ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ

( ವರದಿ:ಅರ್ಶದ್ ಹುಸೇನ್, ದುಬೈ. ಚಿತ್ರ: ಅಶೋಕ್ ಬೆಳ್ಮಣ್)

ಅಗಲಿದ ಗಣ್ಯರಿಗೆ ಯು.ಎ.ಇ, ಕನ್ನಡಿಗರ ಕಂಬನಿ 

ದುಬೈ, ಜನವರಿ ೧೬: ಕಳೆದ ವರ್ಷಾಂತ್ಯದಲ್ಲಿ ಬರಸಿಡಿಲಿನಂತೆರಗಿದ ನಾಡಿನ ಇಬ್ಬರು ಗಣ್ಯರ ನಿಧನದ ಸುದ್ದಿ ಕನ್ನಡಿಗರ ಪಾಲಿಗೆ ಕರಾಳವೇ ಸರಿ. ಅಗಲಿದ ಈ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯೊಂದನ್ನು ಯು.ಎ.ಇ.ಯ ಧ್ವನಿ ಪ್ರತಿಷ್ಠಾನ ಆಯೋಜಿಸಿತ್ತು. 

ಶುಕ್ರವಾರ ಸಂಜೆ ಶಾರ್ಜಾ ನಗರದ ಅರಬ್ ಉಡುಪಿ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಸರಳ ಸಮಾರಂಭದ ಅಧ್ಯಕ್ಷತೆಯನ್ನು ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಧ್ವನಿ ಪ್ರತಿಷ್ಠಾನದ ಶ್ರೀ ಪ್ರಕಾಶ್ ರಾವ ಪಯ್ಯಾರ್, ಶ್ರೀ ಅಶೋಕ್ ಶೆಟ್ಟಿ ಹಾಗೂ ಶ್ರೀ ಜಯರಾಮ ಸೋಮಯಾಜಿಯವರು ಉಪಸ್ಥಿತರಿದ್ದರು. 

ದಿವಂಗತರ ಕಿರು ಪರಿಚಯವನ್ನು ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರು ನೀಡಿದ ಬಳಿಕ ಸಭಾಂಗಣದ ಸಕಲರೂ ಎದ್ದುನಿಂತು ಒಂದು ನಿಮಿಷ ಮೌನ ಆಚರಿಸುವ ಮೂಲಕ ಅಗಲಿದ ಆತ್ಮಗಳಿಗೆ ಶಾಂತಿ ಕೋರಲಾಯಿತು. 

ಶ್ರೀ ಪ್ರಕಾಶ್ ರಾವ್ ಪಯ್ಯಾರ್ ರವರು ದಿವಂಗತರ ಭಾವಚಿತ್ರಗಳಿಗೆ ಹಣತೆ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಮತಿ ಸೋನಿಯಾ ಗೌತಮ್ ರವರ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭವಾಯಿತು. 

ಪ್ರಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಮಾತನಾಡುತ್ತಾ ದಿವಂಗತ ಡಾ. ವಿಷ್ಣುವರ್ಧನ್ ರವರು ೨೦೦೩ ರಲ್ಲಿ ನೀಡಿದ ಭೇಟಿಯನ್ನು ನೆನೆಸಿಕೊಂಡು ಅವರ ವ್ಯಕ್ತಿತ್ವದ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದರು.  ಅಂದಿನ ಸಮಾರಂಭದಲ್ಲಿ ಅವರು ಕನ್ನಡ ಭಾಷೆಗೆ ನೀಡಿದ ಮಹತ್ವ, ಮನೆಯವರೊಂದಿಗಿನ ಅವರ ಅನನ್ಯ ಬಾಂಧವ್ಯ, ಒಡನಾಡಿ ಗಳೊಡಣ ಪ್ರೀತಿ ವಾತ್ಸಲ್ಯಗಳ ಬಗ್ಗೆ ವಿವರಣೆ ನೀಡಿದರು.  

ಬಳಿಕ ಮಾತನಾಡಿದ ಶ್ರೀ ಅಶೋಕ್ ಶೆಟ್ಟಿಯವರು ಯು.ಎ.ಇ.ಯಲ್ಲಿ ಸಾಂಸ್ಕೃತಿಕ ಸಮಾರಂಭ ಗಳು ಬೇಕಾದಷ್ಟು ಜರುಗುತ್ತವೆ, ಆದರೆ ನಾಡಿನ ಗಣ್ಯರು ಇಲ್ಲವಾದಾಗ ಸಂತಾಪಸಭೆಯನ್ನು ನಡೆಸುತ್ತಿರುವಲ್ಲಿ ಧ್ವನಿ ಪ್ರತಿಷ್ಠಾನ ಪ್ರಥಮವಾಗಿದೆ ಎಂದು ತಿಳಿಸಿದರು. ಯು.ಇ.ಯಲ್ಲಿರುವ ಸಕಲ ಸಂಘಟನೆಗಳು ಒಂದಾಗಿ ಶೃದ್ಧಾಂಜಲಿ ಅರ್ಪಿಸಿದರೆ ಉತ್ತಮ ಎಂಬ ಅಭಿಪ್ರಾಯವನ್ನು ಅವರು ಪ್ರಕಟಿಸಿದರು. 

ಬಳಿಕ ಮಾತನಾಡಿದ ಶ್ರೀ ಬಿ.ಜಯರಾಮ ಸೋಮಯಾಜಿಯವರು ಕಳೆದ ವರ್ಷದ ಅಂತ್ಯದಲ್ಲಿ  ಇಬ್ಬರು ದಿಗ್ಗಜರನ್ನು  ಕಳೆದುಕೊಂಡ ಬಳಿಕ ಕನ್ನಡನಾಡು ಬಡವಾಗಿದೆ, ಅವರ ಸ್ಥಾನಗಳನ್ನು ಸಮರ್ಥವಾಗಿ ತುಂಬಬಲ್ಲವರು ಸಧ್ಯಕ್ಕೆ ಯಾರೂ ಇಲ್ಲ ಎಂದು ತಿಳಿಸಿದರು. ಸಂತಾಪಸೂಚಕ ಸಭೆ ಏರ್ಪಡಿಸಿ ಕನ್ನಡಿಗರು ದುಃಖದ ಸಮಯದಲ್ಲಿಯೂ ಒಂದಾಗಿರಲು ಶ್ರಮಿಸಿದ ಶ್ರೀ ಪಯ್ಯಾರ್ ರವರ ಪ್ರಯತ್ನವನ್ನು ಅವರು ಶ್ಲಾಘಿಸಿದರು. 

ಬಳಿಕ ಮಾತನಾಡಿದ ಶಾರ್ಜಾ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರಾದ ಶ್ರೀ ಗಣೇಶ್ ರೈಯವರು ತಮ್ಮ ನೆನಪಿನ ಬುತ್ತಿ ಬಿಚ್ಚಿ ಹಲವು ಆತ್ಮೀಯ ವಿಷಯಗಳನ್ನು ವಿಶದಪಡಿಸಿದರು. ವಿಷ್ಣುವರ್ಧನ್ ರವರು ಕೊಡಗಿಗೆ ಬಂದಿದ್ದಾಗ ತಮ್ಮೊಂದಿಗೆ ಕಳೆದ ಆ ಕ್ಷಣಗಳನ್ನು ಅವರು ಸಭೆಯಲ್ಲಿ ವಿವರಿಸಿದ ಪರಿ ಕೊಡಗಿನ ಸೊಬಗನ್ನು ಕಣ್ಣಿಗೆ ಕಟ್ಟಿದಂತಿತ್ತು. ಅಲ್ಲದೇ ವಿಷ್ಣುವರ್ಧನ್ ಹಾಗೂ ಅಶ್ವಥ್ ರವರ ಬಗ್ಗೆ ಹಲವು ಅಮೂಲ್ಯ ಮಾಹಿತಿಗಳನ್ನು ಅವರು ಒದಗಿಸಿದರು.  

ಬಳಿಕ ಮಾತನಾಡಿದ ೧೦೬.೫ ರೇಡಿಯೋ ಸ್ಪೈಸ್ ನಿರ್ದೇಶಕರಾದ ಶ್ರೀ ಹರ್ಮನ್ ಲೂವಿಸ್ ರವರು ಮಾತನಾಡಿ ಸಂತಾಪ ಸೂಚಕ ಸಭೆಗೆ ಆಗಮಿಸಿದವರ ಸಂಖ್ಯೆ ಕಡಿಮೆಯಿದ್ದರೂ ಒಬ್ಬೊಬ್ಬರು ಸಾವಿರ ಕನ್ನಡಿಗರಿಗೆ ಸಮ ಎಂದು ತಿಳಿಸಿದರು.  ಯು.ಎ.ಇ.ಯಲ್ಲಿ ಕೊಂಕಣಿ, ತುಳು, ಕನ್ನಡ, ಬ್ಯಾರಿ ಭಾಷೆಗಳ ಹಲವು ಸಂಘಟನೆಗಳಿದ್ದರೂ ನಾವೆಲ್ಲರೂ ಮೊದಲಿಗೆ ಕನ್ನಡಿಗರು, ಈ ಹೊತ್ತಿನಲ್ಲಿ ಎಲ್ಲಾ ಸಂಘಟನೆಗಳು ಒಂದುಗೂಡಿ ಸಂತಾಪಸೂಚಕ ಸಭೆ ನಡೆಸಿದರೆ ಉತ್ತಮ ಎಂದು ಕರೆ ನೀಡಿದರು. ದಿವಂಗತರ ಆದರ್ಶಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅದೇ ನಾವು ಅವರಿಗೆ ನೀಡಬಹುದಾದ ನಿಜವಾದ ಶೃದ್ಧಾಂಜಲಿ ಎಂದು ಅವರು ತಿಳಿಸಿದರು.  

ಶ್ರೀ ಗೌತಮ್ ಅತ್ರೇಶ್ ರವರು ಬೆಂಗಳೂರಿನಲ್ಲಿದ್ದಾಗ ಶ್ರೀ ಅಶ್ವಥ್ ರವರ ನಿಕಟವರ್ತಿಗಳಾಗಿದ್ದು ಅಶ್ವಥ್ ರವರ ಹಲವು ಹಾಸ್ಯಪ್ರಸಂಗಗಳನ್ನು ವಿವರಿಸಿದರು.  ಒಮ್ಮೆ ಅಶ್ವಥ್ ರವರ ಮನೆಗೆ ಹದಿಮೂರು ತರುಣರು ಬಂದಿದ್ದರಂತೆ, ಅವರಲ್ಲೊಬ್ಬರು ಅಶ್ವಥ್ ರವರನ್ನು ಉದ್ದೇಶಿಸಿ ’ ಸರ್, ತಾವು ಸಿನೇಮಾದಲ್ಲಿಯೇ ಒಂದು ತರಹ, ನಿಜರೂಪದಲ್ಲಿ ಇನ್ನೊಂದು ತರಹ ಕಾಣುತ್ತಿದ್ದೀರಲ್ಲಾ ’ ಎಂದರಂತೆ, ಪುಣ್ಯಾತ್ಮ, ಹೆಸರು ಒಂದೇ ಆಗಿದ್ದರೂ ಇಬ್ಬರೂ ಬೇರೆ ಬೇರೆ ಎಂದು ಅರಿಯದವನಾಗಿದ್ದ. ಎಲ್ಲರಿಗೂ ಜ್ಯೂಸ್ ಕುಡಿಸಿ ಅವರು ಬೀಳ್ಕೊಟ್ಟರಂತೆ. ಇನ್ನೊಮ್ಮೆ ಅವರ ಕಾರ್ಯಕ್ರಮಕ್ಕೆ ಸಾಕ್ಷಾತ್ ಮುಖ್ಯಮಂತ್ರಿಗಳೇ ಆಗಮಿಸಿದ್ದರೂ, ಇನ್ನೆರೆಡು ಹಾಡು ಹಾಡಿದ ಬಳಿಕ ಮೈಕ್ ನಿಮ್ಮ ಕೈಗೆ ಕೊಡುತ್ತೇನೆ ಎಂದರಂತೆ, ಅಂತೆಯೇ ಎರೆಡು ಹಾಡು ಹಾಡುವವರೆಗೂ ಮುಖ್ಯಮಂತ್ರಿಗಳು ತಾಳ್ಮೆಯಿಂದ ಕುಳಿತು ಅವರ ಹಾಡು ಕೇಳಿದರಂತೆ.   

ಬಳಿಕ ಅಶ್ವಥ್ ರವರು ಹಾಡಿದ್ದ ಕುವೆಂಪು ವಿರಚಿತ ಗೀತೆಯೊಂದನ್ನು ಶ್ರೀಮತಿ ಸೋನಿಯಾ ಗೌತಮ್ ರವರು ಸುಶ್ರಾವ್ಯವಾಗಿ ಹಾಡಿದರು.  

ಶ್ರೀ ವೀರೇಂದ್ರರವರು "ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋ’ ಹಾಡನ್ನು ಹಾಡಿ ವಿಷ್ಣುವರ್ಧನ್ ರವರಿಗೆ ಅರ್ಪಿಸಿದರು.  

ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಮಲ್ಲಿಕಾರ್ಜುನ ಗೌಡ, ಶ್ರೀ ಸತೀಷ್ ವೆಂಕಟರಮಣ, ನಮ್ಮ ಟೀವಿ ಪ್ರತಿನಿಧಿ ಶ್ರೀ ವಿನಯ್ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. 

ಅಂತಿಮವಾಗಿ ಶ್ರೀ ಸದಾನ್ ದಾಸ್ ವಂದನಾರ್ಪಣೆ ಸಲ್ಲಿಸಿದರು. ಶ್ರೀ ಮಧುಸೂಧನ್ ರವರು ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತಿದ್ದರು.  

ದುಬೈ ಕರ್ನಾಟಕದ ಮಾಜಿ ಅದ್ಯಕ್ಷ ಗಲ್ಫ್ ಕನ್ನಡಿಗದ ಶ್ರೀ ಬಿ.ಜಿ. ಮೋಹನದಾಸ್ ಹಾಗೂ ಅಶೋಕ್ ಬೆಳ್ಮಣ್, ಕನ್ನಡಧ್ವನಿ.ಕಾಂ ನ ಶ್ರಿ ಗೋಪಿನಾಥ ರಾವ್, ಕೊಂಕಣಿ ಕವಿ ಶ್ರೀ ಆರ್ಥರ್ ರೋಷನ್ ಪಿರೀರಾ,  ಶಾರ್ಜಾ ಕರ್ನಾಟಕದ ಸಂಘದ ಅಧ್ಯಕ್ಷರಾದ ಶ್ರೀ ನೋಯೆಲ್ ಅಲ್ಮೇಡಾ, ದೈಜಿ ವರ್ಲ್ಡ್ ಪ್ರತಿನಿಧಿ ಶ್ರೀ ಸುಜಯ್ ಬೆಂದೂರ್, ಶ್ರೀ ಶೋಧನ್ ಪ್ರಸಾದ್ ಸಹಿತ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಚಿಲ್ಲಿವಿಲ್ಲಿ ಸಂಸ್ಥೆಯ ಶ್ರೀ ಸತೀಶ್ ವೆಂಕಟರಮಣ ರವರು ಆಗಮಿಸಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆಗಳನ್ನು ನೀಡಿ ಬೀಳ್ಕೊಟ್ಟರು. 

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ವರದಿ:ಅರ್ಶದ್ ಹುಸೇನ್, ಚಿತ್ರ: ಅಶೋಕ್ ಬೆಳ್ಮಣ್ ದುಬೈ.
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-17 00:00:00

Tell a Friend

ಪ್ರತಿಸ್ಪಂದನ
ಜಯರಾಮ ಸೋಮಯಾಜಿ, ಬಿರ್ತಿ, ಸಾಲಿಕೇರಿ.
2010-01-17
ಧ್ವನಿ ಪ್ರತಿಷ್ಠಾನದ ರೂವಾರಿ ಶ್ರೀ ಪ್ರಕಾಶ್ ರಾವ್ ಪಯ್ಯಾರ್ ಅವರು ಅಗಲಿದ ಗಣ್ಯ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿ ಯು.ಎ.ಇ. ಕನ್ನಡಿಗರ ನಮನ, ಕಂಬನಿಯನ್ನು ವ್ಯಕ್ತ ಪಡಿಸಲು ಅವಕಾಶ ಮಾಡಿ ಕೊಟ್ಟಿರುತ್ತಾರೆ. ಇವರಿಗೆ ಅಭಿನಂದನೆಗಳು. ಅಗಲಿದ ಅಭಿನವ ಭಾರ್ಗವ ವಿಷ್ಣುವರ್ಧನ್, ಗಾನ ಗಾರುಡಿಗ ಸಿ.ಅಶ್ವಥ್ ಅವರನ್ನು ಕಳೆದುಕೊಂಡು ಕನ್ನಡದ ಜನತೆ ಬಡವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಆ ಭಗವಂತನು ಕರುಣಿಸಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.
Herman Lewis, RADIO SPICE 105.4 FM, Dubai
2010-01-17
Whole hearted Appreciations to Dhwani Prathistana for organising the "Shradhanjali" to Dr. Vishnuvardhan and Mr. C. S Aswath and also to Gulf Kannadiga .com for covering the most sensible event so well. It is sad that, in spite there are so many associations operating in UAE from Karnataka origin, and known for their organising capability with many entertainment, cultural programmes, inviting and honoring many living celebrities locally as well as from India every year, but when the same people leave this world very few people or organisations think about them. Hat\'s off to Dhawni Pratishtana and Mr. Parakash Rao Payer for remembering the celebrities in their death. IT is still not too late for rest of the organisations to come together on a common platform to remember the people who have done so much for the Kannada language and for welfare of the community. Herman Lewis , RADIO SPICE 105.4 FM DUBAI
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
»ದುಬೈಯಲ್ಲಿ ಹೊಸ ಗುರುದ್ವಾರ: ದುಬೈ ಆಡಳಿತಗಾರರಿಗೆ ಸಿಖ್ ಸಮುದಾಯದ ಕೃತಜ್ಞತೆ
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್: 26 ತಂಡಗಳು ಸರದಿಯಲ್ಲಿ
»ಫೆ.10: ಬಹು ನಿರೀಕ್ಷಿತ 8ನೇ ಜೆ.ಎಮ್.ಸಿ ಅಜ್ಮಾನ್ ಫನ್ ರನ್; ಈ ಪ್ರಸಿದ್ಧ ಓಟದಲ್ಲಿ ಭಾಗವಹಿಸಿ ಬಹುಮಾನ ಪಡೆಯಿರಿ...!
»ಅಬುಧಾಬಿಯಲ್ಲಿ ಕುವೆಂಪು ಕಲಾಉತ್ಸವ ಮತ್ತು ವಿಶ್ವ ಕನ್ನಡ ಸಮ್ಮೇಳನ - ಕೊಲ್ಲಿ ನಾಡಿನಲ್ಲಿ ಪ್ರತಿಧ್ವನಿಸಿದ ಕನ್ನಡ ದಿಂಡಿಮ....
»ಅಬುಧಾಬಿಯಲ್ಲಿ 'ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಭರ್ಜರಿ ಸಾಂಪ್ರದಾಯಿಕ ಉದ್ಘಾಟನೆ....ಸಮ್ಮೇಳನಕ್ಕೆ ಚಾಲನೆ
»ಜನವರಿ ೨೭: ಅಬುಧಾಬಿಯಲ್ಲಿ ' ವಿಶ್ವಮಾನವ ಕುವೆಂಪು ಕಲಾ ಉತ್ಸವ 'ಮತ್ತು ೨ನೇ ವಿಶ್ವಕನ್ನಡ ಸಮ್ಮೇಳನ: ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಡಿ.ವಿ.ಸದಾನಂದ ಗೌಡರಿಂದ ಉದ್ಘಾಟನೆ....
»ಯು.ಎ.ಇ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮಕರ ಸಂಕ್ರಾತಿ ಸಂಭ್ರಮ
»ದುಬೈ ದೇವಾಡಿಗ ಸಂಘ ೨೦ನೇ ವಷಕ್ಕೆ ಪಾದಾರ್ಪಣೆ : ಹೊಸ ಕಾರ್ಯಕಾರೀ ಸಮಿತಿ ರಚನೆ; ಹರೀಶ್ ಶೇರಿಗಾರ್ ಅದ್ಯಕ್ಷ
»Death toll from scaffolding collapse in UAE rises to three
»ಯು ಎ ಇ ಹವಾಮಾನ ವರದಿ: ಹೆಚ್ಚಿದ ಶೀತಗಾಳಿ ... ತಾಪಮಾನ ಶೂನ್ಯಕ್ಕೆ?
»ಪೆ.3 ರಂದು ದುಬಾಯಿಯಲ್ಲಿ ತುಳು ಸಾಮಾಜಿಕ ನಾಟಕ ಈ..ಪೊರ್ಲು.....ದಾಯೆ....?
»ಅಬುಧಾಬಿ: ಮಂಗಳೂರು ಕೊಂಕಣ್ಸ್ ಗೆ ಕೂಸಮ್ಮ ಶಂಬು ಶೆಟ್ಟಿ ಸ್ಮಾರಕ ಸಮಗ್ರ ಥ್ರೋ ಬಾಲ್ ಟ್ರೋಫಿ
»ಉಮಲ್ ಮೌಮಿನಿನ್ ಆಸೋಸಿಯೇಶನ್ ಮತ್ತು ಗಲ್ಪ್ ಮೆಡಿಕಲ್ ಯುನಿರ್ವಸಿಟಿ ಅಜ್ಮಾನ್ ವತಿಯಿಂದ ಜೀವನ ಪದ್ದತಿ ಮತ್ತು ಕೌಟುಂಬಿಕ ಆರೋಗ್ಯ ಕುರಿತ ಕಾರ್ಯಗಾರ
»ದುಬೈ: ಕನ್ನಡ ಕೂಟ ಯು.ಎ.ಇ. ಯಿಂದ ಸಂಭ್ರಮದ ಸಂಕ್ರಾಂತಿ ಆಚರಣೆ: ಲೇಖಕಿ ಸುಧಾ ಸರಣೋಮತ್ ಉಪಸ್ಥಿತಿ - ಹಲವು ಆಟೋಟಗಳಲ್ಲಿ ಮಕ್ಕಳಾದ ಹಿರಿಯರು
»ದುಬಾಯಿ: ನಾರಾಯಣ ಸೇವಾ ಸಮಿತಿಯ ವತಿಯಿಂದ ನಡೆದ ಅಖಂಡಾ ಭಜನಾ ಮಹೋತ್ಸವ
»Divine intervention: 'An angel saved my life'
»Dubai: How genuine are DSF discounts?
»Police deny woman confessed to helping kill her daughter; Suicide survivor suffers from amnesia, moved to psychiatric ward
»ಜ.೨೭. ಕುವೆಂಪು ಕಲಾ ಉತ್ಸವ ಮತ್ತು ಎರಡನೇ ವಿಶ್ವ ಕನ್ನಡ ಸಮ್ಮೇಳನ,ಅಬುಧಾಬಿ-೨೦೧೨: ಮುಖ್ಯ ಅತಿಥಿಯಾಗಿ ಮಾನ್ಯ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
»ಉತ್ಸುಕರಾಗಿ ನಿರೀಕ್ಷಿಸಿರಿ.....! ದುಬೈಯಲ್ಲಿ 'ಆಷಾಡದ ಒಂದು ದಿನ'.....
»ಜ.20: ಕ್ರೀಡಾಭಿಮಾನಿಗಳು ಉತ್ಸುಕರಾಗಿ ನಿರೀಕ್ಷಿಸುತ್ತಿರುವ ಪ್ರಖ್ಯಾತ ಕೂಸಮ್ಮ ಶಂಬುಶೆಟ್ಟಿ ಸ್ಮಾರಕ ಥ್ರೋಬಾಲ್ ಪಂದ್ಯಾವಳಿ
»ಯು.ಎ.ಇ ಒಕ್ಕಲಿಗರ ಸಂಘ ಇದರ ವತಿಯಿಂದ ಜನವರಿ 20ರಂದು ಮಕರ ಸಂಕ್ರಾತಿ ಆಚರಣೆ
»ಉತ್ತೇಜನದಿಂದ ಜರುಗಿದ ಬ್ಯಾರಿಸ್ ಕಲ್ಚರಲ್ ಪೊರಂ ನ 2012 ರ ವಾರ್ಷಿಕ ಕ್ರೀಡೋತ್ಸವ
»ದುಬೈ: ಗಾಳಿಪಟ ಹಾರಿಸುವ ಸ್ಪರ್ದೆ: ಜನಪ್ರಿಯತೆ ಪಡೆದ ಟೀಂ ಮಂಗಳೂರಿನ ಬಣ್ನ ಬಣ್ನದ ಸಾಂಸ್ಕೃತಿಕ ವಿನ್ಯಾಸದ ಗಾಳೀ ಪಟಗಳು
»ನಿರ್ದೇಶನದಲ್ಲಿ ಹೊಸತನ ಹಾಗೂ ಮತ್ತು ಪನ್ಚಿಂಗ್ ಹಾಸ್ಯ ಸಂವಾದ - ನಟನೆಗಳಿಂದ ಮನಸೆಳೆದ ತುಳುನಾಟಕ ’ಆಯೆ ಸುಬಗ”; ನಕ್ಕು ನಲಿದ ಪ್ರೇಕ್ಷಕ ವರ್ಗ, ನಮ ತುಳುವೆರ್ ದಾಖಲೆ
»ದುಬೈ: ಜ 20 ರಂದು ಕನ್ನಡ ಕೂಟ ಯು.ಎ.ಇ. ಆಚರಿಸಲಿರುವ ಸಂಕ್ರಾಂತಿ - 2012 ಕಾರ್ಯಕ್ರಮ
»ನಮ ತುಳುವೆರ್ ಸಂಘಟನೆ ವತಿಯಿಂದ ನಾಳೆ ಜನವರಿ 13ರಂದು ನಡೆಯಲಿರುವ ’ಅಯೆ ಸುಬಗೆ’ ತುಳು ನಾಟಕ: ರಂಗತರಂಗ ತಂಡದ ಕಲಾವಿದರ ಆಗಮನ
» ಶಾರ್ಜಾ ಕರ್ನಾಟಕ ಸಂಘದ 2012 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ : ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ಆಯ್ಕೆ
»ಸಮಸ್ತ ಸಮ್ಮೇಳನದ ಪ್ರಚಾರ ಹಾಗೂ C M ಉಸ್ತಾದರ ಅನುಸ್ಮರಣಾ ಸಮಾರಂಭ
»ಯು.ಎ.ಇ ಪೋಲಿಸ್ ವರದಿಗಳು...
»Sharjah: Indian woman murdered, government to bring back body
»ಪೆ.10ರಂದು ಪಾಂಬೂರು ಕ್ರಿಕೆಟ್ ಟೂರ್ನಮೆಂಟ್
»ದುಬಾಯಿಯಲ್ಲಿ ಜನವರಿ13ರಂದು ಅಖಂಡ ಭಜನಾ ಮಹೋತ್ಸವ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಕುಂದಾಪುರ ದೇವಾಡಿಗ ಮಿತ್ರರ ವೇದಿಕೆ ’ಕದಮ್’ ತನ್ನ ಪ್ರಥಮ ವರ್ಷಾಚರಣೆಯ ಸಂಭ್ರಮದಲ್ಲಿ...’ದೇವಾಡಿಗ ಸಾಧಕ ಪ್ರಶಸ್ತಿ’ ಶ್ರೀ ಬಿ. ಜಿ. ಮೋಹನ್ ದಾಸ್ ರವರ ಮಡಿಲಿಗೆ
»Govt clears proposal for providing insurance, pension benefits to overseas Indian workers
»ದುಬೈಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ದಕ್ಷಿಣ ಭಾರತ ಅಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ರವರಿಗೆ ದುಬೈ ವಿಮಾನ ನಿಲ್ಧಾಣದಲ್ಲಿ ಭವ್ಯ ಸ್ವಾಗತ
»ಯು.ಎ.ಇ.ಬಂಟ್ಸ್ ವಿಹಾರ ಕೂಟ: ಸಫಾ ಉಧ್ಯಾನವನದ ಆಹ್ಲಾದಕರ ವಾತವರಣದಲ್ಲಿ ನಕ್ಕು ನಲಿದಾಡಿದ ಬಂಟ ಬಾಂಧವರು.
»ಬಾಲಕನಿಂದ ಕಾರು ಚಾಲನೆ: ಇಬ್ಬರು ಮೃತ್ಯು
»ರಾಮಕ್ಷತ್ರೀಯ ಸಂಘ ಯು.ಎ.ಇ.ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿಪೂರ್ವಕವಾಗಿ ನಡೆದ 7ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ
»ಫೆ 10: ಪಂಬೂರ್ ಸೆವೆನ್ ಕ್ರಿಕೆಟ್ ಟೂರ್ನಮೆಂಟ್: ವಿನ್ನಿ’ಸ್ ಟ್ರೋಫಿ ಗೆಲ್ಲಲು ತಂಡಗಳ ಸಜ್ಜು
»ಮೊಗವೀರ್ ಯುಏಯಿ ಅವರ ನಾಲ್ಕನೇ ವಾರ್ಷಿಕೋತ್ಸವ ಮತ್ತು ಕ್ರೀಡಾಕೂಟ
»ಅಬುದಾಬಿ ಕರ್ನಾಟಕ ಸಂಘದ ವತಿಯಿಂದ ವಾರ್ಷಿಕ ಪ್ರವಾಸ
»ನಮ್ಮ ತುಳುವೆರ್ ಸಂಘಟನೆ ವತಿಯಿಂದ ಜನವರಿ 13ರಂದು ದುಬಾಯಿಯಲ್ಲಿ ಅಯೆ ಸುಬಗೆ ನಾಟಕ ಪ್ರದರ್ಶನ
»ಮೊಗವೀರ ಸಂಘಟನೆಯು 4ನೇ ವಾರ್ಷಿಕೋತ್ಸವ: ಡಿ.23ರಂದು ಶಾರ್ಜಾದ ವಂಡರರ್ಸ್ ಸ್ಪೋಟ್ಸ್ ಕ್ಲಬ್ ನಲ್ಲಿ ಕ್ರೀಡಾಕೂಟ
»ಅರಬ್ ಉಡುಪಿ ರೆಸ್ಟೊರೆಂಟ್ ಅಜ್ಮಾನ್; ಗೌ| ಶೇಖ್ ಡಾ. ಮಜಿದ್ ಬಿನ್ ಸಹೀದ್ ಅಲ್ ನುವೈಮಿ ಯವರಿಂದ ಉದ್ಘಾಟನೆ
»ಕಾಞಂಗಾಡ್ ಯುವಕ ಅಬುಧಾಬಿಯಲ್ಲಿ ಸಾವು
»ಯು.ಎ.ಇ ಯ 40ನೇ ವಾರ್ಷಿಕೋತ್ಸವ : ಬ್ಯಾರೀಸ್ ವೆಲ್ ಫೇರ್ ಫೋರಂ ವತಿಯಿಂದ ಪಿಕ್ ನಿಕ್ ಆಯೋಜನೆ
»ಅಬುಧಾಬಿ: ಸುರಂಗದಲ್ಲಿ ಸಿಲುಕಿ ಕಾಞಂಗಾಡ್ ಯುವಕನ ಸಾವು

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri