ಪ್ರತಿಷ್ಠಿತ ಬಂಟ್ಸ್ ಥ್ರೋಬಾಲ್ ದುಬಾಯಿ ಪಂದ್ಯಾಟಕ್ಕೆ ಕ್ಷಣಗಣನೆ. |
ಪ್ರಕಟಿಸಿದ ದಿನಾಂಕ : 2010-01-07
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ ಎರಡು ಮೂರು ದಶಕಗಳಿಂದ ಕರ್ನಾಟಕ ಪರ ಸಂಘಟನೆಗಳು ತನ್ನದೆ ಆದ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ನಡೆಸಿಕೊಂಡು ಬರುತ್ತಿದ್ದ ಮಹಿಳೆಯರ ಥ್ರೋಬಾಲ್ ಪಂದ್ಯಾಟ ತುಂಬಾ ಪ್ರಸಿದ್ದಿಯಾಗಿದ್ದು ತನ್ನದೆ ಆದ ಆಕರ್ಷಣೆಯನ್ನು ಪಡೆದುಕೊಂಡಿದೆ. ವಿವಿಧ ವಯೋಮಿತಿಯ ಮಹಿಳಾ ಥ್ರೋಬಾಲ್ ಆಟಗಾರರು ತಮ್ಮ ಕ್ರೀಡಾ ಕೌಶಲ್ಯವನ್ನು ಸ್ಪರ್ಧಾತ್ಮಕವಾಗಿ ಪ್ರದರ್ಶಿಸಿಕೊಂಡು ಅಪಾರ ಕ್ರೀಡಾಭಿಮಾನಿಗಳ ಹರ್ಷೊದ್ಘಾರ ಗಳ ನಡುವೆ "ಮಹಿಳೆಯರ ಥ್ರೋಬಾಲ್ ಪಂದ್ಯಾಟ" ಯು. ಎ. ಇ. ಯಲ್ಲಿ ಜನಮನ ಸೆಳೆಯುವ ಆಕರ್ಷಕ ಕ್ರೀಡೆಯಾಗಿ ತನ್ನತನವನ್ನು ಉಳಿಸಿಕೊಂಡಿದೆ.
ಯು. ಎ. ಇ. ಯಲ್ಲಿ ಪ್ರಸಿದ್ದವಾಗಿರುವ ಮಹಿಳಾ ಥ್ರೋಬಾಲ್ ತಂಡಗಳು - ಅಬುಧಾಬಿ ಕರ್ನಾಟಕ ಸಂಘ, ಕೆ. ಸಿ. ಒ. ಅಬುಧಾಬಿ, ಜಶನ್ ದುಬಾಯಿ, ಮಂಗ್ಳುರ್ ಕೊಂಕಣ್ಸ್, ಬಂಟ್ಸ್ ದುಬಾಯಿ, ಬಂಟ್ಸ್ ಅಬುಧಾಬಿ, ಕೆನೆರೆಟ್ಸ್, ಯುನೈಟೆಡ್ ಸ್ಟಾರ್‍ಸ್, ಕರ್ನಾಟಕ ಸಂಘ ಶಾರ್ಜಾ, ಯುನೈಟೆಡ್ ಫ್ರೆಂಡ್ಸ್, ಫ್ರೆಂಡ್ಸ್ ದುಬಾಯಿ, ಕೊಂಕಣ್ಸ್ ದುಬಾಯಿ, ಎಸ್.ಎಂ.ಕೆ.ಸಿ. ದುಬಾಯಿ ಈ ತಂಡಗಳು ವಿವಿಧ ಸಂಘ ಸಂಸ್ಥೆಗಳ, ವಿವಿಧ ಸ್ಥಳಗಳಲ್ಲಿ ಪೈಪೋಟಿ ನಡೆಸಿ, ಪ್ರತಿಷ್ಠಿತ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದೆ.
ಈ ಬಾರಿ ಶಾರ್ಜಾ ವಾಂಡರರ್ಸ್ ಕ್ರೀಡಾಂಗಣದಲ್ಲಿ ಇದೇ ೮ನೇ ತಾರೀಕು ಶುಕ್ರವಾರ ಬೆಳಿಗ್ಗೆ ೮.೦೦ ಗಂಟೆಯಿಂದ ಸಂಜೆಯವರೆಗೆ "ಬಂಟ್ಸ್ ಥ್ರೋಬಾಲ್ ದುಬಾಯಿ’ ಆಶ್ರಯದಲ್ಲಿ ಯು. ಎ. ಇ. ಮಟ್ಟದ ಮಹಿಳೆಯರ ಥ್ರೋಬಾಲ್ ಪಂದ್ಯಾಟ ನಡೆಯಲಿದೆ. ಯು. ಎ. ಇ. ಯ ಪ್ರತಿಷ್ಠಿತ ಮಹಿಳಾ ತಂಡಗಳು ಪೈಪೋಟಿಗೆ ಸಜ್ಜಾಗಿದೆ.
"ಬಂಟ್ಸ್ ಥ್ರೋಬಾಲ್ ದುಬಾಯಿ’ ಕಾರ್ಯಕಾರಿ ಸಮಿತಿಯವರು ಕ್ರೀಡಾಭಿಮಾನಿಗಳಿಗೆ ಆತ್ಮೀಯವಾಗಿ ಆಹ್ವಾನವನ್ನು ನೀಡುತ್ತಾ ಕ್ರೀಡೆಯನ್ನು ಯಶಸ್ಸು ಗೊಳಿಸಲು ಕೋರಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಗಣೇಶ್ ರೈ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-01-07 00:00:00
|
|
|