ಮೆಲ್ಬರ್ನ್: ವಿಮೆ ಪರಿಹಾರ ಪಡೆಯುವುದಕ್ಕಾಗಿ ಬೆಂಕಿ ಹಚ್ಚಿದ ಜಸ್‌ಪ್ರೀತ್: ಸುಳ್ಳು ದೂರು ಮೊಕದ್ದಮೆ |
ಪ್ರಕಟಿಸಿದ ದಿನಾಂಕ : 2010-02-04
ಮೆಲ್ಬರ್ನ್ (ಪಿಟಿಐ): ‘ಆಸ್ಟ್ರೇಲಿಯಾದ ದುಷ್ಕರ್ಮಿಗಳು ತನಗೆ ಬೆಂಕಿ ಹಚ್ಚಿದರು’ ಎಂದು ದೂರು ನೀಡಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಭಾರತದ ಜಸ್‌ಪ್ರೀತ್ ಸಿಂಗ್ (29) ಈಗ ಸ್ವತಃ ಇಕ್ಕಟ್ಟಿ ನಲ್ಲಿ ಸಿಲುಕಿದ್ದು, ಆಸ್ಟ್ರೇಲಿಯಾದ ಪೊಲೀಸರು ಅವರ ವಿರುದ್ಧ ‘ಸುಳ್ಳು ದೂರು’ ಮೊಕದ್ದಮೆ ದಾಖ ಲಿಸಿ. ಇದು ವಿಮೆ ಕಂಪೆನಿಯ ಪರಿಹಾರ ಪಡೆಯುವುದಕ್ಕಾಗಿ ನಡೆಸಿದ ವಂಚನೆ ಪ್ರಕರಣ ಎಂದಿ ದ್ದಾರೆ.
‘ಕೆಲವರು ತನ್ನ ಮೇಲೆ ಹಲ್ಲೆ ನಡೆಸಿ ಕಾರಿಗೆ ಬೆಂಕಿ ಹಚ್ಚಿದರು’ ಎಂದು ಭಾರತದ ಜಸ್‌ಪ್ರೀತ್ ಸಿಂಗ್ (29) ನೀಡಿದ್ದ ದೂರು ಸುಳ್ಳು. ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದ ಆತ, ವಿಮೆ ಕಂಪನಿಯ ಪರಿಹಾರ ಪಡೆಯುವ ಸಲುವಾಗಿ ಕಾರಿಗೆ ಬೆಂಕಿ ಹಚ್ಚಿದಾಗ ಆಕಸ್ಮಿಕವಾಗಿ ತನಗೂ ಸುಟ್ಟ ಗಾಯ ಮಾಡಿಕೊಂಡಿದ್ದ ಎಂದು ಪೊಲೀಸರು ದೂರು ದಾಖಲಿಸಿದ್ದಾರೆ.
ಜನವರಿ 8ರಂದು ಈ ಘಟನೆ ನಡೆದಿತ್ತು. ಇದಕ್ಕೆ ಒಂದು ದಿನ ಮುಂಚೆ, ಜಸ್‌ಪ್ರೀತ್ ಒಂದು ಪ್ಲ್ಯಾ ಸ್ಟಿಕ್ ಬಕೆಟ್ ಮತ್ತು 16 ಲೀಟರ್ ಪೆಟ್ರೋಲ್ ಖರೀದಿಸಿದ್ದ ವಿಡಿಯೊ ಚಿತ್ರಗಳು ಪೊಲೀಸರಿಗೆ ಸಿಕ್ಕಿವೆ.
ಇದಾದ ಮರುದಿನ ವಿಮೆ ಹಣಕ್ಕಾಗಿ ಆತ ತನ್ನ ಏಳು ವರ್ಷದ ಕಾರಿಗೆ ಬೆಂಕಿ ಹಚ್ಚಿದ್ದ. ಜಸ್‌ಪ್ರೀತ್ ನನ್ನು ಮಂಗಳವಾರ ಬಂಧಿಸಿದಾಗ ಆತನ ಮನೆಯಲ್ಲಿ ಬಕೆಟ್ ಮತ್ತಿತರ ಸಾಕ್ಷ್ಯಗಳು ಸಿಕ್ಕಿವೆ ಎಂದು ಟಿ.ವಿ. ವಾಹಿನಿಯೊಂದು ವರದಿ ಮಾಡಿದೆ.
ಆದರೆ ಜಸ್‌ಪ್ರೀತ್ ಈ ಎಲ್ಲಾ ಆಪಾದನೆಗಳನ್ನು ಅಲ್ಲಗಳೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಸ್ ಪ್ರೀತ್‌ನ ಪತ್ನಿಯನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಇಲ್ಲಿನ ಗ್ರೈಸ್ ಕ್ರೆಸೆಂಟ್‌ನಲ್ಲಿರುವ ಮನೆಯ ಹತ್ತಿರ ಕಾರು ನಿಲ್ಲಿಸುತ್ತಿದ್ದಾಗ ತನ್ನನ್ನು ಹಿಂಬಾಲಿಸಿದ ನಾಲ್ವರು ಹಲ್ಲೆ ನಡೆಸಿದರಲ್ಲದೆ ಕಾರಿಗೆ ಬೆಂಕಿ ಹಚ್ಚಿದರು ಎಂದು ಶೇ 15ರಷ್ಟು ಸುಟ್ಟ ಗಾಯ ಗಳಾಗಿದ್ದ ಜಸ್‌ಪ್ರೀತ್ ದೂರು ನೀಡಿದ್ದರು.
ಈ ಮಧ್ಯೆ ಜಸ್‌ಪ್ರೀತ್, ತನ್ನ ಮಗು ಮತ್ತು ಕುಟುಂಬದವರನ್ನು ನೋಡುವ ಸಲುವಾಗಿ ಪತ್ನಿಯ ಜತೆ ಫೆ.20ರಂದು ಭಾರತಕ್ಕೆ ತೆರಳಿ ಏಪ್ರಿಲ್ ಕೊನೆಗೆ ವಾಪಸಾಗುವುದಾಗಿ ನ್ಯಾಯಾಲಯ ವನ್ನು ಕೋರಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-04
|
|
|