ಮಸ್ಕತ್: ಅಬುಧಾಬಿಯ ವೆಬ್ ಸೈಟ್‌ಗೆ ಜಿಸಿಸಿ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-01-02
ಮಸ್ಕತ್: ಅಬುಧಾಬಿಯ ಇಆಡಳಿತಕ್ಕಾಗಿನ ವೆಬ್‌ಸೈಟ್ www.abudhabi.ae ಗಲ್ಫ್ ಸಹ ಕಾರ ಮಂಡಳಿ(ಜಿಸಿಸಿ)ಯ ಚೊಚ್ಚಲ ಇಆಡಳಿತ ಪ್ರಶಸ್ತಿಯನ್ನು ಗೆದ್ದಿದೆ.
ಮಸ್ಕತ್‌ನ ಅಲ್‌ಬಸ್ತಾನ್ ಹೊಟೇಲ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಬುಧಾಬಿ ಸಿಸ್ಟಮ್ಸ್ ಆಂಡ್ ಇನ್-ರ್ಮೆಶನ್ ಸೆಂಟರ್‌ನ ಮಹಾನಿರ್ದೇಶಕ ಈ ಪ್ರಶಸ್ತಿಯನ್ನು ಸ್ವೀಕರಿಸಿ ದರು.
ಸುಲ್ತಾನೇಟ್ ಆ- ಓಮನ್‌ನ ಮಾಹಿತಿ ತಂತ್ರಜ್ಞಾನ ಪ್ರಾಧಿಕಾರವು ಡಿಸೆಂಬರ್ ೨೧ರಿಂದ ೨೩ ರವರೆಗೆ ಆಯೋಜಿಸಿದ ಪ್ರಪ್ರಥಮ ಜಿಸಿಸಿ ಇಆಡಳಿತ ಸಮಾವೇಶದ ಅಂಗವಾಗಿ ಈ ಪ್ರಶಸ್ತಿಯ ನ್ನು ಆರಂಭಿಸಲಾಗಿದೆ.
ಅಬುಧಾಬಿಯ ಇಆಡಳಿತ ವೆಬ್‌ಸೈಟ್ ಇಂಗ್ಲಿಷ್ ಅಬುಧಾಬಿಯ ವೆಬ್‌ಸೈಟ್‌ಗೆ ಜಿಸಿಸಿ ಪ್ರಶಸ್ತಿ ಹಾಗೂ ಅರೇಬಿಕ್ ಭಾಷೆಗಳೆರಡರಲ್ಲೂ ವೈವಿಧ್ಯಮಯ ಲೇಖನಗಳು ಹಾಗೂ ಸೇವೆಗಳನ್ನು ಪ್ರಸಾರ ಮಾಡುತ್ತಿದೆ. ಈ ಜನಪ್ರಿಯ ವೆಬ್‌ಸೈಟ್ ಸುಮಾರು ೩೦ ಸಾವಿರ ಪ್ರಕಟಿತ ಲೇಖನಗಳು ಹಾಗೂ ದಾಖಲೆಗಳನ್ನು ಹೊಂದಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ಭಾರತಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-02 00:00:00
|
|
|