ಮಂಗಳೂರು: ಮಂಗಳ ವಿದ್ಯಾಕೇಂದ್ರದ ವಾರ್ಷಿಕೋತ್ಸವ - ರಂಜಿಸಿದ ಚಿಣ್ಣರ ಸಾಂಸ್ಕ್ರತಿಕ ನ್ರತ್ಯ ಪ್ರದರ್ಶನ. |
ಪ್ರಕಟಿಸಿದ ದಿನಾಂಕ : 2010-01-03
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ )
ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ -ಶ್ಯಾಮ್ ಮೊಯಿಲಿ
ಮಂಗಳೂರು,ಜ.೦೩: ವಿದ್ಯಾಕ್ಷೇತ್ರದಲ್ಲಿ ಉತ್ತಮ ಸಾಧನೆಗೈದು ಇದೀಗ ಅಭಿವ್ರದ್ಧಿ ಪಥದತ್ತ ಸಾಗುತ್ತಿರುವ ಮಂಗಳ ವಿದ್ಯಾಕೇಂದ್ರ ತನ್ನ ಕಾರ್ಯ ಚಟುವಟಿಕೆಗಳಿಂದ ವಿಶ್ವವ್ಯಾಪಿ ಹೆಸರು ಗಳಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ದುಬಾಯಿ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಹಾಗೂ ಗಲ್ಫ್ ಮೆಡಿಕಲ್ ಯುನಿವರ್ ಸಿಟಿ ಅಸ್ಪತ್ರೆಯ ಫಾರ್ಮಸಿ ವಿಭಾಗದ ಮುಖ್ಯಸ್ಥ ಬಿ.ಜಿ.ಮೋಹನ್ ದಾಸ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿ ಶ್ಲಾಘನೆಗೈದರು.
ಅವರು ನಗರದ ಗಾಂಧಿನಗರ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ - ಸಭಾಭವನದಲ್ಲಿ ಶನಿವಾರ ನಡೆದ "ಮಂಗಳ ವಿದ್ಯಾಕೇಂದ್ರದ ವಾರ್ಷಿಕೋತ್ಸವ"ದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಆಡಳಿತಕೊಳಪಟ್ಟ ಮಂಗಳ ವಿದ್ಯಾಕೇಂದ್ರ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ಇನ್ನಷ್ಟು ಪ್ರಜ್ವಲವಾಗಿ ಬೆಳಗಲಿ ಎಂದು ಅವರು ಶುಭ ಹಾರೈಸಿದರು.
ಇದೇ ಸಂಧರ್ಭದಲ್ಲಿ ಗಲ್ಫ್ ಕನ್ನಡಿಗ ಟೀಮ್ ಪರವಾಗಿ ಗಣಕ ಯಂತ್ರ (ಕಂಪ್ಯೂಟರ್) ವನ್ನು ವಿದ್ಯಾಕೇಂದ್ರಕ್ಕೆ ನೀಡುವುದಾಗಿ ಅವರು ತಿಳಿಸಿದರು.
ಸಮಾರಂಭದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಬೊಕ್ಕಪಟ್ಣ ಸರಕಾರಿ ಕಾಲೇಜಿನ ಪ್ರಾಂಶುಪಾಲರಾದ ಶ್ಯಾಮ್ ಮೊಯಿಲಿ ಅವರು ಮಾತನಾಡಿ ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಹಾಗಾಗಿ ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ಅಗತ್ಯವಿದೆ. ಜ್ನಾನಾರ್ಜನೆಗೆ ವಿಪುಲ ಅವಕಾಶಗಳಿರುವ ಇಂದಿನ ದಿನಗಳಲ್ಲಿ ವಿಧ್ಯಾಬ್ಯಾಸದ ಅಯ್ಕೆಗೆ ಉತ್ತಮ ಅವಕಾಶಗಳಿವೆ, ತಂತ್ರಜ್ನಾನಗಳಿಂದ ಮುಂದುವರಿಯುತ್ತಿರುವ ಈ ಅಧುನಿಕ ಜಗತ್ತಿನಲ್ಲಿ ನಮ್ಮ ದೇಶವನ್ನು ಪ್ರಗತಿಯತ್ತ ನಡೆಸಲು ವಿದ್ಯಾವಂತ ಯುವಶಕ್ತಿಗಳಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಬಳಿಕ ವಿವಿಧ ಚಟುವಟಿಕೆಗಳಲ್ಲಿ ಉತ್ತಮ ನಿರ್ವಾಹಣೆ ತೋರಿದ ವಿಧ್ಯಾರ್ಥಿಗಳಿಗೆ ಅಥಿತಿ ಗಣ್ಯರು ಬಹುಮಾನ ವಿತರಿಸಿದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷರಾದ ದಿನೇಶ್ ದೇವಾಡಿಗ, ವಿದ್ಯಾಕೇಂದ್ರದ ಮಹತ್ವದ ಬೆಳವಣಿಗೆಯಲ್ಲಿ ಕೈಜೋಡಿಸಿಕೊಂಡು, ಸಂಸ್ಥೆಯ ಅಭಿವ್ರದ್ಧಿಗೆ ಸದಾ ಶ್ರಮಿಸುತ್ತಾ, ಉತ್ತಮ ಮಾರ್ಗದರ್ಶನದಲ್ಲಿ ವಿಧ್ಯಾಕೇಂದ್ರವನ್ನು ನಡೆಸುತ್ತಾ ಎಲ್ಲರಿಗೂ ಅತ್ಮೀಯರಾಗಿರುವ, ಸಾಮಾಜಿಕ ಚಿಂತಕರೂ ಅಗಿರುವ ಸಂಘದ ಉಪಾಧ್ಯಕ್ಷಕರಾದ ವಾಮನ್ ಮರೋಳಿ,
ಪ್ರಧಾನ ಕಾರ್ಯದರ್ಶಿ ರಾಮಚಂದ್ರ ದೇವಾಡಿಗ, ಕೋಶಾಧಿಕಾರಿ ಸದಾಶಿವ ಎಮ್.ದೇವಾಡಿಗ, ಶಾಲಾಭಿವ್ರದ್ಧಿ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ಸುಲೋಚನಾ ಧರ್ಮಪ್ಪ ಹಾಗೂ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೊದಲಿಗೆ ವಿದ್ಯಾಕೇಂದ್ರದ ಸಂಚಾಲಕರಾದ ಕೆ.ಗೋಪಾಲ ಮೊಯಿಲಿ ಸ್ವಾಗತಿಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಗೌರಿ ವಾರ್ಷಿಕ ವರದಿ ವಾಚಿಸಿದರು.
ಶಿಕ್ಷಕಿ ಪೂರ್ಣಿಮ ಕಾರ್ಯುಕ್ರಮ ನಿರೂಪಿಸಿದರು, ರವಿಕಲಾ ವಂದಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಂಗಳ ವಿದ್ಯಾಕೇಂದ್ರದಲ್ಲಿರುವ ಮಂಗಳ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಹಿರಿಯ, ಕಿರಿಯ ಪ್ರಾಥಮಿಕ ವಿಭಾಗಗಳ ಹಾಗೂ ನರ್ಸರಿ ವಿಭಾಗಗಳ ವಿಧ್ಯಾರ್ಥಿಗಳು ಮತ್ತು ಪುಟಾಣಿ ಚಿಣ್ಣರಿಂದ ವೈವಿಧ್ಯಯ ಸಾಂಸ್ಕ್ರತಿಕ ನ್ರತ್ಯ ಕಾರ್ಯಕ್ರಮವು ಜರುಗಿತ್ತು.
ವರದಿಯ ವಿವರಗಳು |
 |
ಕೃಪೆ : ಕರೀಶ್ಮ ಶೆಟ್ಟಿ ಎಸ್ ಕಾಪಿಕಾಡ್ ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-01-03 00:00:00
|
|
| Raghavendra G, Hiriadka | 2010-01-05 | | Photos reflecting the teacher\'s hard work and dedication towards student’s grow in curriculum and co curriculum activities. All the best |
|