಂಬಿಸುತ್ತಿತ್ತು. ಅಲ್ಲಿಂದ ಶಶಿಕಾಂತ ಹಿಂದಿರುಗಿ ನೋಡಲೇ ಇಲ್ಲ. ಕಾಲ್ಪನಿಕ ಪ್ರಸಂಗಗಳ ಪಾತ್ರಕ್ಕಷ್ಟೇ ಸೀಮಿತವಾಗದೆ ಪೌರಾಣಿಕ ಪಾತ್ರಗಳಲ್ಲಿಯೂ ಏಕಪ್ರಕಾರವಾಗಿ ವಿಜೃಂಭಿಸುತ್ತಿರುವುದು ಇವರ ಹೆಚ್ಚುಗಾರಿಕೆ.

ದ್ರೌಪದಿ, ಅಂಬೆ, ದಾಕ್ಷಾಯಿಣಿ, ಸೈರಂಧ್ರಿ, ಸೀತೆ, ಮಾಯಾ ಶೂರ್ಪನಖಿ, ಚಂದ್ರಮತಿ, ಕೈಕೇಯಿ, ಸತ್ಯಭಾಮೆ, ಶ್ರೀದೇವಿ, ಶಕುಂತಳೆ, ಮೇನಕೆ ಮೊದಲಾದ ಪಾತ್ರಗಳಲ್ಲಿ ತನ್ನದೇ ಛಾಪು ಮೆರೆ ದದ್ದು ಮಾತ್ರವಲ್ಲ ಕೋಳ್ಯೂರು, ಮಂಟಪ, ಕೆರೆ ಮನೆ ಗಜಾನನ ಹೆಗಡೆ, ಅರಾಟೆ ಮಂಜುನಾಥ, ಮಂಕುಡೆ ಸಂಜೀವ ಶೆಟ್ಟಿ ಮೊದಲಾದವರ ನೆನಪನ್ನು ತಂದುಕೊಟ್ಟಿದ್ದಾರೆ.

ಸೈರಂಧ್ರಿ ಹಾಗೂ ಲಂಕಾದಹನದ ಸೀತೆಯ ಪಾತ್ರಗಳಲ್ಲಿ ಖ್ಯಾತ ಕಲಾವಿದ ಎಂ.ಎ. ನಾಕರ ಎರಕವಿದೆ. ಅಂಬೆಯ ಪಾತ್ರವಂತೂ ಅದೊಂದು ಅದ್ಭುತ ಶಿಲ್ಪ!

ಆಧುನಿಕ ಪ್ರಸಂಗಗಳಲ್ಲಿ ಓಬವ್ವನ ಪಾತ್ರ ಅವರಿಗೆ ಕೀರ್ತಿ ತಂದುಕೊಟ್ಟಿದೆ. ಪುರುಷ ಪಾತ್ರಗಳಲ್ಲಿ ಯೂ ರಾಮ, ಕೃಷ್ಣ, ಪರಶುರಾಮ, ಅಶ್ವತ್ಥಾಮ, ಚಂದ್ರಹಾಸ ಮೊದಲಾದ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸಾಧನೆಯ ದಶಕವನ್ನು ವೃತ್ತಿಪರ ಮೇಳಗಳಲ್ಲಿ ಈ ವರ್ಷ ಪೂರೈಸಿರುವ ಶಶಿಕಾಂತ ಶೆಟ್ಟಿಯವರು ಸಮರ್ಪಣಾ ಭಾವದಿಂದ ದುಡಿಯುತ್ತಿರುವ ಕಲಾವಿದ.

ಹವ್ಯಾಸಿಯಾಗಿ ಕರ್ನಾಟಕ, ಬಪ್ಪನಾಡು, ಸುರತ್ಕಲ್, ಭಗವತಿ ಮೇಳಗಳಲ್ಲಿ ಹೆಜ್ಜೆ ಹಾಕಿದ್ದರೂ ಮಂದರ್ತಿ ಮೇಳದಲ್ಲಿ ೪ ವರ್ಷ ಹಾಗೂ ಇದೀಗ ಸಾಲಿಗ್ರಾಮದಲ್ಲಿ ೬ ವರ್ಷಗಳಲ್ಲಿ ವೃತ್ತಿಕಲಾವಿ ದನಾಗಿ ದಶಕದ ಸಾರ್ಥಕ ಕಲಾ ಸೇವೆ ಮಾಡಿದ್ದಾರೆ.

ಕೇವಲ ಕಲೆಗೆ ನಿಷ್ಠನಾಗಿ ೩೦ರ ಹರೆಯದಲ್ಲಿಯೇ ಎತ್ತರ ಸಾಧನೆ ಮಾಡಿರುವ ಶಶಿಕಾಂತ ಮುಂ ಬೈ, ಬೆಂಗಳೂರು, ಹೈದರಾಬಾದ್ ಮಾತ್ರವಲ್ಲ ವಿದೇಶಗಳಲ್ಲಿಯೂ ಪ್ರದರ್ಶನ ನೀಡಿ ಅಪಾರ ಅಭಿಮಾನಿ ವರ್ಗ ಪಡೆದಿದ್ದಾರೆ.

ಈಗಾಗಲೇ ನೂರಾರು ಸಂಘ ಸಂಸ್ಥೆಗಳಿಂದ ತುಂಬು ಸಮ್ಮಾನ ಪಡೆದಿರುವ ಅವರಿಗೆ ಈ ದಶಕ ದ ಸಾಧನೆಗಾಗಿ ಕಾರ್ಕಳದ ಅಭಿಮಾನಿ ಬಳಗ ದೊಡ್ಡ ರೀತಿಯಲ್ಲಿ ಸಮ್ಮಾನಿಸಲು ಸಿದ್ಧತೆ ನಡೆಸಿದೆ. ಕಲೆಯ ನೆರಳಾಗಿ ಬಂದು ಕೈಹಿಡಿದ ಪತ್ನಿ ದೇವಿಕಾ ಮತ್ತು ಪುತ್ರ ಶಿವರಂಜನ್ ಅವರೊಂದಿಗೆ ಸಾರ್ಥಕ ದಾಂಪತ್ಯ ನಡೆಸುತ್ತಿದ್ದಾರೆ. ಅವರ ಕಲಾಸೇವೆ ನೂರ್ಕಾಲ ಬಾಳಲಿ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ರಾಜೇ೦ದ್ರ ಭಟ್ ಕೆ.
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-06 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಸಾಹಿತ್ಯ-ಸಂಸ್ಕೃತಿ]

»‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
»ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
»ಡಾ. ಗೀತಾ ನಾಗಭೂಷಣಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ
»ಮುಳಿಯ ಪ್ರಶಸ್ತಿ ಪ್ರದಾನ: ರೋಚಕ ಕೃತಿಗಳು ಕಡಿಮೆಯಾದಾಗ ಸಾಂಸ್ಕೃತಿಕ ಶ್ರೀಮಂತಿಕೆ ಮರೆಯಾಗುತ್ತದೆ: ಮಾಧವ ಆಚಾರ್ಯ
»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ರಷ್ಯನ್‌ ಕಥೆಗಳು ಪುಸ್ತಕ ಬಿಡುಗಡೆ: ಕನ್ನಡ ಸಾಹಿತ್ಯ ಲೋಕದಲ್ಲಿ ಅನುವಾದಕರಿಗೆ ವಿಪುಲ ಅವಕಾಶ: ಪ್ರೋ.ಸಿ. ನಾಗಣ್ಣ
» ಪ್ರಶಂಸೆಗೆ ಪಾತ್ರವಾದ ಸಿಕ್ಕಿಂ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ : ನೆರೆದವರ ರಂಜಿಸಿದ ಜಟಾಯು ಮೋಕ್ಷ
»ಜಾತಿ, ಮತದ ಗಡಿ ದಾಟಿದರೆ ಮಾತ್ರ ಕವಿಯಾಗಬಲ್ಲ: ಎಚ್.ಎಸ್.ವೆಂಕಟೇಶಮೂರ್ತಿ
»2011ನೇ ಸಾಲಿನ ಪ.ಗೋ. ಸಂಸ್ಮರಣಾ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಅರ್ಜಿ ಆಹ್ವಾನ
»ಕುಕ್ಕೆ ಸುಬ್ರಹ್ಮಣ್ಯ: ಮಲೆ ಮಾದೇಶ್ವರಕ್ಕೆ ISO ಅಂತಾರಾಷ್ಟ್ರೀಯ ಮಾನ್ಯತೆ
»ಕವನ : ಕ್ಲಾಸ್ ಶಯನ...
»ಮಾತು ಬೇರೆ ಬೇಕೆ ಗೆಳೆಯ....
»ಚಂದ್ರಶೇಖರ ಕೆದ್ಲಾಯರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ; ಫೆ.4ರಂದು ಪ್ರಶಸ್ತಿ ಪ್ರದಾನ
»ಉಡುಪಿ :ದಿವಂಗತ ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ ಪ್ರದಾನ
»ಕವಿ, ಪ್ರಾಧ್ಯಾಪಕ ಡಾ| ಧನಂಜಯ ಕುಂಬ್ಳೆ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಯಕ್ಷಗಾನಕ್ಕೆ ನಿರ್ದಿಷ್ಟ ಸ್ವರೂಪ ಅಗತ್ಯ- ಗೋವಿಂದ ಭಟ್‌
»ತೋನ್ಸೆ ಕಾಂತಪ್ಪ ಮಾಸ್ತರರ ಸಂಸ್ಮರಣಾ ಪ್ರಶಸ್ತಿ ಪ್ರದಾನ ಸಮಾರಂಭ: ಪರಿಪೂರ್ಣ ಕಲಾವಿದನಾಗಬೇಕಾದರೆ ಯಕ್ಷಗಾನದ ಬಗ್ಗೆ ಆಸಕ್ತಿ ಜ್ಞಾನ ಅಗತ್ಯ- ಡಾ. ಭಾಸ್ಕರಾನಂದ ಕುಮಾರ್
»ಮೈಸೂರು ಉದ್ಯಾನಕಲಾ ಸಂಘದ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರಿಗೆ ಸನ್ಮಾನ
»ಕವನ : ನನ್ನ ಸುಬ್ಬಿ
»ಮಲಯಾಳಂನ ಖ್ಯಾತ ಸಾಹಿತಿ ಸುಕುಮಾರ್ ಅಝಿಕೋಡ್ ನಿಧನ
»ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೋವಿಂದ ಭಟ್ಟ
»ಭಾರತದ ಪ್ರಪಿತಾಮಹನೆ ...
»ಖ್ಯಾತ ಸಾಹಿತಿ ನಾಡೋಜ ಪ್ರೊ. ಹಂಪ. ನಾಗರಾಜಯ್ಯರಿಗೆ ‘ವಿಶ್ವಮಾನವ ಪ್ರಶಸ್ತಿ’; ಕನ್ನಡ ಸಾಹಿತ್ಯಕ್ಕೆ ಸಂಕುಚಿತತೆ ಇಲ್ಲ: ಎಚ್.ಆರ್.ಭಾರದ್ವಾಜ್
» ಅನಂತಮೂರ್ತಿ ವಿಚಾರಧಾರೆ : ಅನಂತಮೂರ್ತಿ ಸೃಜನಶೀಲ ಸಾಹಿತಿ:ಡಾ.ನ. ರತ್ನ
»ಅದೆರಳಿದೆ....
»ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾನೂ ಆಕಾಂಕ್ಷಿ: ಚಂಪಾ
»ಡಾ| ಪಾಟೀಲ ಪುಟ್ಟಪ್ಪಗೆ ನಾಗರಿಕ ಸಮ್ಮಾನ: ಗಾಂಧೀಜಿ ತತ್ವ ಪ್ರಚುರಪಡಿಸಲು ಗಾಂಧಿ ಗ್ರಾಮ ಸ್ಥಾಪನೆ:ಜಗದೀಶ ಶೆಟ್ಟರ್
»ಆಸ್ಟ್ರೋ ಮೋಹನ್ ರವರ ’ಪಿಕ್ಟೋರಿಯಲ್ ಜರ್ನಿ ಟು ಉಡುಪಿ”ಪುಸ್ತಕ ಬಿಡುಗಡೆ ಸಮಾರಂಭ
»ಮತ್ತೆ ಮಳೆ ಬರುವುದೆ....
»ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ:ಗಣಿತ ನನಗೆ ಕಬ್ಬಿಣದ ಕಡಲೆಯಾಗಿತ್ತು: ಡಾ. ಚಂದ್ರಶೇಖರ ಕಂಬಾರ
»ಡಾ.ಜಿ.ಎನ್. ಉಪಾಧ್ಯಗೆ ‘ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’
»ಕಾಳಿಂಗ ನಾವಡ ಯಶೋಗಾಥೆ ಸಾಕ್ಷ್ಯಚಿತ್ರ ವಿಡಿಯೋ
»ಕುವೆಂಪು ಕಂಚಿನ ಪ್ರತಿಮೆಗೆ ಪ್ಲಾಸ್ಟಿಕ್ ಮುಸುಕು!: ರಾಷ್ಟ್ರ ಕವಿ ಪ್ರತಿಮೆಗೂ ಬಿಜೆಪಿ ಭಿನ್ನಮತದ ಕರಿನೆರಳು; ಸಿಎಂಗಾಗಿ ಕಾದು ಕುಳಿತಿರುವ ಅಧಿಕಾರಿಗಳು
»ಗಾಯಕಿ ಎಸ್.ಜಾನಕಿಗೆ ಬಸವಭೂಷಣ ಪ್ರಶಸ್ತಿ ಪ್ರದಾನ
»ಜ್ಞಾನಪೀಠ ಶ್ರೇಷ್ಠವಾದದ್ದಲ್ಲ; ನಾಟಕ ಬರೆದದ್ದೇ ಆಕಸ್ಮಿಕ: ಡಾ| ಗಿರೀಶ ಕಾರ್ನಾಡ
»ಪಾರ್ಥಸಾರಥಿಯವರಿಗೆ ಕೊಲರಾಡೋ ಕನ್ನಡ ಪ್ರಶಸ್ತಿ
»ಯಕ್ಷಗಾನದ ಮೇರುನಟರ ಕ್ಯಾಲೆಂಡರ್‌ ಬಿಡುಗಡೆ; ಸಮಗ್ರ ಮಾಹಿತಿಯುಳ್ಳ ವೆಬ್‌ಸೈಟ್‌ ಕೂಡ ತಯಾರಿಯಲ್ಲಿ.
»30 ಜಿಲ್ಲೆಗಳಲ್ಲಿ ಕಂಬಾರರ ನಾಟಕಗಳ ಉತ್ಸವ
»ಎಲೆಯ ಮರೆಯ ಹೂ...
»ಪುತಿನ ಕಲಾಮಂದಿರ ಲೋಕಾರ್ಪಣೆ
»ಸುಳ್ಯ ಯಶಸ್ವೀ ಸಂಗೀತ ಸಂಭ್ರಮ 2011
»ಹಿರಿಯ ಸಾಹಿತಿ ಏರ್ಯ ಲಕ್ಷಿನಾರಾಯಣ ಆಳ್ವ ರಿಂದ ಡಾ| ಮೋಹನ ಆಳ್ವರಿಗೆ ಕಿಲ್ಲೆ ಪ್ರಶಸ್ತಿ ಪ್ರಧಾನ
»`ಕುವೆಂಪು ಪ್ರಭಾವ ಎಲ್ಲೆಡೆ ಪಸರಿಸಲಿ' ....
»ಕಸಾಪ ಅಧ್ಯಕ್ಷ ಸ್ಥಾನಕ್ಕೆ ಚಂಪಾ, ಹಾಲಂಬಿ ಸ್ಪರ್ಧೆ?
»ಕವನ : ಕನಸಿನಾಳದಿಂದ .....
»ನಾಲ್ವರು ಸಾಧಕರಿಗೆ `ನಾಡೋಜ' ಗೌರವ ಪದವಿ ನೀಡಿ ಸನ್ಮಾನ
»ಸಂತೆ ಶಿವಾರದಲ್ಲಿ ಸಾಹಿತಿ ಡಾ ಭೈರಪ್ಪರಿಗೆ ಸನ್ಮಾನ
»ಕವನ...
»ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರಿಗೆ 2009ನೇ ಸಾಲಿನ ಪಂಪ ಪ್ರಶಸ್ತಿ: ಬೇನಾಮಿ ಇಂಗ್ಲಿಷ್ ಶಾಲೆ ಮುಚ್ಚಿ: ಪ್ರೊ. ಚಂದ್ರ ಶೇಖರ ಪಾಟೀಲ
»ಇಂದು ಸರಸ್ವತಿ ಪುತ್ರನಿಗೆ ಹುಟ್ಟೂರ ಸನ್ಮಾನ: ಸಾಹಿತಿ ಡಾ. ಭೈರಪ್ಪ ಅವರಿಗೆ ಸಂತೇಶಿವರದಲ್ಲಿ ಅಭಿನಂದನೆ, ವಿಚಾರಸಂಕಿರಣ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri