ಉಡುಪಿ:ಬಡಗಬೆಟ್ಟು ಕ್ರೆ. ಕೋ-ಆಪ್‌ಗೆ ಅತ್ಯುನ್ನತ ರಾಷ್ಟ್ರಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2008-12-04
ಉಡುಪಿ, ಡಿ.3: ಬಡಗಬೆಟ್ಟು ಕ್ರೆಡಿಟ್ ಕೋ - ಆಪರೇಟಿವ್ ಸೊಸೈಟಿ ಲಿ.ಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ. ಸಹಕಾರಿ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಗಳಲ್ಲೊಂದಾದ ‘ಎನ್‌ಸಿಡಿಸಿ ಆವಾರ್ಡ್ ಫಾರ್ ಕೋ-ಆಪರೇಟಿವ್ ಎಕ್ಸೆಲೆನ್ಸ್ -2008’ ಪ್ರಶಸ್ತಿಗೆ ರಾಜ್ಯದಿಂದ ಆಯ್ಕೆ ಯಾಗಿರುವ ಏಕೈಕ ಕೋಪರೇಟಿವ್ ಸೊಸೈಟಿ ಇದಾಗಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ಸೊಸೈಟಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಕಟವಾದ ಹಿನ್ನೆಲೆಯಲ್ಲಿ ಡಿ.3ರಂದು ಸೊಸೈಟಿ ಅಧ್ಯಕ್ಷ ಸಂಜೀವ ಕಾಂಚನ್ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶ ಕರು ಸಂತಸ ಹಂಚಿಕೊಂಡರು. ೧೯೧೮ರಲ್ಲಿ ಆರಂಭಗೊಂಡ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಈಗಾಗಲೇ ಉಡುಪಿ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಸ್ಥೆ ಪ್ರಶಸ್ತಿ, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಪ್ರಶಸ್ತಿ, ತಾಲೂಕು ಮಟ್ಟ, ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಅಧ್ಯಕ್ಷ ಸಂಜೀವ ಕಾಂಚನ್ ತಿಳಿಸಿದರು.
ಸಹಕಾರಿ ಸಂಘಗಳ ನೂತನ ಉಪನಿಬಂಧಕ ಜ್ಯೋತೀಂದ್ರ, ಉಡುಪಿ ಸಹಕಾರಿ ಯೂನಿ ಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಉಪಾಧ್ಯಕ್ಷ ಉಮಾನಾಥ, ನಿರ್ದೇಶಕರಾದ ಸತ್ಯನಾರಾಯಣ, ಅಬ್ದುಲ್ ರಜಾಕ್, ಪುರುಷೋತ್ತಮ ಶೆಟ್ಟಿ, ಭಾಸ್ಕರ ಪ್ರಭು, ಸಿ. ಎಫ್. ಹರ್ಬರ್ಟ್, ಜಯಾ ಶೆಟ್ಟಿ , ಸಲಹೆಗಾರ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾಗಿ ಸೇವೆ ಸಲ್ಲಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಎಂ.ಬಸಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಸೊಸೈಟಿ ವತಿ ಯಿಂದ ವಿದಾಯಕೂಟವೇರ್ಪಡಿಸಿ ಸಮ್ಮಾನಿಸಲಾಯಿತು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತ.ಎ. ಉಡುಪಿ
ಪ್ರಕಟಿಸಿದ ದಿನಾಂಕ : 2008-12-04
|
|
|