ಉಡುಪಿಯಲ್ಲಿ ಐಐಟಿ ಸ್ಥಾಪನೆಗೆ: ಮೊಯ್ಲಿ ಮನವಿ |
ಪ್ರಕಟಿಸಿದ ದಿನಾಂಕ : 2008-12-04
ಮಂಗಳೂರು, ಡಿ. 3: ಕರ್ನಾಟಕದಲ್ಲಿ ಐಐಟಿಯನ್ನು ಸ್ಥಾಪಿಸಲು ಕೇಂದ್ರ ಸರಕಾರದ ಪ್ರಸ್ತಾವನೆ ಇದ್ದು, ಈ ಐಐಟಿಯನ್ನು ಉಡುಪಿಯಲ್ಲಿ ಸ್ಥಾಪಿಸಬೇಕೆಂದು ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೊಲಿ ಅವರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯ ಸಚಿವ ಅರ್ಜುನ ಸಿಂಗ್ ಅವರನ್ನು ವಿನಂತಿಸಿದ್ದಾರೆ.
ವಿಶ್ವದರ್ಜೆಯ ವಿ.ವಿ.
ದೇಶದಲ್ಲಿ ವಿಶ್ವದರ್ಜೆಯ 14 ವಿ.ವಿ.ಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಈ ಪೈಕಿ ಒಂದನ್ನು ದ.ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸುವಂತೆ ವೀರಪ್ಪ ಮೊಲಿ ಅವರು ಕೇಂದ್ರ ಸರಕಾರವನ್ನು ಕೋರಿದ್ದಾರೆ.
ಮೊಲಿ ಅವರು ಡಿ. 4ರಂದು ಮಂಗಳೂರಿನಲ್ಲಿ ವಿವಿಧ ಕಾರ್‍ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತ.ಎ. ಉಡುಪಿ
ಪ್ರಕಟಿಸಿದ ದಿನಾಂಕ : 2008-12-04
|
|
|