ಗುರುವಾರ, 09-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ?
Latest news item ಯು. ಎ. ಇ. ಬಂಟ್ಸ್ ಡೈರೆಕ್ಟರಿ - 2012 | UAE BUNTS DIRECTORY -2012
Latest news item ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
Latest news item ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
Latest news item ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
Latest news item ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
Latest news item ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
Latest news item ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು
Latest news item ದುಬೈ:ಕೆ.ಎಮ್.ಡಬ್ಲು.ಎ ವತಿಯಿಂದ ಕ್ರಿಕೆಟ್ ಟೂರ್ನಮೆಂಟ್
Latest news item ಸದನದಲ್ಲಿ ಮೊಬೈಲ್ ಫೋನ್‌ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್‌ ಮಂತ್ರಿ ಸ್ಥಾನಕ್ಕೆ ರಾಜಿನಾಮೆ
Latest news item SHAME ON YOU! ..ಇದು ಸರೀನಾ?...ವಿಧಾನಸಭೆಯಲ್ಲೇ ಸೆಕ್ಸ್ ಫಿಲ್ಮ್ ವೀಕ್ಷಿಸಿದ ಸಚಿವ ಸವದಿ!; ರಾಜ್ಯಾದ್ಯಂತ ತೀವ್ರ ಆಕ್ರೋಶ | ಅವರ ಜತೆ ಅಶ್ಲೀಲಚಿತ್ರ ಹಂಚಿಕೊಂಡ ಸಚಿವರು ಯಾರ್ಯಾರು? ರಾಜ್ಯ ಸರ್ಕಾರಕ್ಕೆ ಮತ್ತೊಂದು ಮುಜುಗರ!!
Latest news item ಕಲಾಪದಲ್ಲೂ ಪ್ರತಿಧ್ವನಿಸಿದ 'ಮಲ್ಪೆ ಸೈಂಟ್ ಮೇರಿಸ್ ಕಾಮಕೇಳಿ ಪ್ರಕರಣ'; ತನಿಖೆ ಆದೇಶಿಸಿದ ಸಿ.ಎಮ್
Latest news item ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
Latest news item ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
Latest news item ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
Latest news item ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ನ್ಯಾ. ಬಿ.ಕೆ. ಸೋಮಶೇಖರ ಆಯೋಗದಿಂದ ಸರಕಾರಕ್ಕೆ ಮಧ್ಯಾಂತರ ವರದಿ ಸಲ್ಲಿಕೆ: ರಾಜ್ಯದಲ್ಲಿ ಚರ್ಚ್ ಮೇಲಿನ ದಾಳಿಗೆ ಬಜರಂಗದಳ, ಶ್ರೀರಾಮಸೇನೆ, ವಿ‌ಎಚ್‌ಪಿ ಹೊಣೆ (updated news)

ಮಂಗಳೂರು, ಫೆ.೧: ರಾಜ್ಯದಲ್ಲಿ ೨೦೦೮ರ ಸೆಪ್ಟಂಬರ್ ೧೪ರಿಂದ ಚರ್ಚ್‌ಗಳ ಮೇಲೆ ವಿವಿಧ ಜಿಲ್ಲೆಗಳಲ್ಲಿ ನಡೆದ ದಾಳಿಯಲ್ಲಿ ಬಜರಂಗದಳ, ಶ್ರೀರಾಮಸೇನೆ, ವಿ‌ಎಚ್‌ಪಿ ಸಂಘಟನೆಗಳು ಪ್ರಮುಖ ಪಾತ್ರ ವಹಿಸಿರುವುದು ಘಟನೆಗೆ ಸಂಬಂಧಿಸಿ ಇದುವೆರೆಗಿನ  ವಿಚಾರಣೆಯಿಂದ  ಕಂಡು ಬಂದಿದೆ ಎಂಬ ಅಭಿಪ್ರಾಯದೊಂದಿಗೆ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ಆಯೋಗ ಇಂದು ರಾಜ್ಯ ಸರಾಕರಕ್ಕೆ ಮಧ್ಯಾಂತರ ವರದಿ ಸಲ್ಲಿಸಿದೆ.

ರಾಜ್ಯದಲ್ಲಿ ೨೦೦೮ರ ಸೆಪ್ಟಂಬರ್ ೧೪ರಿಂದ ವಿವಿಧ ಕಡೆ ಸರಣಿಯಾಗಿ ಚರ್ಚ್‌ಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ೨೦೦೮ರ ನವೆಂಬರ್ ೭ರಂದು ರಾಜ್ಯ ಸರಕಾರ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ಆಯೋಗವನ್ನು ವಿಚಾರಣೆಗಾಗಿ ನೇಮಿಸಿತ್ತು. ಆ ಪ್ರಕಾರ ೨೦೦೯ರ ಡಿಸೆಂಬರ್ ಅಂತ್ಯದೊಳಗೆ ಮಧ್ಯಾಂತರ ವರದಿ ಸಲ್ಲಿಸಲು ಸರಕಾರ ಆಯೋಗಕ್ಕೆ ಸೂಚನೆ ನೀಡಿತ್ತು.

 ಆ ಪ್ರಕಾರ ಆಯೋಗ ಒಟ್ಟು ಸಲ್ಲಿಕೆಯಾದ ೧೦೧೯ ಅರ್ಜಿಗಳಲ್ಲಿ ಇದುವರೆಗೆ ೧೭೦ ನ್ಯಾಯಾಂಗ ಕಲಾಪಗಳನ್ನು ನಡೆಸಿ ೭೩೧ ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಈ ಸಂಬಂಧ ಇಂದು ಸುಮಾರು ಒಂದು ಸಾವಿರಕ್ಕೂ ಅಧಿಕ ಪುಟಗಳ ವರದಿಯನ್ನು ರಾಜ್ಯ ಸರಕಾರದ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಭಿಜಿತ್ ದಾಸ್ ಗುಪ್ತ ಮತ್ತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕು ಇಲಾಖೆಯ ಕಾರ್ಯದರ್ಶಿ ಸಿದ್ಧಲಿಂಗೇಶ್ವರ ಮೂಲಕ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಕಾನೂನು ಸಚಿವರಿಗೆ ವರದಿಯನ್ನು ದ.ಕ. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನ್ಯಾ. ಬಿ.ಕೆ. ಸೋಮಶೇಖರ ಸಲ್ಲಿಸಿದರು.

‘ಜೈ ಭಾರತ ಜನನಿಯ ತನುಜಾತೆ... ಜಯಹೇ ಕರ್ನಾಟಕ ಮಾತೆ...’ ಎಂದು ಹೇಳುತ್ತಾ ಮಧ್ಯಾಂತರ ವರದಿಯ ಸಂಕ್ಷಿಪ್ತ ವರದಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾಧಿಕಾರಿ ಪೊನ್ನುರಾಜ್ ಮೂಲಕ ಬಿಡುಗಡೆಗೊಳಿಸಿದ ನ್ಯಾ.ಬಿ.ಕೆ. ಸೋಮಶೇಖರ, ಚರ್ಚ್ ದಾಳಿಗೆ ಸಂಬಂಧಿಸಿ ಒಂದು ವರ್ಷದ ಹಿಂದೆ ಆಯೋಗ ತನ್ನ ಕಾರ್ಯಾಚರಣೆ ಆರಂಭಿಸಿದಾಗ ಆಯೋಗ ಯಾವ ರೀತಿಯಲ್ಲಿ ಕಾರ್ಯಾಚರಿಸಬಹುದೆಂಬ ಸಾರ್ವಜನಿಕರ ಆತಂಕವನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಸಲ್ಲಿಕೆಯಾದ ದೂರು ಅರ್ಜಿಗಳಲ್ಲಿ ಬಹುಪಾಲು ವಿಚಾರಣೆಯನ್ನು ಈಗಾಗಲೆ ಪೂರೈಸಲಾಗಿದೆ ಎಂದರು.

ರಾಜ್ಯದ ಮಂಗಳೂರು, ದಕ್ಷಿಣ ಕನ್ನಡದ ಇತರ ಪ್ರದೇಶಗಳು, ಉಡುಪಿ, ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಧಾರವಾಡ, ಬೆಂಗಳೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರಗಳಲ್ಲಿ ಚರ್ಚ್ ಹಾಗೂ ಕ್ರೈಸ್ತರ ಪ್ರಾರ್ಥನಾ ಸ್ಥಳಗಳ ಮೇಲೆ ನಡೆದ ದಾ ಳಿಗಳಲ್ಲಿ ಮುಖ್ಯವಾಗಿ ವಿ‌ಎಚ್‌ಪಿ, ಬಜರಂಗದಳ, ಶ್ರೀರಾಮಸೇನೆ ಸಂಘಟನೆಗಳ ಪಾತ್ರ ಇರುವುದಾಗಿ ವಿಚಾರಣೆಯ ಬಳಿಕ ತಿಳಿದು ಬಂದಿರುವುದಾಗಿ ವರದಿಯಲ್ಲಿ ಅಭಿಪ್ರಾಯ ಪಡಲಾಗಿದೆ.

ಈ ಬಗ್ಗೆ ಪ್ರಮುಖ ಪೊಲೀಸ್ ಅಧಿಕಾರಿಗಳು, ಜಿಲ್ಲಾಡಳಿತದ ಅಭಿಪ್ರಾಯ ಹಾಗೂ ಸ್ಥಲೀಯ ಪಂಚಾಯತ್ ಪ್ರಮುಖರ ಅಭಿಪ್ರಾಯಗಳನ್ನು ಸಂಗ್ರಹಿಸಿದಾಗ ಬಜರಂಗದಳ, ವಿ‌ಎಚ್‌ಪಿ, ಶ್ರೀರಾಮ ಸೇನೆಯ ಸಂಘಟನೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವನಾಗಿ ಚರ್ಚ್ ದಾಳಿಗೆ ಕಾರಣವಾಗಿದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.

ಕೆಲವು ಕ್ರಿಶ್ಚಿಯನ್ ಸಂಘಟನೆಗಳು ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಆಮಿಷಗಳನ್ನು  ನೀಡಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಾಂತರ ನಡೆಸಿರುವ ಘಟನೆಗಳು, ವಿದೇಶಿ ನಿಧಿ ಪಡೆಯುತ್ತಿರುವ ಕೆಲ ಕ್ರೈಸ್ತ ಸಂಘಟನೆಗಳು, ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಲಾಗುತ್ತಿದೆ  ಎಂಬ ಕಾರಣಗಳು ಹಿಂದೂ ಧಾರ್ಮಿಕ ಮನೋಭಾವದ ಕೆಲವು ಮುಖಂಡರಲ್ಲಿ ಕ್ರೈಸ್ತ ಸಂಸ್ಥೆಗಳ ವಿರುದ್ಧ ಅಪನಂಬಿಕೆಗಳನ್ನು ಸೃಷ್ಟಿಸಲು ಕಾರಣವಾಗಿರಬಹುದು. ಇದರಿಂದಾಗಿ ಈ ದೇಶಕ್ಕೆ ಅಮೂಲ್ಯ ಸೇವೆ ನೀಡಿ ಘನತೆ ಗೌರವನ್ನು ಹೊಂದಿದ್ದ ಕ್ರೈಸ್ತ ಸಂಸ್ಥೆಗಳು ದಾಳಿಗೊಳಗಾಗಬೇಕಾಯಿತು ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.

ದಕ್ಷಿಣ ಕನ್ನಡ, ಬಳ್ಳಾರಿ, ದಾವಣಗೆರೆ ಮೊದಲಾದ ಕಡೆಗಳಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದಾಗ ಪ್ರತಿಭಟನೆ ನಡೆಸಿದ ಕ್ರೈಸ್ತ ಸಂಘಟನೆಗಳ ಸದಸ್ಯರ ಮೇಲೆ ಪೊಲೀಸರು ಬಲ ಪ್ರಯೋಗ ನಡೆಸಿದ್ದಾರೆ. ಲಾಠಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಇದರಿಂದ ಅಮಾಯಕರು, ಮಹಿಳೆಯರು, ಮಕ್ಕಳು ಗಾಯಗೊಂಡರು ಮತ್ತು ಜನರಲ್ಲಿ ಭೀತಿಯ ಭಾವನೆಯನ್ನು ಸೃಷ್ಟಿಸಿತ್ತು.  ಮತ್ತು ಈ ಘಟನೆ ಸರಕಾರ ಮತ್ತು ಜಿಲ್ಲಾಡಳಿತದಿಂದ ನೊಂದವರಿಗೆ ಅನುಕಂಪ, ಸಾಂತ್ವನ ರಕ್ಷಣೆಯ ಕ್ರಮ ಕೈಗೊಳ್ಳಲಿಲ್ಲ ಎನ್ನುವ ಭಾವನೆಯನ್ನು ನಿರ್ಮಾಣ ಮಾಡಿತ್ತು. ಚರ್ಚ್ ದಾಳಿ ನಡೆದ ಸಂದರ್ಭದಲ್ಲಿ ಜಿಲ್ಲಾಡಳಿತ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದೆ ಮತ್ತು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿಲ್ಲ. ಅಮಾಯಕರಿಗೆ ತೊಂದರೆ ಉಂಟಾಗಿದೆ. ಕ್ರೈಸ್ತ ಧಾರ್ಮಿಕ ಕೇಂದ್ರಗಳಿಗೆ ಹಾನಿಯುಂಟುಮಾಡಿದೆ ಎನ್ನು ಭಾವನೆ ಉಂಟುಮಾಡಿದೆ ಎಂದು ಆಯೋಗ ತಿಳಿಸಿದೆ.

ಒರಿಸ್ಸಾದಲ್ಲಿ ಹಿಂದು ಧಾರ್ಮಿಕ ವ್ಯಕ್ತಿಯೊಬ್ಬರನ್ನು ಕ್ರಿಶ್ಚಿಯನ್ ಧರ್ಮದ ವ್ಯಕ್ತಿಯೊಬ್ಬರು ಕೊಲೈಗೈದ ಘಟನೆ ಕ್ರಿಶ್ಚಿಯನ್ನರ ವಿರುದ್ಧ ದ್ವೇಷಭಾವನೆ ಹೊಂದಲು ಒಂದು ಕಾರಣವಾಗಿದೆ. ಚರ್ಚ್ ದಾಳಿಯ ಸಂದರ್ಭದಲ್ಲಿ ಘಟನೆಯ ಸ್ಥಳದಲ್ಲಿದ್ದವರನ್ನು, ಆಕಸ್ಮಿಕವಾಗಿ ಅಲ್ಲಿದ್ದ ಅಮಾಯಕರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.

ಆಯೋಗದ ಪ್ರಮುಖ ಸಲಹೆಗಳು ಮತ್ತು ಶಿಫಾರಸ್ಸುಗಳು

* ರಾಜಕೀಯ ರಹಿತವಾಗಿ ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಚರ್ಚ್ ದಾಳಿಗೆ ಒಳಗಾದ ಜಿಲ್ಲೆಗಳಲ್ಲಿ ಎಲ್ಲಾ ಧರ್ಮದವರಿಗೆ ಮತ್ತು ಅವರ ಸಂಸ್ಥೆಗಳಿಗೆ ಸೂಕ್ತ ರೀತಿಯ ಭದ್ರತೆಯನ್ನು ಒದಗಿಸಲು ಸರಕಾರ ಬದ್ಧವಾಗಿರಬೇಕು.

* ಚರ್ಚ್ ದಾಳಿಯ ಅಹಿತಕರ ಘಟನೆಗೆ ಸಂಬಂಧಿಸಿ ಎಲ್ಲಾ ಧರ್ಮದವರನ್ನು, ರಾಜಕೀಯ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಕಾರವು ಪ್ರಥಮ ಕ್ರಮವಾಗಿ ದಾಳಿಗೊಳಗಾದ ಕ್ರೈಸ್ತ ಸಂಸ್ಥೆಗಳು ಮತ್ತು ಜನರೊಂದಿಗೆ ಅವರಿಗಾದ ತೊಂದರೆ ಬಗ್ಗೆ ಸಕಲ ರೀತಿಯ ಕ್ರಮವನ್ನು ಕೈಗೊಳ್ಳುತ್ತದೆ ಎಂಬ ಮನವರಿಕೆಯನ್ನು ಮಾಡಬೇಕು.

* ಯಾವುದೇ ತೆರನಾದ ಅಹಿತಕರ ಘಟನೆಗಳ ಸಂದಂರ್ಭ ಕಾನೂನು ಉಲ್ಲಂಘನೆಗೆ  ಸಂಬಂಧಿಸಿ ಜಿಲ್ಲಾಡಳಿತವನ್ನೇ ಹೊಣೆಯನ್ನಾಗಿಸಬೇಕು.

* ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಎಲ್ಲಾ ರೀತಿಯ ಪರಿಸ್ಥಿತಿಯನ್ನು ಸಾರ್ವತ್ರಿಕವಾಗಿ, ನಿಷ್ಪಕ್ಷಪಾತವಾಗಿ, ಪರಿಣಾಮ ಕಾರಿಯಾಗಿ ಮತ್ತು ಕ್ಷಿಪ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಡಳಿತವು ಸಾಮಾನ್ಯ ಕಾರ್ಯನಿರ್ವಹಣಾ ಪದ್ಧತಿಯನ್ನು ರೂಪಿಸಬೇಕು.

* ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳು ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಘರ್ಷಣೆಗಳ ಬಗ್ಗೆ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವಲ್ಲಿ,  ಸರಕಾರದ ಗುಪ್ತಚರ ವಿಭಾಗವು ಕನಿಷ್ಠ ಪ್ರತಿಯೊಂದು ಜಿಲ್ಲೆಯಲ್ಲಿ  ಪರಿಣಿತ ಸಿಬ್ಬಂದಿಗಳು, ಮೂಲಭೌತ ಸೌಕರ್ಯವನ್ನು ಹೊಂದಿರುವಂತಾಗಬೇಕು.

* ಎಲ್ಲಾ ಧರ್ಮಗಳ ಹಿರಿಯರನ್ನೊಳಗೊಂಡ ಶಾಂತಿ ಸಭೆಗಳನ್ನು ರಚಿಸುವ ಮೂಲಕ ಯಾವುದೇ ರೀತಿಯ ನಿರೀಕ್ಷಿತ  ಧಾರ್ಮಿಕ ಸಂಘರ್ಷಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ಧಾರ್ಮಿಕ ಸೌಹಾರ್ದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.

* ಧರ್ಮದ ಹೆಸರಿನಲ್ಲಿ ಯಾವುದೇ ವ್ಯಕ್ತಿಯ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ  ಸೂಕ್ತ ಕಾನೂನು ರಚಿಸುವ ಅಗತ್ಯವಿದೆ.

* ಯಾವುದೇ ಮತೀಯ ಸಂಘಟನೆಗಳು ಮತ್ತೊಂದು ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಬೋಧಿಸುವುದು ಮತ್ತು ನಡೆದುಕೊಳ್ಳುವುದನ್ನು ಪ್ರಸಕ್ತ ಇರುವ ಕಾನೂನಿನ ಮೂಲಕ ನಿರ್ಬಂಧಿಸಬೇಕು. ಅಥವಾ ಹೊಸ ಕಾನೂನನ್ನು ಜಾರಿಗೊಳಿಸಬೇಕು.

* ಧಾರ್ಮಿಕ ಹಿತಾಸಕ್ತಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಧಕ್ಕೆಯುಂಟುಮಾಡುವ ಯಾವುದೇ ರೀತಿಯ ಅವಹೇಳನಕಾರಿ ಅಥವಾ ನಿಂದನಾತ್ಮಕ ಭಾವನೆಗಳನ್ನು  ಪ್ರಕಟಿಸುವ ಮಾಧ್ಯಮಗಳು ಸೇರಿದಂತೆ  ಯಾವುದೇ ರೀತಿಯ ಪ್ರಕಟನೆ, ಕರಪತ್ರ, ಪುಸ್ತಕ, ಸಾಹಿತ್ಯಗಳನ್ನು ನಿಷೇಧಿಸಬೇಕು ಸೇರಿದಂತೆ ೨೦ ಪ್ರಮುಖ ಸಲಹೆ ಹಾಗೂ ಶಿಫಾರಸ್ಸುಗಳನ್ನು ಬಿ.ಕೆ. ಸೋಮಶೇಖರ ಆಯೋಗವು ಸರಕಾರಕ್ಕೆ ಸಲ್ಲಿಸಿರುವ ಮಧ್ಯಾಂತರ ವರದಿಯಲ್ಲಿ ಸೂಚಿಸಿದೆ.


ಕಾರ್ಯಕ್ರಮದಲ್ಲಿ ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರು, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಸುಬ್ರಹ್ಮಣ್ಯೇಶ್ವರ ರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿದ್ಯಾಶಂಕರ್ ಉಪಸ್ಥಿತರಿದ್ದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವಾರ್ತಾಭಾರತಿ
ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-02 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಮಂಗಳೂರು: ನ್ಯಾಯಮೂರ್ತಿ ಸೋಮಶೇಖರ ತನಿಖಾ ಆಯೋಗದಿಂದ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ :
»

ಪ್ರತಿಸ್ಪಂದನ
ಸಂತೋಷ್, ಮಂಗಳೂರು
2010-02-02
ಕೆಲವು ಕ್ರಿಶ್ಚಿಯನ್ ಸಂಘಟನೆಗಳು ಈ ಹಿಂದೆ ಕೆಲವು ಸಂದರ್ಭಗಳಲ್ಲಿ ಆಮಿಷಗಳನ್ನು ನೀಡಿ ಸ್ಥಳಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತಾಂತರ ನಡೆಸಿರುವ ಘಟನೆಗಳು, ವಿದೇಶಿ ನಿಧಿ ಪಡೆಯುತ್ತಿರುವ ಕೆಲವು ಕ್ರೈಸ್ತ ಸಂಘಟನೆಗಳು, ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಲಾಗುತ್ತಿದೆ ಎಂಬ ಕಾರಣಗಳು ಕೆಲವು ಕ್ರೈಸ್ತ ಸಂಸ್ಥೆಗಳು ದಾಳಿಗೊಳಗಾಗಿರುವ ವಿಚಾರ ಆಯೋಗದ ವರದಿಯಲ್ಲಿರುವುದು ರಾಜ್ಯದ ಎಲ್ಲರಿಗೂ ತಿಳಿದ ವಿಚಾರವೇ ಹಾಗಿದೆ. ಆದರೇ ಇನ್ನು ಮುಂದೆ ಇಂತಹ ದುರ್ಘಟನೆಗಳು ಎಲ್ಲಿಯೂ ನಡೆಯದಂತೆ ಕ್ರಮ ಕೈಗೊಳ್ಳಲು ಆಯೋಗ ನೀಡಿರುವ ಪ್ರಮುಖ ಸಲಹೆಗಳು ಮತ್ತು ಶಿಫಾರಸ್ಸುಗಳು ಕಟ್ಟುನಿಟ್ಟಾಗಿ ಕಾರ್ಯರೂಪಕ್ಕೆ ಬಂದರೆ ಮಾತ್ರ ಸಾಧ್ಯವಿದೆ. ಒಂದು ಸಮಯ ಸರ್ಕಾರ ಕಾರ್ಯರೂಪಕ್ಕೆ ತಂದರೆ, ನೆಮ್ಮದಿಯಿಂದ ಇರುವ ಸಮಾಜದಲ್ಲಿ ರಾಜಕಾರಣಿಗಳು ತಮ್ಮ ರಾಜಕೀಯದ ಮೂಲಕ ತಮ್ಮ ತಮ್ಮ ಲಾಭವನ್ನು ಪಡೆದುಕೊಳ್ಳಲು ಸಾಧ್ಯವೇ?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012
»ನಾಪತ್ತೆಯಾಗಿದ್ದ ವ್ಯಕ್ತಿಯ ಅಸ್ಥಿಪಂಜರ ಪತ್ತೆ
»ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ನಂಗ ನಾಚಿಗೆ ಮುಖ್ಯಮಂತ್ರಿ ಸಮರ್ಥನೆ : ಸಿ.ಎಮ್. ರಾಜಿನಾಮೆಗೆ ಜನಾರ್ಧನ್ ಪೂಜಾರಿ ಆಗ್ರಹ
»ರೇವ್ ಪಾರ್ಟಿ ಪಶು ಸಂಸ್ಕೃತಿಯ ಪ್ರತೀಕ : ಅಶೋಕ್ ಸಿಂಘಾಲ್ ಖಂಡನೆ | ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ
»ಮಲ್ಪೆ ರೇವ್ ಪಾರ್ಟಿ ಪ್ರಕರಣ : ಜೆಡಿ‌ಎಸ್ ವಿನೂತನ ಪ್ರತಿಭಟನೆ
»ರೇವ್ ಪಾರ್ಟಿಯಿಂದ ಪವಿತ್ರ ಕ್ಷೇತ್ರ ಅಪವಿತ್ರ: ಇಂತಹ ವಿಕೃತಿ ಎಲ್ಲಿಯೂ ನಡೆಯಬಾರದು : ಪೇಜಾವರ ಶ್ರೀ ಪ್ರತಿಕ್ರೀಯೆ
»ಕಿದಿಯೂರ್ ಹೋಟೆಲ್ ನ ನೂತನ ಶಿಲಾದೇಗುಲದಲ್ಲಿ ನಾಗದೇವರ ಪುನ:ಪ್ರತಿಷ್ಠೆ : ವಿಶೇಷ ಪೂಜಿತ ನಾಗರಕ್ಷಾದಾರ ಧಾರಣೆ
»ಅಖಿಲ ಭಾರತ ಬಿಲ್ಲವರ ಯೂನಿಯನ್ ಗೆ 100ರ ಸಂಭ್ರಮ:ಫೆ.12ರಂದು ಮುಖ್ಯಮಂತ್ರಿಗಳಿಂದ ಚಾಲನೆ
»ಸ್ಟ್ರಿಂಗ್ ಝೂಕ್ ನಲ್ಲಿ ಅತಿರೇಕವಾಗಿದ್ದರೆ ಕರ್ತವ್ಯದಲ್ಲಿದ್ದವರಿಂದ ವರದಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು
»ಹೋಟೆಲ್ ಕಿದಿಯೂರ್ ರಜತ ಮಹೋತ್ಸವ ಉದ್ಘಾಟನೆ
»ಭಟ್ಕಳ: ಮಾವಿನಕಟ್ಟೆ ಬಳಿ ಭೀಕರ ಅಪಘಾತ; ಕೇರಳದ ಇಬ್ಬರ ದುರ್ಮರಣ
»ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಕೋಮು ಕಾಯ್ದೆ ವಿರುದ್ಧ ರಾಷ್ಟ್ರಾದ್ಯಂತ ಹೋರಾಟ: ಸಿಂಘಾಲ್‌
»ಮೂಡಬಿದಿರೆ ಪುರಸಭೆಗೆ ’ವರ್ಲ್ಡ್ ವಾಟರ್‌ ಅವಾರ್ಡ್‌’
»ಪೆರುಂಬಳ ದುರಂತ: ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳ ಸಾವು
»ಬಿ.ಸಿ.ರೋಡ್: ಪೈಪ್‌ಲೈನ್ ಒಡೆದು ಪೋಲಾಗುತ್ತಿರುವ ನೀರು
»ಬೆಂಡರವಾಡಿಗೆ ‘ಪನ್ನಾಭ ಪುರಸ್ಕಾರ’
»ಬ್ಯಾರಿ ಅಕಾಡಮಿಯ ನೂತನ ಅಧ್ಯಕ್ಷರ ಪದಗ್ರಹಣ
»ಫೆ.11-12: ಮಂಗಳೂರು ಧರ್ಮ ಪ್ರಾಂತ್ಯದ ಶತಮಾನೋತ್ತರ ಬೆಳ್ಳಿ ಹಬ್ಬ
»‘ಅಲ್‌ಪೈನ್ ಅಸೋಸಿಯೇಟ್ಸ್’ಗೆ ನಾಲ್ಕನೆ ವರ್ಷದ ಸಂಭ್ರಮ: ಆಯುರ್ವೇದ-ಯುನಾನಿ ಔಷಧಿಗಳು, ತಜ್ಞರಿಂದ ಚಿಕಿತ್ಸೆ
»ಪುತ್ತೂರು: ಯಕ್ಷಗಾನ ಬಯಲಾಟ ಸಪ್ತಾಹ ಉದ್ಘಾಟನೆ
»ವಿರೋಧದ ನಡುವೆಯೂ ಸೂಲಿಬೆಲೆ ಭಾಷಣ...
»ಹೋಟೆಲ್ ಕಿದಿಯೂರ್ ರಜತ ಸಂಭ್ರಮ: ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಬೃಹತ್ ಹೊರಕಾಣಿಕೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri