ಕುವೈಟ್ ಬಂಟರ ಸಂಘದ 9ನೇ ವಾರ್ಷಿಕ ಮಹಾಸಭೆ; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಆಯ್ಕೆ |
ಪ್ರಕಟಿಸಿದ ದಿನಾಂಕ : 2010-01-13
(ವರದಿ: ಶ್ರೀಮತಿ ಸನ್ಮತಿ ಮೆಂಡ ಬಜ್ಪೆ, ಜನ ಸಂಪರ್ಕಾಧಿಕಾರಿ)
ಕುವೈಟ್: ಬಂಟರ ಸಂಘದ 9 ನೇ ವಾರ್ಷಿಕ ಮಹಸಭೆಯು ಜನವರಿ 8, 2010ರಂದು ಸಾಲ್ಮಿಯ ಇಂಡಿಯನ್ ಪಬ್ಲಿಕ್ ಸ್ಕೂಲಿನ ಅಡಿಟೋರಿಯಂನಲ್ಲಿ ನಡೆಯಿತು. ದಿನದ ಕಾರ್‍ಯಕ್ರಮವು ಬೇಬಿ ಲಕ್ಷ್ಮೀ ಕೆ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಸಂಘದ ಅಧ್ಯಕ್ಷರು, ಸಂಚಾಲಕರು ಹಾಗು ಪದಾಧಿಕಾರಿಗಳೊಂದಿಗೆ ದೀಪ ಬೆಳಗಿಸಿದರು.
ನಂತರ ಸಂಘದ ಅಧ್ಯಕ್ಷರಾದ ಶ್ರೀ ಕರುಣಾಕರ ಶೆಟ್ಟಿ ಅಜೆಕಳ ನೆರೆದ ಸದಸ್ಯರನ್ನು ಸ್ವಾಗತಿಸಿ, ಕಳೆದ ವರುಷದ ಸಮಿತಿ ಸದಸ್ಯರಿಗೆ ಧನ್ಯವಾದ ಸಮರ್ಪಿಸಿ, ಹೊಸ ಸಮಿತಿಗೆ ಶುಭ ಹಾರೈಸಿದರು. ಸಂಘದ ಕಾರ್ಯದರ್ಶಿ 2009ರ ಎಲ್ಲಾ ಕಾರ್ಯಕ್ರಮಗಳ ವಿವರ ನೀಡಿದರು.
ಕೋಶಾಧಿಕಾರಿ ಕಳೆದ ವರುಷದ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭದಲ್ಲಿ ಸಂಘದ ಆರು ನವ ವಿವಾಹಿತ ಸದಸ್ಯರನ್ನು ವರದಕ್ಷಿಣೆ ರಹಿತ ಮದುವೆ ಆಗಿರುವುದಕ್ಕಾಗಿ ಸನ್ಮಾನಿಸಲಾಯಿತು ಹಾಗೂ ಸಂಘದ ಇಬ್ಬರು ಪ್ರತಿಭಾನ್ವಿತ ವಿಧ್ಯಾರ್ಥಿ ಗಳಾದ ರಶ್ಮಿ ಸಿ ಶೆಟ್ಟಿ ಹಾಗೂ ರಾಹುಲ್ ಜೆ ಶೆಟ್ಟಿಯವರಿಗೆ ವಿಧ್ಯಾರ್ಥಿ ವೇತನವನ್ನು ವಿತರಿಸ ಲಾಯಿತು.
2010ನೇ ವರ್ಷಕ್ಕೆ ಅವಿರೋಧವಾಗಿ ಆಯ್ಕೆಯಾದ ಸಮಿತಿ ಸದಸ್ಯರನ್ನು ಸಂಘದ ಸಂಚಾಲಕ ರಾದ ಶ್ರೀ ಪ್ರಕಾಶ್ ಶೆಟ್ಟಿ ಬಿಜಂಟ್ಲ ಮತ್ತು ಶ್ರೀ ವಿವೇಕ್ ಶೆಟ್ಟಿ ಬೆಳ್ಮಣ್ ರವರು ಸ್ವಾಗತಿಸಿ ಶುಭ ಹಾರೈಸಿದರು.

ಚುಣಾಯಿತ ಸದಸ್ಯರು; ಅಧ್ಯಕ್ಷರಾಗಿ ಶ್ರೀ ಕರುಣಾಕರ ಶೆಟ್ಟಿ ಅಜೆಕಳ, ಉಪಾಧ್ಯಕ್ಷ ರಾಗಿ ಶ್ರೀ ಚಂದ್ರಹಾಸ ಶೆಟ್ಟಿ ಕತ್ತಲ್ಸಾರ್, ಕಾರ್ಯದರ್ಶಿಯಾಗಿ ಗುರುರಾಜ್ ಶೆಟ್ಟಿ ಮಾಡೂರು, ಜತೆ-ಕಾರ್ಯದರ್ಶಿಯಾಗಿ ಶ್ರೀ ಪುಷ್ಪರಾಜ್ ಹೆಗ್ಡೆ, ಕೋಶಾಧಿಕಾರಿಯಾಗಿ ಶ್ರೀ ತಿಲಕ್‌ರಾಜ್ ಶೆಟ್ಟಿ ಮುಲ್ಕಿ, ಜನ ಸಂಪರ್ಕಾಧಿಕಾರಿಯಾಗಿ ಶ್ರೀಮತಿ ಸನ್ಮತಿ ಮೆಂಡ ಬಜ್ಪೆ, ಸಾಂಸ್ಕೃತಿಕ ಕಾರ್‍ಯದರ್ಶಿಯಾಗಿ ಶ್ರೀ ಅರುಣ್ ಶೆಟ್ಟಿ ಬಿಜಂಟ್ಲ, ಕ್ಷೇಮಾಧಿಕಾರಿಯಾಗಿ ಶ್ರೀ ಲೋಕನಾಥ್ ಶೆಟ್ಟಿ ಕಟೀಲ್, ಕ್ರೀಡಾಧಿಕಾರಿಯಾಗಿ ಶ್ರೀ ಪ್ರವೀಣ್ ರೈ ಮರೋಳಿ.

ಮಧ್ಯಾನದ ಭೋಜನದ ನಂತರ ಸಂಘದ ಸದಸ್ಯರು ಹಾಗು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೆರೆದ ಜನರನ್ನು ರಂಜಿಸಿದರು.

ಕಾರ್‍ಯದರ್ಶಿಯವರ ವಂದನಾರ್ಪಣೆ ಹಾಗು ರಾಷ್ಟ್ರ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಈ ದಿನದ ಎಲ್ಲಾ ಕಾರ್ಯಕ್ರಮಗಳನ್ನು ಮಾಸ್ಟರ್ ಪ್ರಿಥ್ವಿ ವಿ ಶೆಟ್ಟಿ ಮತ್ತು ಶ್ರೀ ಸುರೇಂದ್ರ ಶೆಟ್ಟಿ ಕಾರ್ಕಳ ಇವರು ಸುಸೂತ್ರವಾಗಿ ನಡೆಸಿಕೊಟ್ಟರು.


ವರದಿಯ ವಿವರಗಳು |
 |
ಕೃಪೆ : ಶ್ರೀಮತಿ ಸನ್ಮತಿ ಮೆಂಡ ಬಜ್ಪೆ, ಜನ ಸಂಪರ್ಕಾಧಿಕಾರಿ, ಬಂಟರ ಸಂಘ - ಕುವೈಟ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-13 00:00:00
|
|
|