ಬೆಳಗಾವಿ: 5ರಿಂದ 7ರವರೆಗೆ ಗೋವಾದಲ್ಲಿ 27ನೇ ಕೊಂಕಣಿ ರಾಷ್ಟ್ರೀಯ ಅಧಿವೇಶನ |
ಪ್ರಕಟಿಸಿದ ದಿನಾಂಕ : 2010-02-04
ಬೆಳಗಾವಿ: ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ ೨೭ನೇ ರಾಷ್ಟ್ರೀಯ ಅಧಿವೇಶನ ಫೆ.೫ರಿಂದ ೭ರವರೆಗೆ ಗೋವಾದ ಸಾಖಳಿಯಲ್ಲಿ ನಡೆಯಲಿದೆ ಎಂದು ಬೆಳಗಾವಿ ಜಿಲ್ಲಾ ಕೊಂಕಣಿ ಪರಿಷತ್‌ನ ವಿ.ವಿ.ಶೈಣೈ ಅವರು ತಿಳಿಸಿದ್ದಾರೆ.
ಫೆ.೫ರಂದು ಸಂಜೆ ೫ ಗಂಟೆಗೆ ನಡೆಯುವ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಆಗಮಿಸುವರು. ಜ್ಞಾನಪೀಠ ಪುರಸ್ಕೃತ ಪದ್ಮ ಭೂಷಣ ರವೀಂದ್ರ ಕೇಳೇಕರ ಆಶೀರ್ವಚನ ನೀಡುವರು.
ಪಾಳಿಮತದಾರ ಸಂಘದ ಪ್ರತಾಪ ಗಾವಸ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಮಣಿಪಾಲ ಅಕಾಡಮಿ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ ಅವರು ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ ಅಧ್ಯಕ್ಷರಾಗಿ ಈ ಸಂದರ್ಭದಲ್ಲಿ ಅಧಿಕಾರ ಗ್ರಹಣ ಮಾಡುವರು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-04
|
|
|