ಶ್ರೀಕೃಷ್ಣದೇವರಾಯ ಕನ್ನಡ ದ್ರೋಹಿ: ಡಾ. ಕಲ್ಬುರ್ಗಿ |
ಪ್ರಕಟಿಸಿದ ದಿನಾಂಕ : 2010-01-30
ತೆಲುಗು ಪಕ್ಷಪಾತಿಯಾಗಿದ್ದ ಶ್ರೀಕೃಷ್ಣದೇವರಾಯ ಕನ್ನಡ ವಿರೋಧಿಯಾಗಿದ್ದರು. ಇಂಥ ನಾಡದ್ರೋಹಿ ಅರಸನ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಮಹೋತ್ಸವ ಆಚರಿಸುತ್ತಿರುವ ಕರ್ನಾಟಕ ಸರ್ಕಾರದ ಕ್ರಮ ಖಂಡನೀಯ ಎಂದು ಖ್ಯಾತ ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.
ಗುಲ್ಬರ್ಗ ಮಾತನಾಡಿದ ಅವರು, ಶ್ರೀಕೃಷ್ಣದೇವರಾಯ ‘ದೇಶಭಾಷೆಯಲ್ಲೇ ತೆಲುಗು ಭಾಷೆ ಲೇಸು’ಎಂದು ಹೇಳಿದ್ದನ್ನು ಉಲ್ಲೇಖಿಸಿ, ತಾಳಿಕೋಟೆಯಲ್ಲಿ ನಡೆದ ಕದನ ಹಿಂದು- ಮುಸ್ಲಿಮರ ನಡುವೆ ನಡೆದ ಕದನ ಅಲ್ಲ. ಅದು ಕನ್ನಡಿಗರ ಮತ್ತು ತೆಲುಗರ ನಡುವಿನ ಕದನ ಎಂದು ಸ್ಪಷ್ಟಪಡಿಸಿದರು. ತೆಲುಗು ಭಾಷಿಕರಿಗೆ ಕನ್ನಡದ ನೆಲದಲ್ಲಿ ನುಗ್ಗಲು ಮೊದಲು ಗೇಟ್ ತೆಗೆದ ವ್ಯಕ್ತಿಯೇ ಶ್ರೀಕೃಷ್ಣದೇವರಾಯ. ಇಂಥ ಕನ್ನಡದ್ರೋಹಿ ಅರಸನ ಪಟ್ಟಾಭಿಷೇಕದ 500ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಸರ್ಕಾರವು ಕೋಟಿಗಟ್ಟಲೆ ಖರ್ಚು ಮಾಡಿರುವುದು ನಾಚಿಕೆಗೇಡು ಎಂದು ಅವರು ಆಕ್ಷೇಪ ಸೂಚಿಸಿದರು.
ತಿರುಚಿ ಬರೆದ ಇತಿಹಾಸವನ್ನೇ ಸರಿ ಎಂದು ನಂಬಿರುವ ನಾವು ಸತ್ಯವನ್ನು ಶೋಧಿಸುವ ಕೆಲಸದಲ್ಲಿ ತೊಡಗಬೇಕು. ಸಂಶೋಧನೆಯ ಸತ್ಯ ತಿಳಿದುಕೊಂಡು ಭಾಷಿಕವಾಗಿ ಸಮನ್ವಯದಿಂದ ಬಾಳಬೇಕು ಎಂದು ಅವರು ತಿಳಿಸಿದರು.
ಶ್ರೀಕೃಷ್ಣದೇವರಾಯ ಕನ್ನಡ ವಿರೋಧಿ ಆಗಿರುವುದಕ್ಕೆ ತಮ್ಮ ಬಳಿ ಅನೇಕ ಸಾಕ್ಷಿ, ಪುರಾವೆಗಳು ಇವೆ ಎಂದು ಸವಾಲು ಹಾಕಿದರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-30 00:00:00
|
|
| Ramesh pai, karkala | 2010-01-30 | | adu obba muslimanu maadididdare adu mulegumpagutithu avaru teluganaagi nodalilla obba hindu vaagi nodidaru eidannu kannadigarella kandisabeku jathi beda maretu ellarigu samaanavagi kaani maanya mukyamantrigale |
|