ಮಂಗಳೂರು: ನ್ಯಾಯಮೂರ್ತಿ ಸೋಮಶೇಖರ ತನಿಖಾ ಆಯೋಗದಿಂದ ಸರಕಾರಕ್ಕೆ ಮಧ್ಯಂತರ ವರದಿ ಸಲ್ಲಿಕೆ : |
ಪ್ರಕಟಿಸಿದ ದಿನಾಂಕ : 2010-02-01
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು ಜನವರಿ 01: ಸೆಪ್ಟೆಂಬರ್ 2008ರಲ್ಲಿ ರಾಜ್ಯದಲ್ಲಿ ಪ್ರಾರ್ಥನಾ ಮಂದಿರ ಗಳ ಮೇಲೆ ನಡೆದ ದಾಳಿಪ್ರಕರಣದ ನ್ಯಾಯಾಂಗ ತನಿಖೆಯ ಮಧ್ಯಂತರ ವರದಿ ಯನ್ನು ನ್ಯಾಯಮೂರ್ತಿ ಸೋಮಶೇಖರ ತನಿಖಾ ಆಯೋಗವು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಸಲ್ಲಿಸಿತು.
ವಿಚಾರಣೆಯ ಸಂದರ್ಭದಲ್ಲೆ ಈ ಮಧ್ಯಂತರ ವರದಿ ಸಲ್ಲಿಸಲಾಗುತ್ತಿದ್ದು, ದ.ಕ. ಜಿಲ್ಲಾಡಳಿತದ ಕಾನೂನು ಇಲಾಖೆ ಮುಖ್ಯ ಕಾರ್ಯದರ್ಶಿ ಸಿದ್ದೇಶ್ವರ, ರಾಜ್ಯಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಭಿಜೀತ್ ದಾಸ್ ಗುಪ್ತ, ಸರ್ಕಾರದ ಪರವಾಗಿ ವರದಿ ಸ್ವೀಕರಿಸಿದರು.
ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಪಶ್ಚಿಮ ವಲಯ ಐಜಿಪಿ ಗೋಪಾಲ್ ಹೊಸೂರ್, ದ.ಕ.ಜಿಲ್ಲಾಧಿಕಾರಿ ಪೊನ್ನುರಾಜ್, ದ.ಕ.ಪೊಲೀಸ್ ವರಿಷ್ಠಾಧಿಕಾರಿ ಡಾ| ಸುಬ್ರಹ್ಮಣ್ಯೇಶ್ವರ ರಾವ್, ಜಿ.ಪ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಹಾಗೂ ಈ ಪ್ರಕರಣಗಳ ಬಗ್ಗೆ ವಾದಿಸಿದ ನ್ಯಾಯವಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಧ್ಯಂತರ ವರದಿಯ ಪ್ರಮುಖ ಕೆಲವು ಅಂಶಗಳು:
೧. ಸೆಪ್ಟೆಂಬರ್ ೨೦೦೮ರಲ್ಲಿ ನಡೆದ ಈ ಘಟನೆಯಿಂದ ದ.ಕ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ವೈಫಲ್ಯತೆ ಎದ್ದು ಕಾಣುತ್ತಿದೆ.
೨. ಕ್ರೈಸ್ತರು ಮತಾಂತರ ಪ್ರಕ್ರಿಯೆಯಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
೩. ಈ ಪ್ರಕರಣದಲ್ಲಿ ಅನ್ಯಾಯವಾಗಿರುವವರಿಗೆ ಒಂದು ತಿಂಗಳ ಒಳಗೆ ಪರಿಹಾರ ಸಿಗಬೇಕು.
೪. ದೇವಾಸ್ಥನ, ಚರ್ಚ್, ಮಸೀದಿಗಳಿಗೆ ಪೊಲೀಸರ ಪ್ರವೇಶವನ್ನು ( ಬಂದೋಬಸ್ತ್ ಹೊರತು ಪಡಿಸಿ) ನಿಷೇಧಿಸ ಬೇಕು.
೫. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಗುಪ್ತಚಾರ ಇಲಾಖೆ ನೇಮಕ.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ.ಎಸ್.ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-02-01 00:00:00
|
|
|