ಭಟ್ಕಳ: ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಸ್ಕಾರ್ಪಿಯೋ ವಾಹನವು ಭಟ್ಕಳದಿಂದ ಶೀರೂರು ಕೆಡೆಗೆ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರವಹನದಲ್ಲಿ ಪ್ರಯಾಣಿಸುತ್ತಿದ್ದ ಭಟ್ಕಳದ ಮುಹಮ್ಮದ ಅನ್ಸಾರ್ ಅಲಿ ಅಕ್ಬರ ಎಂಬುವವರಿಗೆ ಗಂಭೀರ ಗಾಯಗಳಾಗಿ ಮಂಗಳೂರು ಅಸ್ಪತ್ರಗೆ ದಾಖಲಿಸಿದ ಘಟನೆ ಇಂದು ಸಂಜೆ ೫-೩೦ ಕೆ ಸರ್ಪನಕಟ್ಟ ರಾ.ಹೆ.೧೭ರಲ್ಲಿ ಜರುಗಿದೆ.
ಈ ಅಪಘಾತದಲ್ಲಿ ಮುಹಮ್ಮದ್ ಅನ್ಸಾರ್ ಎಂಬುವವರ ಎರಡೂ ಕಾಲುಗಳು ನುಜ್ಜುಗುಜಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲಿಸರು ತನಿಖೆಯನ್ನು ಕೈಗೊಂಡಿದ್ದಾರೆ.