ಕುವೈತ್: ಮಹಿಳೆಯರಿಗೆ ‘ಪಿಂಕ್ ಟ್ಯಾಕ್ಸಿ’ ಸೇವೆ |
ಪ್ರಕಟಿಸಿದ ದಿನಾಂಕ : 2010-01-12
ಕುವೈತ್‌ನಲ್ಲಿ ಮಹಿಳೆಯರಿಗಾಗಿ ಮಾತ್ರ ಲಭ್ಯವಿರುವ ಟ್ಯಾಕ್ಸಿ ಸೇವೆ ದೊರೆಯಲಿದೆ. ಈ ಟ್ಯಾಕ್ಸಿ ಸೇವೆಗೆ ಇಟ್ಟರುವ ಹೆಸರು ‘ಪಿಂಕ್ ಟ್ಯಾಕ್ಸಿ’. ಈ ಟ್ಯಾಕ್ಸಿಗಳನ್ನು ಮಹಿಳಾ ಚಾಲಕರೇ ಚಲಾಯಿಸುತ್ತಾರೆ.
ಬೆಳಗ್ಗೆ ೮ ಗಂಟೆಯಿಂದ ಸಂಜೆ ೮ ಗಂಟೆವರೆಗೆ ಕಾರ್ಯ ನಿರ್ವಹಿಸುವ ಟ್ಯಾಕ್ಸಿಗಳು ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಾಗಿವೆ.
ಲೆಬನಾನ್, ಸಿರಿಯಾ, ಇರಾನ್ ಮತ್ತು ಬಾಂಗ್ಲಾದೇಶ ಸೇರಿದಂತೆ ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇಂಥ ಸೇವೆ ಈಗಾಗಲೇ ಲಭ್ಯವಿದೆ. ಇದನ್ನು ಆಧರಿಸಿಯೇ ಕುವೈತ್‌ನಲ್ಲೂ ಪಿಂಕ್ ಟ್ಯಾಕ್ಸಿ ಸೇವೆ ಆರಂಭಿಸಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-12
|
|
|