ವಾಷಿ೦ಗ್ಟನ್: ಅಲ್‌ಖೈದಾದಿಂದ ಮುಗ್ಧ ಮುಸ್ಲಿಮರ ಹತ್ಯೆ-ಒಬಾಮ |
ಪ್ರಕಟಿಸಿದ ದಿನಾಂಕ : 2010-02-03
ವಾಷಿಂಗ್ಟನ್ (ಪಿಟಿಐ): ಅಲ್ ಖೈದಾ ವಿಶ್ವದಲ್ಲಿ ಮುಗ್ಧ ಮುಸ್ಲಿಮರನ್ನು ಅತಿಹೆಚ್ಚು ಸಂಖ್ಯೆಯಲ್ಲಿ ಕೊಲ್ಲುತ್ತಿರುವ ಸಂಘಟನೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ.
ಸೋಮವಾರ ಯೂಟ್ಯೂಬ್‌ಗೆ ನೀಡಿದ ಸಂದರ್ಶನದಲ್ಲಿ ಒಬಾಮ ಈ ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ. ನಾವು ಒಂದು ನಿರ್ದಿಷ್ಟ ಗುಂಪಿನ ವಿರುದ್ಧ ಯುದ್ಧನಿರತರಾಗಿದ್ದೇವೆ ಎಂಬುದನ್ನು ಮನಗಾ ಣಬೇಕು. ಅಲ್ ಖೈದಾ ಹಾಗೂ ಅದರ ಮಿತ್ರ ಸಂಘಟನೆಗಳು ಜಗತ್ತಿನಾದ್ಯಂತ ರೋಗದಂತೆ ವ್ಯಾಪಿಸಿವೆ.
ನಮ್ಮ ಮೇಲೆ, ನಮ್ಮ ಮಿತ್ರ ದೇಶಗಳ ಮೇಲೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಧರ್ಮದ ಹಿನ್ನೆಲೆ ಯನ್ನೂ ಪರಿಗಣಿಸದೆ ಮುಗ್ಧ ಜನರನ್ನು ಅವು ಕೊಲ್ಲುತ್ತಿವೆ ಎಂದು ಒಬಾಮ ವಿಷಾದ ವ್ಯಕ್ತಪಡಿಸಿ ದ್ದಾರೆ.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-03 00:00:00
|
|
|