ಉಡುಪಿ: ಯಕ್ಷಗಾನ ಕಲಾರಂಗದ ಡೈರಿ ಬಿಡುಗಡೆ |
ಪ್ರಕಟಿಸಿದ ದಿನಾಂಕ : 2010-01-02
ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗದಲ್ಲಿ ಪ್ರತಿವರ್ಷದಂತೆ ಯಕ್ಷಗಾನ ಕಲಾವಿದರ ಬಗ್ಗೆ ಮಾಹಿತಿಗಳಿರುವ ಯಕ್ಷನಿಧಿ ಯಕ್ಷಗಾನ ಪಾಕೇಟ್ ಡೈರಿಯ ಬಿಡುಗಡೆ ಸಮಾರಂಭ ಇತ್ತೀಚೆಗೆ ರಾಜಾಂಗಣದಲ್ಲಿ ನಡೆಯಿತು.
ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಡೈರಿ ಬಿಡುಗಡೆ ಮಾಡಿದರು. ಕಾರ್ಪೋರೇಶನ್ ಬ್ಯಾಂಕ್‌ನ ಹಿರಿಯ ಪ್ರಬಂಧಕ ಗೋಪಾಲಕೃಷ್ಣ ಮಯ್ಯ, ಬಡಗುಬೆಟ್ಟು ಕೋ ಆಪರೇಟಿವ್ ಬ್ಯಾಂಕ್‌ನ ಪ್ರಬಂಧಕ ಬಾಲಚಂದ್ರ ಕರ್ಕೇರ, ಯಕ್ಷಗಾನ ಕಲಾರಂಗದ ಎಸ್.ವಿ. ಭಟ್, ಮುರಳಿ ಕಡೆಕಾರ್, ಶ್ರೀನಿವಾಸ ಆಚಾರ್ಯ, ಗೋಪಾಲಕೃಷ್ಣ ರಾವ್, ನಾರಾಯಣ ಹೆಗಡೆ ಮೊದಲಾದವರು ಇದ್ದರು.
ವರದಿಯ ವಿವರಗಳು |
 |
ಕೃಪೆ : ಚಿತ್ರ-ದುರ್ಗಪ್ರಸಾದ್ ಕೆ. ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-02
|
|
|