ಐಎಸ್‌ಐ ಕೈವಾಡ-ಭಾರತದ ಬಳಿ ಪುರಾವೆ ಇದೆ |
ಪ್ರಕಟಿಸಿದ ದಿನಾಂಕ : 2008-12-04
ನವದೆಹಲಿ, ಗುರುವಾರ, 4 ಡಿಸೆಂಬರ್ 2008 ವಾಣಿಜ್ಯ ನಗರಿ ಮುಂಬೈ ಮೇಲೆ ಉಗ್ರರು ನಡೆಸಿದ ದಾಳಿಯ ಹಿಂದೆ ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್‌ಐ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಕೈವಾಡದ ಬಗ್ಗೆ ಭಾರತದ ಬಳಿ ಸಾಕ್ಷ್ಯಾಧಾರ ಇರುವುದಾಗಿ ಮಾಧ್ಯಮವೊಂದರ ವರದಿ ಬಹಿರಂಗಪಡಿಸಿದೆ.
ಮುಂಬೈ ಮೇಲಿನ ದಾಳಿಗಾಗಿ ಯಾವ ಸ್ಥಳದಲ್ಲಿ ಮತ್ತು ಯಾರಿಗೆ ತರಬೇತಿ ನೀಡಲಾಗಿದೆ ಎಂಬ ಕುರಿತು ಭಾರತ ಸರಕಾರದ ಬಳಿ ಪುರಾವೆ ಇರುವುದಾಗಿ ಮೂಲಗಳು ತಿಳಿಸಿದೆ.
ಆ ನಿಟ್ಟಿನಲ್ಲಿ ಮುಂಬೈ ದಾಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪುರಾವೆಯನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಳ್ಳುವ ಬಗ್ಗೆ ಅಮೆರಿಕ ನಂಬಿರುವುದಾಗಿ ವರದಿ ಹೇಳಿದೆ.
ಮುಂಬೈಯ ದಾಳಿಯ ಹಿಂದೆ ಲಷ್ಕರ್ ಎ ತೊಯ್ಬಾದ ಕೈವಾಡ ಇರುವ ಬಗ್ಗೆ ಪುರಾವೆ ಒದಗಿಸದಲ್ಲಿ ಲಷ್ಕರ್ ವರಿಷ್ಠ ಹಾಫೀಜ್ ಸಯೀದ್‌ನನ್ನು ಬಂಧಿಸಬೇಕು ಎಂದು ಅಮೆರಿಕ ಪಾಕ್‌ಗೆ ಎಚ್ಚರಿಸಿತ್ತು.
ಮುಂಬೈ ದಾಳಿಯಲ್ಲಿ ಪಾಕ್ ಕೈವಾಡ ಇರುವ ಬಗ್ಗೆ ಈಗ ದೊರೆತಿರುವ ಪುರಾವೆ ಸಾಕು ಎಂಬುದಾಗಿ ಅಮೆರಿಕದ ಅಡ್ಮಿರಲ್ ಮೈಕ್ ಮುಲ್ಲೆನ್ ಅವರು ಬುಧವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-04
|
|
|