ರಾಜ್ಯಮಟ್ಟದ ನಾಟಕ ಸ್ಪರ್ಧೆ: ‘ಉಚಲ್ಯ’ ಪ್ರಥಮ |
ಪ್ರಕಟಿಸಿದ ದಿನಾಂಕ : 2008-12-05
ಉಡುಪಿ, ಡಿ.೪: ಉಡುಪಿಯ ನಾಟಕ ಸಂಸ್ಥೆ ರಂಗಭೂಮಿ ದಿ|ಡಾ| ಟಿ.ಎಂ.ಎ. ಪೈ, ದಿ|ಎಸ್.ಎಲ್. ನಾರಾಯಣ ಭಟ್, ದಿ|ಮಲ್ಪೆ ಮಧ್ವರಾಜ್ ಸ್ಮರಣಾರ್ಥ ನಡೆಸಿದ ರಾಜ್ಯ ಮಟ್ಟದ ೨೯ನೆಯ ಕನ್ನಡ ನಾಟಕ ಸ್ಪರ್ಧೆಯಲ್ಲಿ ಹಾಸನದ ‘ರಂಗಸಿರಿ’ ತಂಡ ಪ್ರದರ್ಶಿಸಿದ ‘ಉಚಲ್ಯ’ ನಾಟಕ ಡಾ|ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ ಮತ್ತು ದಿ|ಪುತ್ತು ವೈಕುಂಠ ಶೇಟ್ ಸ್ಮಾರಕ ಪ್ರಥಮ ನಗದು ಬಹುಮಾನ ೧೨,೦೦೦ ರೂ. ಗಳಿಸಿದೆ.
ಬೆಂಗಳೂರು ಬಿಇಎಲ್ ಲಲಿತಕಲಾ ಸಂಘದ ‘ಅಂತಃಕರಣ’ ನಾಟಕಕ್ಕೆ ಕೆ.ಆನಂದ ಗಾಣಿಗ ಪ್ರಾಯೋಜಿತ ನಗದು ೭,೦೦೦ ರೂ., ಭದ್ರಾವತಿಯ ಎಂ.ಪಿ.ಎಂ. ಲಲಿತಕಲಾ ಸಂಘದ ‘ಮಾಡ್ದೋರ್ ಪಾಪ ಆಡ್ದೋರ್ ಬಾಯಾಗ’ ನಾಟಕವು ಪಿ.ವಾಸುದೇವ ರಾವ್ ಮತ್ತು ಡಾ|ಪಿ.ಗಣಪತಿ ರಾವ್ ಪ್ರಾಯೋಜಿತ ನಗದು ೪,೦೦೦ ರೂ. ಗಳಿಸಿದೆ.
‘ಉಚಲ್ಯ’ ನಾಟಕ ನಿರ್ದೇಶಕ ಮಹದೇವು ಹಡಪದ ಅವರು ಶ್ರೇಷ್ಠ ನಿರ್ದೇಶನಕ್ಕೆ ಪ್ರಥಮ ಬಹುಮಾನ ಮತ್ತು ಡಾ|ಟಿ.ಎಂ.ಎ.ಪೈ ಸ್ಮಾರಕ ಪರ್ಯಾಯ ಫಲಕ ಮತ್ತು ನಗದು ೨,೦೦೦ ರೂ. ಗಳಿಸಿದ್ದಾರೆ.
‘ಅಂತಃಕರಣ’ ನಾಟಕ ನಿರ್ದೇಶಕ ಲಕ್ಷ್ಮಣ ರಾವ್, ‘ಮಾಡ್ದೋರ್ ಪಾಪ ಆಡ್ದೋರ್ ಬಾಯಾಗ’ ನಿರ್ದೇಶಕ ಎಚ್.ಎ. ಮಹೇಂದ್ರ ಶ್ರೇಷ್ಠ ನಿರ್ದೇಶನದ ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದ್ದಾರೆ.
ಇತರ ಬಹುಮಾನ:
ಶ್ರೇಷ್ಠನಟ: ೧. ಲಕ್ಷ್ಮಣ ರಾವ್- ‘ಶಿವಪ್ಪ’, ‘ಅಂತಃಕರಣ’ ನಾಟಕ, ೨. ದಿವಾಕರ ಉಡುಪಿ - ಜೋರ್ದಾನ್, ‘ಮಾಮಾಮೋಶಿ’ ಸಂಗಮ ಕಲಾವಿದೆರ್, ಮಣಿಪಾಲ, ೩. ವಿಶ್ವನಾಥ- ‘ಮಾಣಿಕ್‌ದಾದ’, ‘ಉಚಲ್ಯ’ ರಂಗಸಿರಿ ಹಾಸನ.
ಶ್ರೇಷ್ಠ ನಟಿ: ೧. ಕಮನೀಧರನ್- ‘ಪಾರವ್ವ’, ‘ಅಂತಃಕರಣ’, ೨. ಶ್ರುತಿ ಸಿ. ಶೆಟ್ಟಿ- ‘ಸರಸಿಜಾಕ್ಷಿ’, ‘ಮಾಡ್ದೋರ್ ಪಾಪ ಆಡ್ದೋರ್ ಬಾಯಾಗ’, ೩. ನಾಜೀಮಾ - ‘ತಾಯಿ’, ‘ಉಚಲ್ಯ’.
ಶ್ರೇಷ್ಠ ಸಂಗೀತ: ೧. ‘ಉಚಲ್ಯ’, ೨. ‘ಮಾಡ್ದೊರ್ ಪಾಪ ಆಡ್ದೋರ್ ಬಾಯಾಗ’, ೩. ‘ಅಂತಃಕರಣ’.
ಶ್ರೇಷ್ಠ ಬೆಳಕು ಮತ್ತು ರಂಗಪರಿಕರ: ೧. ‘ಉಚಲ್ಯ’, ೨. ‘ಮಾಮಾಮೋಶಿ’, ೩. ‘ಅಂತಃಕರಣ’. ಶ್ರೇಷ್ಠ ಪ್ರಸಾಧನ: ೧. ‘ಉಚಲ್ಯ’, ೨. ‘ಮಾಡ್ದೋರ್ ಪಾಪ ಆಡ್ದೋರ್ ಬಾಯಾಗ’, ೩. ‘ಮಾಮಾಮೋಶಿ’. ಮೆಚ್ಚುಗೆ ಬಹುಮಾನ: ೧. ನಾಗಭೂಷಣ ನಾಗಳ್ಳಿ- ‘ಶಿವಪ್ರಸಾದ’, ‘ನಮ್ಮೊಳಗೊಬ್ಬ ನಾಜೂಕಯ್ಯ’, ನೃಪತುಂಗ ನಾಟ್ಯ ಕಲಾರಂಗ, ಶಕ್ತಿನಗರ, ೨. ಎಂ.ಎಸ್.ಭಟ್ - ‘ಕರಿಯಣ್ಣ’, ‘ಜೊತೆಗಿರುವನು ಚಂದಿರ’, ಸುಮನಾ ಕೊಡವೂರು, ೩. ಮನು - ‘ಲಕ್ಷ್ಮಣ/ತೂಕ್ಯ’ ಮತ್ತು ೪. ಜವರಯ್ಯ- ‘ಲಿಂಗಪ್ಪ’, ‘ಉಚಲ್ಯ’ ರಂಗಸಿರಿ ಹಾಸನ, ೫. ಬಿ.ವಿ.ತಿಪ್ಪಣ್ಣ- ‘ಆಚಾರ್ಯ ಕಲ್ಹಣ’, ‘ಸೂರ್ಯಶಿಕಾರಿ’ ಸಹ್ಯಾದ್ರಿ ರಂಗ ತರಂಗ, ಶಿವಮೊಗ್ಗ.
ಬಾಲ ನಟನೆ: ಅಂಜನ್ ನಾಗೇಂದ್ರ- ‘ಕಿರಿಯ ಲಕ್ಷ್ಮಣ’- ‘ಉಚಲ್ಯ’.
ಜ.4 ರ ಸಂಜೆ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗಮಂಟಪ ದಲ್ಲಿ ಬಹುಮಾನ ವಿತರಣೆ, ರಂಗನಟ ಕೆ.ಎನ್.ಟೈಲರ್ ಅವರಿಗೆ ಸಮ್ಮಾನ, ‘ಉಚಲ್ಯ’ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ಕುತ್ಪಾಡಿ ಆನಂದ ಗಾಣಿಗ, ಪಿ.ವಾಸುದೇವ ರಾವ್ ಅವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05
|
|
|