ಮುಲುಂಡ್ಸ್ ಬಂಟ್ಸ್ ವಾರ್ಷಿಕೋತ್ಸವದಲ್ಲಿ ಮಿಂಚಿದ ಲಕ್ಷೀಶ್ ಕೋಟೆಕಾರ್ |
ಪ್ರಕಟಿಸಿದ ದಿನಾಂಕ : 2010-01-31
ಬಹ್ರೈನ್: ಮುಂಬಯಿ ಬಂಟರ ಸಾಮುದಾಯಿಕ ಸಂಘಟನೆಗಳೊಲ್ಲೊಂದಾದ ’ಮುಲುಂಡ್ ಬಂಟ್ಸ್’ (mulund Bunts) ಇದರ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚಿಗೆ ಮುಂಬೈಯ ಮುಲುಂಡ್ (ಪ) ಉಪನಗರದ ಮಹಾಕವಿ ಕಾಳಿದಾಸ ನಾಟ್ಯಗೃಹದಲ್ಲಿ ಜರಗಿತು.
ಈ ವೈಭವೋಚಿತ ಕಾರ್ಯಕ್ರಮಕ್ಕೆ ’ಬಂಟ್ಸ್ ಬಹ್ರೈನ್’ ಸಂಘಟನೆಯ ಸಾಂಸ್ಕೃತಿಕ ರಾಯಭಾರಿಯಾಗಿ ಬಹ್ರೈನ್ ಖ್ಯಾತ ಕಲಾವಿದರಲ್ಲೋರ್ವರಾದ ಲಕ್ಷೀಷ ಶೆಟ್ಟಿ ಕೋಟೆಕಾರ್ ಇವರು ಆಹ್ವಾನಿತರಾಗಿದ್ದರು.
ಈ ವಾರ್ಷಿಕೋತ್ಸವದ ಪ್ರಧಾನ ಅತಿಥಿಯಾದ ಸ್ವೀಡನ್ ದೇಶದ ಭಾರತೀಯ ರಾಯಭಾರಿ ಶ್ರೀ ಬಾಲಕೃಷ್ಣ ಶೆಟ್ಟಿ ಹಾಗೂ ಗೌರವ ಅತಿಥಿಯಾದ ಬಿ.ಸಿ.ಸಿ.ಐ ಯ ವಿಶ್ವ ಕ್ರಿಕೆಟ್ ಕೂಟದ ನಿರ್ದೇಶಕ ಪ್ರೊ.ರತ್ನಾಕರ್ ಶೆಟ್ಟಿ ಇವರ ಸಮ್ಮುಖದಲ್ಲಿ ಜರಗಿದ ಈ ಅದ್ದೂರಿಯ ಸಾಂಸ್ಕೃತಿಕ ಉತ್ಸವದಲ್ಲಿ ಲಕ್ಷೀಶ್ ರವರೌ ತನ್ನ ಅಪ್ರತಿಮ ಪ್ರತಿಭಾಪೂರ್ಣ ಕಲಾಪ್ರದರ್ಶನವಿತ್ತರು.
ಇವರ ಒಟ್ಟು ಪ್ರದರ್ಶನದಲ್ಲಿ ’ಕುಮಾರ ವಿಜಯ’ ಯಕ್ಷಗಾನ ಕಥಾ ಪ್ರಸಂಗದ ’ಜಯಂತ’ನ ಪಾತ್ರ ಮತ್ತು ’ಬಬ್ರುವಾಹನ’ ಚಲನ ಚಿತ್ರದ ’ಅರ್ಜುನ -ಬಬ್ರುವಾಹನ ಯುಧ್ದ ಸನ್ನಿವೇಶದಲ್ಲಿನ ಬಬ್ರುವಾಹನ ಪಾತ್ರ ಪ್ರಸ್ತುತಿಯ ಮನೋಜ್ನ ಏಕ ಪಾತ್ರಾಭಿನಯ ಹಾಗೂ ಆಕರ್ಷಣೀಯ ಸಿನಿಮಾ ನೃತ್ಯಗಳು, ಅಂತೆಯೇ ಹೆಣ್ಣು-ಗಂಡು ಅವಳಿ ರಾಗ- ಮಾಧುರ್ಯದ ( ಡಾ.ರಾಜ್ ಕುಮಾರ್ ಹಾಡಿರುವ) ಕನ್ನಡ ಚಿತ್ರಗೀತೆಗಳ ಹಾಡುವಿಕೆಯೂ ಸೇರಿದ್ದು, ಇವೆಲ್ಲವೂ ಕಾರ್ಯಕ್ರಮದಲ್ಲಿ ಕಿಕ್ಕಿರಿದು ಸೇರಿದ್ದ ಮುಂಬಯಿ ಕಲಾರಸಿಕರ ಹೃನ್ಮನವನ್ನು ಗೆಲ್ಲುವ ಮೂಲಕ ’ಬಂಟ್ಸ್ ಬಹರೈನ್’ ನ ಕೀರ್ತಿ ಕಿರೀಟಕ್ಕೆ ಮತ್ತೊಂದು ತುರಾಯಿಯನ್ನು ತಂದೊಪ್ಪಿಸಿತು.
ವರದಿಯ ವಿವರಗಳು |
 |
ಕೃಪೆ : ಲೀಲಾಧರ್ ಬೈಕಂಪಾಡಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-31 00:00:00
|
|
| Nagaraj Rao, ...The Mangalorean... | 2010-02-13 | | good work lakshmeesh ... all the best |
| Chethana Rajendra, Bahrain | 2010-02-09 | | Congratulations laxmessh. It is great. Keep it up. May God be with you in all your activities. |
| Poornima Jagdish, Mangalore/Bahrain | 2010-01-31 | | Well done Laxmeesh. May god bless u always and All the Best. |
|