ಮಂಗಳೂರು: ಯುನಿಟಿ ಆಸ್ಪತ್ರೆಯಲ್ಲಿ ಮಹಿಳೆ ಹೊಟ್ಟೆಯಲ್ಲಿ 37 ಕೆಜಿ ಗಡ್ಡೆ ಹೊರತೆಗೆದ ಯಶಸ್ವೀ ಶಸ್ತ್ರಚಿಕಿತ್ಸೆ |
ಪ್ರಕಟಿಸಿದ ದಿನಾಂಕ : 2008-12-04
ಮಂಗಳೂರು: ಭಾರವಾದ ಹೊಟ್ಟೆ, ನೋವು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರಿಗೆ ಶಸ್ತ್ರಕ್ರಿಯೆ ನಡೆಸಿದ ಮಂಗಳೂರಿನ ಯುನಿಟಿ ಆಸ್ಪತ್ರೆ ವೈದ್ಯರ ತಂಡ, ಆಕೆ ಹೊಟ್ಟೆಯಿಂದ 37.5 ಕೆಜಿ ಗಡ್ಡೆ ಹೊರತೆಗೆಯುವಲ್ಲಿ ಯಶಸ್ವೀ ಯಾಗಿದೆ.
ಮಂಗಳೂರಿನಲ್ಲಿ ಇಷ್ಟೊಂದು ದೊಡ್ಡ ಗಡ್ಡೆಯ ಶಸ್ತ್ರಕ್ರಿಯೆ ಸದ್ಯ ದಾಖಲೆಯಾಗಿದ್ದು, ಶಸ್ತ್ರಚಿಕಿತ್ಸೆ ಮಾಡಿಕೊಂಡ ಮಹಿಳೆ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಭಾರವಾದ ಹೊಟ್ಟೆ ಹೊತ್ತುಕೊಂಡು ನೋವಿನಿಂದ ಬಳಲುತ್ತಿದ್ದ ಸುರತ್ಕಲ್‌ನ ಅಮೀನಾ(45) ಎಂಬಾಕೆ ನಗರದ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದರು.

ನ.11ರಂದು ಆಸ್ಪತ್ರೆಯ ಕ್ಯಾನ್ಸರ್ ಸ್ಪೆಷಲಿಸ್ಟ್ ಸರ್ಜನ್ ಡಾ.ಜಲಾಲುದ್ದೀನ್ ಅಕ್ಬರ್ ನೇತೃತ್ವದಲ್ಲಿ ಅಮೀನಾಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಸುಮಾರು 7 ಗಂಟೆ ಕಾಲ ನಡೆದ ಈ ಲ್ಯಾಪರೊಟೊಮಿ ಶಸ್ತ್ರಚಿಕಿತ್ಸೆಯಲ್ಲಿ ಪ್ಲಾಸ್ಟಿಕ್ ಸರ್ಜನ್ ಡಾ.ತಂಗಮ್ಮ ವರ್ಗೀಸ್, ಡಾ.ಸುರೇಶ್ ಭಟ್(ಅನಸ್ತೇಶಿಯಾ), ಡಾ.ಪ್ರಕಾಶ್ ರೈ(ಜನರಲ್ ಸರ್ಜನ್), ವೈದ್ಯಕೀಯ ತಜ್ಞರಾದ ಡಾ.ಕೃಷ್ಣಪ್ರಸಾದ್, ಡಾ.ಸಯ್ಯದ್ ಸಿರಾಜುದ್ದೀನ್ ಕೈಜೋಡಿ ಸಿದ್ದರು.
ಸಾಮಾನ್ಯವಾಗಿ ಇಂಥ ಗಡ್ಡೆಗಳು 15ರಿಂದ 20 ಕೆಜಿವರೆಗೆ ಇರುತ್ತವೆ. ಆದರೆ, ಇದು ಅದಕ್ಕಿಂತಲೂ ದೊಡ್ಡದಿದೆ. ಗಡ್ಡೆ ಹೊರತೆಗೆದ ನಂತರ ಉಬ್ಬಿದ ಹೊಟ್ಟೆಯನ್ನು ಸಾಮಾನ್ಯ ಸ್ಥಿತಿಗೆ ತರುವ ಆಬ್ಡೋಮಿನೋಪ್ಲಾಸ್ಟಿ ಸರ್ಜರಿ ನಡೆಸಲಾಗಿದೆ.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತ.ಎ. ಉಡುಪಿ
ಪ್ರಕಟಿಸಿದ ದಿನಾಂಕ : 2008-12-04
|
|
|