ಚ೦ದ್ರಯಾನ ಒಳಜಗಳ: ಮಾನವ ಸಹಿತ ಚಂದ್ರಯಾನ ಬೇಡ: ಒಬಾಮಾ : ಬೇಕೇ ಬೇಕು: ಮೂರು ರಾಜ್ಯದ ರಾಜಕಾರಣಿಗಳು |
ಪ್ರಕಟಿಸಿದ ದಿನಾಂಕ : 2010-02-03
ಮಿಯಾಮಿ: ಮತ್ತೊಂದು ಮಾನವ ಸಹಿತ ಚಂದ್ರಯಾನ ಈಗ ಅಮೆರಿಕ ಸಂಸತ್ತಿನಲ್ಲಿ ಮಾತಿನ ಸಮರಕ್ಕೆ ಎಡೆ ಮಾಡಿ ಕೊಟ್ಟಿದೆ. ಮಾನವ ಸಹಿತ ಚಂದ್ರಯಾನ ಕೈಗೊಂಡರೆ ಸಾವಿರಾರು ಕೋಟಿ ರು. ನಷ್ಟವಾಗುವ ಸಾಧ್ಯತೆಗಳಿವೆ. ಹೀಗಾಗಿ ಇದನ್ನು ರದ್ದು ಮಾಡುವುದು ಒಳಿತು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ವಾದಿಸಿದರೆ, ಯೋಜನೆ ಕೈಬಿಟ್ಟರೆ ಹಲವಾರು ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಯೋಜನೆಯನ್ನು ಮುಂದುವರಿಸಲೇಬೇಕು ಎಂದು ರಾಜಕಾರ ಣಿಗಳು ಪಟ್ಟು ಹಿಡಿದಿದ್ದಾರೆ.
ಯೋಜನೆಯಲ್ಲಿ ಈಗಾಗಲೇ ಒಂದಿಷ್ಟು ಪ್ರಗತಿ: ಮತ್ತೊಂದು ಮಾನವ ಸಹಿತ ಚಂದ್ರಯಾನ ಕ್ಕಾಗಿ ಈಗಾಗಲೇ ಕೆಲವೊಂದು ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ. ಇತ್ತೀಚೆಗಷ್ಟೇ ನಾಸಾ ಅತ್ಯಾಧುನಿಕ ಏರಿಸ್-ಐ ರಾಕೆಟ್‌ನ ಪರೀಕ್ಷೆ ನಡೆಸಿತ್ತು. ಆದರೆ, ನಾಸಾದ ಯೋಜನೆಗಳಿಗೆ ಬಜೆಟ್‌ನಲ್ಲಿ ನೀಡುತ್ತಿರುವ ಅನುದಾನ ಪ್ರತಿ ವರ್ಷವೂ ಏರಿಕೆಯಾಗುತ್ತಿದ್ದು, ೨೦೧೧ನೇ ಸಾಲಿಗೆ ೮೮,೪೪೦ ಕೋಟಿ ರು.ಗಳನ್ನು ನೀಡಲಾಗುತ್ತಿದೆ. ಮುಂದಿನ ೫ ವರ್ಷಗಳಲ್ಲಿ ೪.೬೬ ಲಕ್ಷ ಕೋಟಿ ರು.ಗಳಿಗೂ ಅಧಿಕ ನಿಧಿಯನ್ನು ನಾಸಾಕ್ಕೆ ನೀಡಲಾಗುತ್ತದೆ.
ಮಾನವ ಸಹಿತ ಚಂದ್ರಯಾನ ಯೋಜನೆಯನ್ನು ಮುಂದುವರಿಸಿದರೆ ಬಜೆಟ್ ಮೇಲೆ ಭಾರೀ ಹೊರೆ ಬೀಳಲಿದೆ. ಹೀಗಾಗಿ, ಯೋಜನೆಯನ್ನು ಸ್ಥಗಿತಗೊಳಿಸುವುದೇ ಲೇಸು ಎಂಬುದು ಒಬಾ ಮಾ ಅಭಿಮತ. ಆದರೆ, ಈ ಯೋಜನೆ ಸ್ಥಗಿತಗೊಂಡರೆ ಹಲವಾರು ಮಂದಿ ಕೆಲಸ ಕಳೆದುಕೊ ಳ್ಳುತ್ತಾರೆ. ಯಾವುದೇ ಕಾರಣಕ್ಕೂ ಯೋಜನೆ ಸ್ಥಗಿತಗೊಳ್ಳಲು ಬಿಡುವುದಿಲ್ಲ ಎಂದು ಫ್ಲೋರಿಡಾ, ಟೆಕ್ಸಾಸ್ ಮತ್ತು ಅಲಾಬಾಮಾ ರಾಜ್ಯಗಳ ರಾಜಕಾರಣಿಗಳು ಪಟ್ಟು ಹಿಡಿದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-03
|
|
|