ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ: ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ |
ಪ್ರಕಟಿಸಿದ ದಿನಾಂಕ : 2010-01-13
ಬೆಂಗಳೂರು: ಬಹರೇನ್‌ನಲ್ಲಿ ಕನ್ನಡ ಭವನ ನಿರ್ಮಿಸಲು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ವಿದೇಶಕ್ಕೆ ಅನುದಾನ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಜೊತೆ ಸಮಾಲೋಚನೆ ನಡೆಸಿದ ಬಳಿಕ ಹಣ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಹಿನ್ನಲೆ:(ವಿಕ ಮತ್ತು ಗ,ಕ.ಆಧಾರಿತ)

2008 ರ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನವರು ಬಹರೇನ್‌ಗೆ ಹೋಗಿದ್ದರು. ಅವರ ಜತೆಯಲ್ಲಿ ಸಚಿವರಾದ ರಾಮಚಂದ್ರ ಗೌಡ ಹಾಗೂ ಶೋಭಾ ಕರಂದ್ಲಾಜೆ ಸಹ ಇದ್ದರು. ಬಹರೇನ್ ಕನ್ನಡ ಸಂಘದ ವಾರ್ಷಿಕೋತ್ಸವದಲ್ಲಿ ಮುಖ್ಯಮಂತ್ರಿಯವರು ಪಾಲ್ಗೊಂಡಿದ್ದರು. ಆ ಸಂಘದ ಕನ್ನಡ ಪ್ರೇಮ, ಚಟುವಟಿಕೆ, ಕ್ರಿಯಾಶೀಲತೆ ಮುಖ್ಯ ಮಂತ್ರಿಯವರಿಗೆ ಬಹಳ ಹಿಡಿಸಿರ ಬೇಕು. ಕನ್ನಡ ಸಂಘದ ಕಟ್ಟಡವನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು ಕೆಲಕಾಲ ಅಲ್ಲಿ ಕಳೆದಿದ್ದ ರು.

ವಿದೇಶಗಳಲ್ಲಿ ಹಲವಾರು ಕನ್ನಡ ಸಂಘಗಳಿದ್ದರೂ ಸುಸಜ್ಜಿತ, ಸ್ವಂತ ಕಟ್ಟಡ ಹೊಂದಿದ ಏಕ ಮಾತ್ರ ಸಂಘವೆಂದರೆ ಬಹರೇನ್ ಕನ್ನಡ ಸಂಘ. ಇನ್ನೆರಡು ವರ್ಷಗಳಲ್ಲಿ ಕಟ್ಟಡದ ಲೀಸ್ ಅವಧಿ ಮುಗಿಯುವುದರಿಂದ ಅಷ್ಟರೊಳಗೆ ತನ್ನದೇ ಆದ ಕಟ್ಟಡವನ್ನು ಹೊಂದಲೇಬೇಕಾದ ಅಗತ್ಯವಿದೆ. ಅಲ್ಲದೇ ಬಹರೇನ್‌ನಲ್ಲಿರುವ ಬಹುತೇಕ ಕನ್ನಡಿಗರಿಗೆ ಕನ್ನಡಸಂಘವೆಂದರೆ ಎರಡನೆಯ ಮನೆ ಯಿದ್ದ ಹಾಗೆ. ಇನ್ನು ಕೆಲವರು ಹೇಗೆಂದರೆ ಸಮಯ ಸಿಕ್ಕರೆ ಅವರ ಮನೆಗಳಿಗೆ ಹೋಗುತ್ತಾರೆ. ಅಲ್ಲಿನ ಕನ್ನಡ ಸಂಘ ಎಲ್ಲ ರೀತಿಯಿಂದಲೂ ಕನ್ನಡ ಕಾಯಕದಲ್ಲಿ ತೊಡಗಿಸಿಕೊಂಡಿದೆ.

ಈ ಎಲ್ಲ ಸಂಗತಿಗಳನ್ನು ಯಡಿಯೂರಪ್ಪ ಗಮನಿಸಿರಬೇಕು, ಕನ್ನಡ ಸಂಘದ ಕಾರ್ಯಚಟುವಟಿಕೆ ಯಿಂದ ಅವರಿಗೆ ಸಂತಸವಾಗಿರಬೇಕು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಮುಖ್ಯಮಂತ್ರಿಯವರು, ಬಹರೇನ್ ಕನ್ನಡಸಂಘಕ್ಕೆ ರಾಜ್ಯ ಸರಕಾರದಿಂದ ಒಂದು ಕೋಟಿ ರೂ. ನೀಡುವುದಾಗಿ ಪ್ರಕಟಿಸಿದರು. ಚಪ್ಪಾಳೆ ಬಂತು. ಬಹರೇನ್ ಕನ್ನಡಿಗರು ಮುಖ್ಯಮಂತ್ರಿಗಳ ಹೃದ ಯ ವೈಶಾಲ್ಯ ಹಾಗೂ ಸ್ಪಂದನೆಗೆ ತಲೆದೂಗಿದರು. ಕನಸುಮನಸಿನಲ್ಲಿಯೂ ಅವರು ಯಡಿಯೂ ರಪ್ಪನವರಿಂದ ಇಂಥ `ಅಚ್ಚರಿ'ಯನ್ನು ನಿರೀಕ್ಷಿಸಿರಲಿಲ್ಲ.

ಈಗ ಅದೇ ವಾಗ್ಧಾನವನ್ನು ಪಾಲಿಸಿ ಮುಖ್ಯಮಂತ್ರಿಯವರ ಅದೇಶದಂತೆ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.



ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-13
|
|
| kandavara mohan salian, Bahrain | 2010-01-28 | | ಒಂದುಕೋಟಿ ಹಾಗೂ ಮುಖ್ಯಮಂತ್ರಿಯವರು---ಈ ವಿಚಾರದಲ್ಲಿ ಬಹರೈನ್ ಕನ್ನಡ ಸಂಘದಲ್ಲಿ ಬಹಳ ರಾಜಕೀಯ ನಡೆದದ್ದು ಬಹರೈನ್ ದೇಶದಲ್ಲಿರುವ ಸಾದಾರಣ 80% ಕನ್ನಡಿಗರಿಗೆ ಗೊತ್ತು. ದಯವಿಟ್ಟು ತಮ್ಮೊಳಗಿನ ರಾಜಕೀಯಬಿಟ್ಟು ತಾಯ್ನಾಡಿನಿಂದ ಇಲ್ಲಿ ಬಂದಿರುವ ಕನ್ನಡಿಗರಿಗೆ ತಮ್ಮಿಂದಾದ ಸೇವೆ ಮಾಡಿ.ಜೈ ಹೋ |
|