ರಾಕೇಶ್ ಶೆಟ್ಟಿ, ಪೂವಮ್ಮ ಮಂಗಳೂರು ವಿವಿ ಶ್ರೇಷ್ಠ ಅಥ್ಲೀಟ್ಸ್ |
ಪ್ರಕಟಿಸಿದ ದಿನಾಂಕ : 2008-12-05
ಬ್ರಹ್ಮಾವರ: ಆಳ್ವಾಸ್ ಕಾಲೇಜು ಮೂಡಬಿದ್ರೆಯ ರಾಕೇಸ್ ಅರ್. ಶೆಟ್ಟಿ ಹಾಗೂ ಮಂಗಳೂರು ಎಸ್‌ಡಿಎಂ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಕಾಲೇಜಿನ ಎಂ. ಅರ್. ಪೂವಮ್ಮ ಅವರು ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಮುಕ್ತಾಯಗೊಂಡ ೨೮ನೆ ಮಂಗಳೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ ಚಾಂಪಿಯನ್ ಶಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದ ವೈಯಕ್ತಿಕ ಚಾಂಪಿಯನ್‌ಗಳಾಗಿ ಮೂಡಿಬಂದರು.
ಆಳ್ವಾಸ್ ಕಾಲೇಜಿನ್ ಪುರುಷರ ತಂಡ ೨೦೭ ಅಂಕಗಳೊಂದಿಗೆ ಅಗ್ರಸ್ಥನಿಯಾದರೆ, ಎಸ್‌ಡಿಎಂ ಉಜಿರೆ ೫೧ ಅಂಕಗಳೊಂದಿಗೆ ಎರಡನೆ ಹಾಗೂ ನಿಟ್ಟಿಯ ಡಾ. ಎನ್‌ಎಸ್‌ಎಎಂ ಹಾಗೂ ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜು ತಂಡಗಳು ತಲಾ ೩೩ ಅಂಕಗಳೊಂದಿಗೆ ಮೂರನೆ ಸ್ಥಾನ ಹಂಚಿಕೊಂಡವು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು ಮೂಡಬಿದ್ರೆ ಒಟ್ಟು ೧೬೭ ಅಂಕಗಳೊಂದಿಗೆ ವಿವಿ ಚಾಂಪಿಯನ್ ಅಗಿ ಮೂಡಿಬಂದರೆ, ಮೂಡಬಿದರೆಯ ಆಳ್ವಾಸ್ ಕಾಲೇಜ್ ಅಫ್ ಫಿಜಿಕಲ್ ಎಜ್ಯುಕೇಶನ್ ಒಟ್ಟು ೬೭ ಅಂಕಗಳೊಂದಿಗೆ ಎರಡನೆ ಸ್ಥಾನಿಯಾಯಿತು. ಎಸ್‌ಡಿಎಂ ಉಜಿರೆ ೬೬ ಅಂಕಗಳೊಂದಿಗೆ ಮೂರನೆ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್‌ಎಂಎಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವೆ. ರೆ. ರಂಬಾನ್ ಜಿ. ಎಂ. ಸ್ಕರಿಯಾ ವಹಿಸಿದ್ದರು. ಪ್ರಾಂಶುಪಾಲ ಪ್ರೊ. ಕೆ. ನಾರಾಯಣ ಸ್ವಾಗತಿಸಿದರೆ, ದೈಹಿಕ ನಿರ್ದೇಶಕ ಚಂದ್ರಶೇಖರ ಹೆಗ್ಡೆ ಗುಲ್ವಾಡಿ ವಂದಿಸಿದರು. ಸಾಲ್ವಡೋರ್ ನರ್‍ಹೋನಾ ಕಾರ್ಯಕ್ರಮ ನಿರ್ವಹಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಗ.ಕ.ಕರಾವಳಿ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-05
|
|
|