ಉಡುಪಿ: ಇದೀಗ ಬೆಂಗಳೂರಿಗೆ ವರ್ಗಗೊಂಡು ತೆರಳುತ್ತಿರುವ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಂ. ಬಸಪ್ಪ ಅವರನ್ನು ಬುಧವಾರ ಬುಡಗಬೆಟ್ಟು ಕ್ರೆಡಿಟ್ ಕೋ- ಅಪರೇಟಿವ್ ಸೊಸೈಟಿ ಸಭಾಂಗಣದಲ್ಲಿ ನಡೆದ ಸಭಾಂಗಣದಲ್ಲಿ ಹಾರ್ದಿಕವಾಗಿ ಬೀಳ್ಕೋಡಲಾಯಿತು.
ಸೊಸೈಟಿಯ ಅಧ್ಯಕ್ಷ ಸಂಜಿವ ಕಾಂಚನ್ ಅವರು ಬಸಪ್ಪ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಉಪನಿಬಂಧಕರಾಗಿ ಅಧಿಕಾರ ವಹಿಸಿಕೊಂಡ ಜ್ಯೋತೀಂದ್ರ ಅವರನ್ನು ಸ್ವಾಗತಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಬಸಪ್ಪ ಅವರು ಎಚ್ಚೆತ್ತ ಆಡಳಿತ ಮಂಡಳಿ, ಪ್ರಬುದ್ಧ ಗ್ರಾಹಕರು ಹಾಗೂ ಪ್ರಾಮಾಣಿಕ ಅಧಿಕಾರಿಗಳಿಂದ ಸಹಕಾರಿ ಕ್ಷೇತ್ರ ಸದೃಢವಾಗಿರಲು ಸಾಧ್ಯ ಎಂದರು. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಎರಡು ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಅರೋಗ್ಯಪೂರ್ಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷ ಉಮಾನಾಥ, ನಿರ್ದೇಶಕರುಗಳಾದ ಸಿ.ಎಫ್.ಹರ್ಬರ್ಟ್, ಪಿ.ಕೆ. ಸತ್ಯನಾರಾಯಣ, ಕೆ. ಭಾಸ್ಕರ ಪ್ರಭು, ಅಬ್ದುಲ್ ರಝಾಕ್, ಜಯ ಶೆಟ್ಟಿ, ರಘುರಾಮ ಶೆಟ್ಟಿ ಹಾಗೂ ಕಿಶನ್ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.