ಮಂಗಳೂರು: ಕೊಡಗು ಸೋಮವಾರಪೇಟೆಯ ಆನಂದ್ ಮತ್ತು ಭಾಗ್ಯದಂಪತಿಯ ಪುತ್ರನಾದ ೧೮ರ ಹರೆಯದ ಗೌರವ್ ಕೇವಲ ೭೪ ಸೆಂ.ಮೀ. ಉದ್ದ ಹಾಗೂ ೮ ಕೆ.ಜಿ ತೂಕ ಹೊಂದಿದ್ದು, ಒಂದು ವರ್ಷದ ಮಗುವನ್ನು ಹೋಲುತ್ತಿದ್ದಾರೆ.
ಗೌರವ್‌ಗೆ ಪಿಟ್ಯುಟರಿ ಗ್ರಂಥಿಯಿಮದ ಬರುವಂತಹ ಹಾರ್ಮೋನುಗಳ ಕೊರತೆಯಿರುವುದು ವೈದ್ಯಕೀಯ ತಪಾಸಣೆಯಿಂದ ತಿಳಿದು ಬಂದಿದ್ದು, ಈತನಿಗೆ ಹಾರ್ಮೋನು ಚಿಕಿತ್ಸೆ ಒದಗಿಸಿದ್ದಲ್ಲಿ ಗರಿಷ್ಠ ೪ರಿಂದ ೪.೫ ಅಡಿ ಈತ ಬೆಳೆಯಬಲ್ಲರು. ಇದಕ್ಕೆ ವರ್ಷಕ್ಕೆ ಎರಡರಿಂದ ಮೂರು ಲಕ್ಷ ರೂ. ಅಗತ್ಯವಿದೆ ಎಂದು ಎ.ಜೆ. ಅಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈತನ ಹೆತ್ತವರು ಅರ್ಥಿಕವಾಗಿ ಸಂಕಷ್ಟದಲ್ಲಿದ್ದು, ಸಾರ್ವಜನಿಕ ನೆರವಿನ ಮೂಲಕ ಈತನಿಗೆ ಹೊಸ ಬದುಕನ್ನು ನೀಡಲು ಸಾಧ್ಯ ಎಂದರು.
ಇದೀಗ ಎಜೆ ಅಸ್ಪತ್ರೆಯ ಹಲವಾರು ಹಾರ್ಮೋನು ಸಂಬಂಧಿ ಚಿಕಿತ್ಸೆಯನ್ನು ಉಚಿತವಾಗಿ ನಡೆಸಿದೆ. ಮುಂದಿನ ಚಿಕಿತ್ಸೆಗೆ ಗೌರವ್‌ಗೆ ಸಹಾಯ ನೀಡಲಿಚ್ಚಿಸುವವರು ಎಜೆ ಅಸ್ಪತ್ರೆಯ ಎಸ್‌ಬಿ ಅಕೌಂಟ್ ನಂಬ್ರ ೧೧೮೯೨೦೭೮೨೧ನ್ನು ಸಂಪರ್ಕಿಸಬಹುದು ಎಂದು ಪ್ರಶಾಂತ್ ಮಾರ್ಲ ತಿಳಿಸಿದರು.