ಭಾರತೀಯ ಮೂಲದ ವಿಜ್ಞಾನಿಗೆ ಕೆನಡಾದ ಗೌರವ |
ಪ್ರಕಟಿಸಿದ ದಿನಾಂಕ : 2010-01-02
ಟೊರಾಂಟೊ (ಐಎಎನ್‌ಎಸ್): ಭಾರತೀಯ ಮೂಲದ ವಿಜ್ಞಾನಿಯೊಬ್ಬರು ಕೆನಡಾದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಆರ್ಡರ್ ಆಫ್ ಕೆನಡಾಗೆ ಭಾಜನರಾಗಿದ್ದಾರೆ.
ಭಾರತೀಯ ಮೂಲದ ವಿಜ್ಞಾನಿ ಶ್ರವಣ್ ಕುಮಾರ್ ಅವರು ಆಲ್ಬೆರ್ಟಾ ವಿಶ್ವವಿದ್ಯಾಲಯದಲ್ಲಿ ‘ಕಾರ್ಯಸ್ಥಳದಲ್ಲಾಗುವ ಗಾಯ ಮತ್ತು ಬೆನ್ನೆಲುಬು’ (work place injury and the spine) ಕುರಿತು 3 ದಶಕಗಳ ಕಾಲ ನಡೆಸಿದ ಸಂಶೋಧನೆಯನ್ನು ಗುರುತಿಸಿ ಕೆನಡಾ ಸರ್ಕಾರ ಗುರು ವಾರ ಈ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಿದೆ.
ಅಲಹಾಬಾದ್‌ನಲ್ಲಿ ಜನಿಸಿದ ಕುಮಾರ್ ಅವರು ಅಲಹಾಬಾದ್ ವಿವಿಯಲ್ಲಿ ಪ್ರಾಣಿಶಾಸ್ತ್ರ ವಿಷಯ ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಬ್ರಿಟನ್‌ನಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಕೈ ಗೊಂಡಿದ್ದರು. 1971ರಿಂದ 1973ರವರೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯಲ್ಲಿ ಕಾರ್ಯನಿರ್ವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಅದ್ವೀತೀಯ ಸಾಧನೆ ಮಾಡಿ ಈ ಅತ್ಯುನ್ನತ ಪುರಸ್ಕಾರವನ್ನು ತಮ್ಮದಾಗಿಸಿ ಕೊಂಡ 57 ಕೆನಡಿಯನ್ನರಲ್ಲಿ ಕುಮಾರ್ ಕೂಡ ಒಬ್ಬರು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-01-02
|
|
|