|
ಪ್ರಕಟಿಸಿದ ದಿನಾಂಕ : 2008-12-04
( ಚಿತ್ರ: ರೋನ್ಸ್ ಬಂಟ್ವಾಳ್)
ಹಿಂದೆಂದೂ ಕಂಡರಿಯದ ರೀತಿಯಲ್ಲಿ ಉಗ್ರರು ಭೀಕರ ದಾಳಿ ನಡೆಸಿದ ಒಂದು ವಾರದ ನಂತರ ಇಲ್ಲಿನ ಜನದಟ್ಟಣೆಯ ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಬುಧವಾರ ಸಂಜೆ ಇನ್ನೆರಡು ಶಕ್ತಿಶಾಲಿ ಬಾಂಬ್‌ಗಳು ಪತ್ತೆಯಾದವು.
ಮುಂಬೈ (ಐಎಎನ್‌ಎಸ್): ಎರಡು ಪ್ರತ್ಯೇಕ ಬ್ಯಾಗ್‌ಗಳಲ್ಲಿದ್ದ, ತಲಾ ನಾಲ್ಕು ಕಿ.ಲೋ. ಆರ್‌ಡಿಎಕ್ಸ್ ಸ್ಫೋಟಕ ಹೊಂದಿದ್ದ ಈ ಬಾಂಬ್‌ಗಳನ್ನು ಪತ್ತೆಯಾದ ತಕ್ಷಣವೇ ನಿಷ್ಕ್ರಿಯಗೊಳಿಸಲಾಯಿತು. ಇಲ್ಲದಿದ್ದರೆ ಮತ್ತೊಂದು ದುರಂತ ಸಂಭವಿಸುತ್ತಿತ್ತು ಎಂದು ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಹೇಳ್ದಿದಾರೆ.
ಇದಕ್ಕೆ ಕೆಲವೇ ಕ್ಷಣಗಳ ಮುನ್ನ ಮಹಾರಾಷ್ಟ್ರ ಮುಖ್ಯ ಮಂತ್ರಿ ವಿಲಾಸ್ ರಾವ್ ದೇಶ್‌ಮುಖ್ ಅವರೂ ಇಲ್ಲಿ ಪರಿಶೀಲನೆ ನಡೆಸಿದ್ದರು.
ಕಳೆದ ವಾರದ ದಾಳಿ ಸಂದರ್ಭದಲ್ಲಿ ಬಲಿಯಾದವರ ಹಾಗೂ ನಿಲ್ದಾಣದಿಂದ ಭಯಗೊಂಡು ಓಡಿಹೋದವರ ಲಗೇಜ್ ಬ್ಯಾಗ್‌ಗಳು ಇನ್ನೂ ನಿಲ್ದಾಣದಲ್ಲೇ ಇದ್ದು ಉಗ್ರರ ಜಾಡು ಹಿಡಿಯಲು ಏನಾದರೂ ಸುಳಿವು ಲಭ್ಯವಾಗಬಹುದೆಂದು ಅವುಗಳ ತಪಾಸಣೆ ನಡೆಸುತ್ತಿದ್ದಾಗ ಈ ಬಾಂಬ್‌ಗಳು ಸಿಕ್ಕಿದವು.
ವರದಿಯ ವಿವರಗಳು |
 |
ಕೃಪೆ : ( ಚಿತ್ರ: ರೋನ್ಸ್ ಬಂಟ್ವಾಳ್) ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-12-04
|
|
|