ಆದಿತ್ಯವಾರ, 05-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜನತಾ ನ್ಯಾಯಾಲಯದ ಮೂಲಕ 5154 ಪ್ರಕರಣ ಇತ್ಯರ್ಥ : ಲೋಕ್ ಅದಾಲತ್ ಸಮಾರೋಪದಲ್ಲಿ ನರೇಂದ್ರ ಕುಮಾರ್ ಗುಣಕಿ
Latest news item ಸೃಜನ ಶೀಲತೆ ಇಲ್ಲದಿದ್ದಾಗ ಶಿಕ್ಷಣದ ಬೆಳವಣಿಗೆಗೆ ಕೊರತೆ | ಅಶೋಕ್ ಕುಮಾರ್ ಶೆಟ್ಟಿ, ಎಂ.ಎಸ್.ನಾಗರಾಜ್ ರಾವ್ ಹಾಗೂ ಡಾ.ಚಂದ್ರಶೇಖರ್ ದಾಂಬ್ಲೆಯವರಿಗೆ ಸನ್ಮಾನ
Latest news item ದುಬಾಯಿಯಲ್ಲಿ ’ಗಮ್ಮತ್ ಕಲಾವಿದೇರ್’ ಪ್ರಥಮ ಪ್ರದರ್ಶನ: ನಟನಾ ಚಾತುರ್ಯದಲ್ಲಿ ಮಿಂಚಿದ ’ಈ ಪೊರ್ಲು ದಾಯೇ’ ತುಳು ನಾಟಕ
Latest news item ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ಕೃಷಿಯತ್ತ ಒಲವು ಕಡಿಮೆ : ಉಡುಪಿ ರೈತ ಸಮಾವೇಶದಲ್ಲಿ ಶಾಸಕ ರಘುಪತಿ ಭಟ್
Latest news item ಉಡುಪಿ ಲಯನ್ಸ್ ಗೆ ಜಿಲ್ಲಾ ಲಯನ್ಸ್ ಗವರ್ನರ್ ಇಂದ್ರಾಳಿ ಜಯಕರ್ ಶೆಟ್ಟಿ ಅಧಿಕೃತ ಭೇಟಿ
Latest news item ಸುಬ್ರಮಣಿಯನ್ ಸ್ವಾಮಿ ಅರ್ಜಿ ವಜಾ: ಚಿದಂಬರಂ ನಿರಾಳ
Latest news item ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
Latest news item ಚೆನ್ನೈ ತೆಕ್ಕೆಗೆ ಜಡೇಜಾ; 9.70 ಕೋಟಿಗೆ ಖರೀದಿ; ವಿನಯ ಕುಮಾರ್ ಗೆ 4.86ಕೋಟಿ ಕೊಟ್ಟ ರೋಯಲ್ ಚ್ಯಾಲೇಂಜರ್ಸ್ | ಯಾವ ಯಾವ ಫ್ರಾಂಚೈಸಿ ತೆಕ್ಕೆಗೆ?
Latest news item ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
Latest news item ಜೈನ ಸಾಹಿತಿಗಳಿಂದ ಕನ್ನಡ ಸಾಹಿತ್ಯದ ಬೆಳವಣಿಗೆ: ಡಾ.ಶಾಂತಿನಾಥ ದಿಬ್ಬದ
Latest news item ವೈದ್ಯರಲ್ಲಿ ಮಾನವೀಯತೆ ಮುಖ್ಯ: ನ್ಯಾ. ಸಂತೋಷ್ ಹೆಗ್ಡೆ
Latest news item ಪಡುಬಿದ್ರೆಯಲ್ಲಿ ಎಸಿಸಿ ಸಿಮೆಂಟ್ ಕಂಪೆನಿ ಸ್ಥಾಪನೆ: ರಸ್ತೆ ಕಾಮಗಾರಿಗೆ ಬೂದಿ ಬಳಸಬಹದು : ಡಿಸಿ | ಫೆ. 4ರಂದು ಪ್ರತಿಭಟನೆ
Latest news item ಉಡುಪಿ ಶೇಮ್, ಶೇಮ್ !: ಸೈಂಟ್ ಮೇರೀಸ್ ದ್ವೀಪದಲ್ಲಿ ಜಿಲ್ಲಾಡಳಿತ ಕೃಪಕಟಾಕ್ಷದಲ್ಲಿ ರೇವ್ ಪಾರ್ಟಿ: ವಿದೇಶಿ ಸಂಸ್ಕೃತಿ ಆನಾವರಣ, ಮದ್ಯ, ಡ್ರಗ್ಸ್ ಗಳದ್ದೇ ಕಾರುಬಾರು
Latest news item ಅಪಘಾತಕ್ಕೆ ತುತ್ತಾಗಿ ಕಾಮಿಡಿ ನಟ ಕರಿ ಬಸವಯ್ಯ ಅಕಾಲಿಕ ಮರಣ { VIEW VIDEO of HIS EMOTIONAL LIFE STORY }.
Latest news item ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
Latest news item ಕುಸಿಯುವ ಭೀತಿಯಲ್ಲಿ ಕುದಿ ಗ್ರಾಮದ ಕೋಂಟು ಸೇತುವೆ : ಆತಂಕದಲ್ಲಿ ಗ್ರಾಮಸ್ಥರು : ಸೂಕ್ತ ಪರಿಹಾರಕ್ಕೆ ಒತ್ತಾಯ
Latest news item ಡಿವಿಜಿಯವರ ಕಾವ್ಯಗಳು ಜನಸ್ವಾರ್ಥ : ಡಾ. ಹೆಚ್. ಶಾಂತರಾಮ್
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ವಿಷ್ಣುವರ್ಧನ ಚಿರಮೌನ

 { ಪತಿಗೆ  ಭಾರತಿ ವಿದಾಯ}

ಬೆಂಗಳೂರು: ಕನ್ನಡ ಚಿತ್ರರಂಗದ ನಾಯಕತ್ವ ವಹಿಸಿದ್ದ ರಾಜಕುಮಾರ್ ಅವರ ಸಮಾಧಿಯೇ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಿ  ರಾಜ್‌ಕುಮಾರ್ ಅವರ ನಂತರದ ಸ್ಥಾನ ತುಂಬಿದ್ದ ಹಿರಿಯ ನಟ ವಿಷ್ಣುವರ್ಧನ್ ಅಸ್ತಂಗತರಾಗಿದ್ದಾರೆ. ರಾಜ್‌ಕುಮಾರ್ ನಿಧನರಾದ ನಂತರ, ಕನ್ನಡ ಚಿತ್ರರಂಗದಲ್ಲಿ ಆವರಿಸಿರುವ ಶೂನ್ಯವನ್ನು ತುಂಬಬೇಕು. ನಾಯಕತ್ವ ವಹಿಸಿಕೊಳ್ಳಬೇಕು ಎಂದು ವಿಷ್ಣುವರ್ಧನ್ ಅವರನ್ನು ಚಿತ್ರರಂಗದ ಬಹುತೇಕರು ಕೇಳಿಕೊಂಡರು. ಅವರ ಕುಚುಕುಕುಚುಕು ಗೆಳೆಯ ಅಂಬರೀಷ್ ಕೂಡ ಹೇಳಿದ್ದರು. ಆದರೆ ವಿಷ್ಣು ಅದನ್ನು ನಯವಾಗಿ ನಿರಾಕರಿಸಿದ್ದರು. ಅಂಬರೀಷ್ ಅವರೇ ನಾಯಕತ್ವ ವಹಿಸಲಿ ಎಂದು ಸಲಹೆ ಮಾಡಿದರು.

ವಿಷ್ಣುವರ್ಧನ್ ಅವರ ಆರೋಗ್ಯ ಆಗಾಗ ಕೈಕೊಡುತ್ತಿದ್ದುದೂ ಇದಕ್ಕೆ ಕಾರಣ. ಕಳೆದ ಎರಡು ವರ್ಷಗಳಿಂದ ಅವರು ಖಿನ್ನರಾಗಿದ್ದುದಕ್ಕೂ ಅದೇ ಕಾರಣ. ಮಧುಮೇಹ ಅವರನ್ನು ಹಣ್ಣು ಮಾಡಿತ್ತು. ಆದರೆ ಅಭಿನಯದ ವಿಷಯ ಬಂದಾಗ, ಕಥೆ ಕೇಳುವಾಗ ವಿಷ್ಣು ಎಲ್ಲವನ್ನೂ ಮರೆಯುತ್ತಿದ್ದರು. ವಿಷ್ಣು ಅವರ ಜತೆ ಚಿತ್ರರಂಗ ಪ್ರವೇಶಿಸಿದವರೆಲ್ಲಾ ನಿವೃತ್ತರಾದರು. ಪೋಷಕ ಪಾತ್ರಗಳತ್ತ ಜರುಗಿದರು. ಆದರೆ ವಿಷ್ಣು ನಾಯಕನಟ ಸ್ಥಾನದಿಂದ ಅಲುಗಾಡಲೇ ಇಲ್ಲ. ಅವರ 200 ನೇ ಚಿತ್ರ “ಆಪ್ತ ರಕ್ಷಕ” ಬಿಡುಗಡೆಗೆ ಸಿದ್ಧವಾಗಿತ್ತು. ಇನ್ನೂರು ಚಿತ್ರಗಳೆಂದರೆ ನಾಯಕನಟನ ಪಾಲಿಗೆ ಹೆಗ್ಗಳಿಕೆಯೇ ಹೌದು.
 
 ‘ಆಪ್ತ ಮಿತ್ರ’ ಚಿತ್ರದ ಯಶಸ್ಸು ಗೊತ್ತೇ ಇದೆ. ಮನೋವೈದ್ಯನಾಗಿ ವಿಷ್ಣುವರ್ಧನ್ ಅಭಿನಯ ಕೂಡ, ವಿಷ್ಣು ಅವರಿಗೂ ಅದು ಒಂದು ಬ್ರೇಕ್. ದ್ವಾರಕೀಶ್ ಅವರಿಗೂ ಜೀವದಾನ. ಚಿತ್ರರಂಗಕ್ಕೂ ಟಾನಿಕ್. ’ಆಪ್ತಮಿತ್ರ’ ಯಶಸ್ಸಿನ ಸ್ಫೂರ್ತಿಯಲ್ಲಿ ಅದರ ಭಾಗ-2  ‘ಆಪ್ತ ರಕ್ಷಕ’ ಚಿತ್ರವನ್ನು ತಯಾರಿಸಲಾಗಿದೆ. ವಿಷ್ಣುವರ್ಧನ್ ಅವರಿಗೆ ವಿಶೇಷ ಗೆಟಪ್ ಇದೆ. ಅವರ ಅಭಿನಯವೂ ಮೆರೆಯಲಿದೆ ಎಂಬ ಸುದ್ದಿಗಳಿವೆ. ’ಆಪ್ತ ಮಿತ್ರ’ ಕನ್ನಡದಲ್ಲಿ ತಯಾರಿಸುವಾಗಲೇ ಶಕುನಗಳು ಸರಿ ಇರಲಿಲ್ಲ. ಆ ಚಿತ್ರದ ನಾಯಕಿ ಸೌಂದರ್ಯ ಚಿತ್ರೀಕರಣ ಮುಕ್ತಾಯವಾದ ನಂತರ ಆಪಘಾತದಲ್ಲಿ ಕಣ್ಮರೆಯಾದರು. ಆನಂತರ ಸಿನಿಮಾ ಸೂಪರ್‌ಡೂಪರ್ ಹಿಟ್ ಆಯಿತು. ಚಿತ್ರದಲ್ಲಿ ಅದ್ಭುತ ವಾಗಿ ನಟಿಸಿದ್ದ ಸೌಂದರ್ಯ ಇನ್ನಿಲ್ಲವಾಗಿದ್ದರು.  ‘ಆಪ್ತ ರಕ್ಷಕ’ ಚಿತ್ರ ತಯಾರಾಗುವಾಗ ಚಿತ್ರದ ನಾಯಕಿ ನಾಗವಲ್ಲಿ ಪಾತ್ರಧಾರಿ ಸಂಧ್ಯಾಗೆ ಭಯವೋ ಭಯ. ಅದೇ ತರಹದ ಚಿತ್ರವಾಗಿರುವುದ ರಿಂದ ನಾಯಕಿ ಸಾವು ನಿಶ್ಚಿತ. ಹೀಗಾಗಿ ಪ್ರತೀ ಬಾರಿ ಚಿತ್ರೀಕರಣ ವಾಗುವಾಗಲೂ   ಆತಂಕ ವ್ಯಕ್ತ ಮಾಡುತ್ತಿದ್ದರಂತೆ. ಇಡೀ ಚಿತ್ರತಂಡಕ್ಕೆ ಅಂತಹ ಆತಂಕ ಇದ್ದೇ ಇತ್ತು. ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ‘ಅಬ್ಬಾ ಇನ್ನೇನು ಆತಂಕ ಕಳೆಯಿತು’ ಎನ್ನುತ್ತಿರುವಂತೆಯೇ ಚಿತ್ರದ ನಾಯಕ ನಟನನ್ನೇ ವಿಧಿ ಸೆಳೆದುಕೊಂಡು ಬಿಡುವುದೇ?

ಚಿತ್ರರಂಗದಲ್ಲಿ 37 ವರ್ಷಗಳ ಕಾಲ ನಾಯಕನಟರಾಗಿಯೇ ಉಳಿದ ವಿಷ್ಣುವರ್ಧನ್ ಅವರದು ಒಂದು ರೀತಿಯಲ್ಲಿ ವರ್ಣರಂಜಿತ ಚಿತ್ರಜೀವನ. ಪತ್ನಿ ಭಾರತಿ, ಅಳಿಯ ಅನಿರುದ್ಧ ಹೀಗೆ ಚಿತ್ರರಂಗದ ಕುಟುಂಬವೇ ಅವರ ಸುತ್ತ ಇತ್ತು. ತಂದೆ ಎಚ್.ಎಲ್.ನಾರಾಯಣರಾವ್ ಅವರೂ ನಾಟಕಗಳನ್ನು ಬರೆದವರು, ಚಿತ್ರಕಥೆ, ಸಿನಿಮಾಗಳಿಗೆ ಸಂಭಾಷಣೆ ಬರೆದವರು. ಮೈಸೂರಿನ ಚಾಮುಂಡಿಪುರಂನಲ್ಲಿ 1950 ರಲ್ಲಿ ಹುಟ್ಟಿದ ಸಂಪತ್‌ಕುಮಾರ್ (ವಿಷ್ಣುವರ್ಧನ್ ಅವರ ಮೂಲ ಹೆಸರು) ಬಾಲ್ಯ ಕಳೆದದ್ದು ಮೈಸೂರಿನಲ್ಲಿ. ನಾಲ್ವರು ಸಹೋದರಿಯರು. ಒಬ್ಬ ಸಹೋದರ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವೀಧರ.  ತಂದೆ ಬೆಂಗಳೂರಿನಲ್ಲಿ ‘ಪ್ರಜಾವಾಣಿ’ ಕಚೇರಿಯಲ್ಲಿ ಕೆಲಸದಲ್ಲಿದ್ದುದರಿಂದ ನಿತ್ಯ ಕಚೇರಿಗೆ ಬರುತ್ತಿದ್ದರು. ಕಾಲೇಜು ದಿನಗಳಿಂದಲೂ ಮೂಡಿ. ಈ ಸಿಡಿಯುವ ತವಕದ ಯುವಕನನ್ನು ನೋಡಿದ್ದ ‘ಪ್ರಜಾವಾಣಿ’ಯಲ್ಲೇ ಇದ್ದ ವೈಎನ್‌ಕೆ ಅವರು ‘ವಂಶವೃಕ್ಷ’ ಚಿತ್ರದಲ್ಲಿ ಪಾತ್ರ ಕೊಡಿಸಿದರು. ಜಿ.ವಿ.ಅಯ್ಯರ್ ಅವರ ಈ ಚಿತ್ರದಲ್ಲಿ ಕುಮಾರ್ ಎಂಬ ಹೆಸರಿನಲ್ಲೇ ಕಾಣಿಸಿಕೊಂಡ ವಿಷ್ಣುವರ್ಧನ್ ನಂತರ ಜಿಗಿದದ್ದು, ಪುಟ್ಟಣ್ಣಕಣಗಾಲ್ ಅವರ ಅಖಾಡಾಕ್ಕೆ.

‘ವಂಶವೃಕ್ಷ’ದಲ್ಲಿ ಸಣ್ಣ ಪಾತ್ರ. ಅದೇ ವೇಳೆಗೆ ಪುಟ್ಟಣ್ಣ ಕಣಗಾಲರು ತ.ರಾ.ಸು ಅವರ ಮೂರು ಕಾದಂಬರಿಗಳನ್ನು ಆಧರಿಸಿ ತಯಾರಿಸಲು ನಿರ್ಧರಿಸಿದ್ದ ‘ನಾಗರಹಾವು’ ಚಿತ್ರಕ್ಕೆ ಕುಪಿತ ಯುವಕನ ಪಾತ್ರಕ್ಕೆ ಹೀರೊ ಒಬ್ಬನನ್ನು ಹುಡುಕುತ್ತಿದ್ದರು. ಅವರ ಕಣ್ಣಿಗೆ ಬಿದ್ದವರು ಇಬ್ಬರು. ಕುಮಾರ್ ಮತ್ತು ಅಮರನಾಥ್. ಇಬ್ಬರನ್ನೂ ಆಯ್ಕೆ ಮಾಡಿಕೊಂಡ ಪುಟ್ಟಣ್ಣ ಕುಮಾರನಿಗೆ ವಿಷ್ಣುವರ್ಧನ್ ಎಂದೂ, ಅಮರನಾಥ್‌ಗೆ ಅಂಬರೀಷ್ ಎಂದೂ ನಾಮಕರಣ ಮಾಡಿದರು. ಇಬ್ಬರೂ ನಾಯಕರು ಚಿತ್ರರಂಗದ ಮುಂದಿನ ದಿನಗಳಲ್ಲಿ ಇತಿಹಾಸ ಬರೆದರು.

ರಾಜ್‌ಕುಮಾರ್ ಆ ವೇಳೆಗೆ ‘ಬಂಗಾರದ ಮನುಷ್ಯ’ರಾಗಿದ್ದರು. ಕನ್ನಡ ಚಿತ್ರರಂಗ ಬೆಳೆಯುತ್ತಿತ್ತು. ಚಿತ್ರಗಳ ಸಂಖ್ಯೆ ಹೆಚ್ಚುತ್ತಿತ್ತು. ನಾಯಕ ನಟರ ಕೊರತೆ ಇತ್ತು. ವಿಷ್ಣುವರ್ಧನ್ ಆ ಕೊರತೆಯನ್ನು ಸಮರ್ಪಕವಾಗಿ ತುಂಬಿದರು.1972 ರಲ್ಲಿ ಆರಂಭವಾದ ಅವರ ಓಟ ಬುಧವಾರ ಬೆಳಿಗ್ಗೆ ನಿಂತು ಹೋಯಿತು. 2009 ರಲ್ಲಿ ಅವರ ಎರಡು ಚಿತ್ರಗಳು ಬಿಡುಗಡೆಯಾದವು. ’ನಮ್ ಯಜಮಾನ್ರು’ ಹಾಗೂ ‘ಬಳ್ಳಾರಿ ನಾಗ’. ‘ಬಳ್ಳಾರಿ ನಾಗ’ದಲ್ಲಿ ವಿಷ್ಣು ಅವರ ‘ಸಾಹಸ ಸಿಂಹ’ ಇಮೇಜನ್ನು ಮತ್ತೆ ಅವರ ಅಭಿಮಾನಿಗಳಿಗೆ ಉಣಬಡಿಸಿದ್ದರು. ಈ ಚಿತ್ರ ಅವರ ಎಲ್ಲ ಚಿತ್ರಗಳ ಸಿಂಹಾವಲೋಕನ ದಂತಿದೆ. ಅವರು ಪೂರ್ಣಗೊಳಿಸಿ ಹೋಗಿರುವ ಎರಡು ಚಿತ್ರಗಳು ’ಸ್ಕೂಲ್ ಮಾಸ್ಟರ್’ ಮತ್ತು ‘ಆಪ್ತ ರಕ್ಷಕ’. ಮುಂದಿನ ವರ್ಷ ಬಿಡುಗಡೆಯಾಗಲಿವೆ.

80 ರ ದಶಕದಲ್ಲಿ ಹಿಂದಿ ಪ್ರೇಕ್ಷಕರಿಗೆ ಅಮಿತಾಭ್, ಆ್ಯಂಗ್ರಿ ಯಂಗ್‌ಮನ್ ಇಮೇಜನ್ನು ತಂದು ಕೊಟ್ಟರು. ತಮಿಳಿನಲ್ಲಿ ರಜನೀಕಾಂತ್ ಅದೇ ತರಹದ ಪಾತ್ರಗಳಲ್ಲಿ ಮಿಂಚಿದರು. ವಿಷ್ಣುವರ್ಧನ್ ಕನ್ನಡದಲ್ಲಿ ಆ್ಯಂಗ್ರಿ ನಾಯಕ ಪಾತ್ರಗಳಿಗೆ ಜೀವ ತಂದುಕೊಟ್ಟರು. ‘ಸಾಹಸ ಸಿಂಹ’ ಎಂಬ ಜೋಸೈಮನ್ ನಿರ್ದೇಶನದ ಚಿತ್ರ ಯಶಸ್ವಿಯಾದದ್ದೇ ಹೀಗೆ. ಅದೇ ಬಿರುದು ಅವರಿಗೆ ಶಾಶ್ವತವಾಯಿತು.

ಬಹುಮುಖ ಪ್ರತಿಭೆಯ ನಟ ಎನ್ನುವುದನ್ನು ಸಾಬೀತು ಮಾಡುವುದಕ್ಕಾಗಿಯೇ ವಿಷ್ಣುವರ್ಧನ್ ಇತರ ಭಾಷಾ ಚಿತ್ರಗಳಲ್ಲೂ ಅಭಿನಯಿಸಲಾರಂಭಿಸಿದರು. ನಾಲ್ಕು ಹಿಂದಿ ಚಿತ್ರ, ನಾಲ್ಕು ತೆಲುಗು ಚಿತ್ರ, ಐದು ತಮಿಳು ಚಿತ್ರ, ಎರಡು ಮಲೆಯಾಳಂ ಚಿತ್ರಗಳಲ್ಲಿ ಅವರು ಅಭಿನಯಿಸಿ ಪಂಚಭಾಷಾ ನಟರ ಸಾಲಿಗೆ ಸೇರಿದ್ದಾರೆ. ಸಾಮಾಜಿಕ, ಬಾಂಡ್, ಆ್ಯಕ್ಷನ್, ಹಾಸ್ಯ, ಅಂಗವಿಕಲನ (ಶಿವಶಂಕರ್) ಪಾತ್ರ ಹೀಗೆ ಎಲ್ಲ ರೀತಿಯ ಸವಾಲುಗಳನ್ನು ಅವರು ಅಭಿನಯದಲ್ಲಿ ಸ್ವೀಕರಿಸಿದ್ದಾರೆ. ‘ಗಂಧದ ಗುಡಿ’ ಚಿತ್ರ ರಾಜ್‌ಕುಮಾರ್ ಜತೆ ಆಭಿನಯಿಸಿದ ಏಕೈಕ ಚಿತ್ರ. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಕೈಯಲ್ಲಿದ್ದ ಕೋವಿಯಿಂದ ಆಕಸ್ಮಿಕವಾಗಿ ಹಾರಿತೆನ್ನಲಾದ ಗುಂಡು ಚಿತ್ರರಂಗದಲ್ಲಿ ಹಲವಾರು ಸದ್ದುಗಳನ್ನು ಮಾಡಿತು. ವಿವಾದದ ಕೇಂದ್ರವಾಗಿಯೂ ವಿಷ್ಣು ಕೆಲವೊಮ್ಮೆ ಮುಜುಗರಕ್ಕೆ ಈಡಾದರು. ದ್ವಾರಕೀಶ್ ಜತೆ ಕೂಡ ವಿರಸವಾಗಿತ್ತು.

ವಿಷ್ಣುವರ್ಧನ್ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಗಾಯಕರೂ ಆದರು. ಅದಕ್ಕೂ ಅಪಸ್ವರ ತೆಗೆದಿದ್ದವರು ಇದ್ದರು. ಆದರೂ ವಿಷ್ಣು ಹಾಡುವುದನ್ನು ಬಿಡಲಿಲ್ಲ. 

ಎಷ್ಟೇ ವಿವಾದಗಳಿದ್ದರೂ ಅದನ್ನೆಲ್ಲಾ ಮೀರಿ ವಿಷ್ಣುವರ್ಧನ್ ನಟರಾಗಿ ಬೆಳೆದರು. ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲಿ ಸವಾಲಿನ ಪಾತ್ರ. ಅಂತಹ ಚಿತ್ರಗಳು ವಿಷ್ಣು ಅಭಿನಯ ಸಾಮರ್ಥ್ಯವನ್ನು ಸಾಬೀತು ಪಡಿಸಿದುವು. ‘ಸೊಸೆ ತಂದ ಸೌಭಾಗ್ಯ’, ‘ಗಂಧದ ಗುಡಿ’, ‘ದೇವರಗುಡಿ’, ‘ನಾಗರ ಹಾವು’, ‘ಕಿಲಾಡಿ ಜೋಡಿ’, ‘ಕರುಣಾಮಯಿ’, ‘ಕಳ್ಳ-ಕುಳ್ಳ’, ‘ಗಲಾಟೆ ಸಂಸಾರ’, ‘ಹೊಂಬಿಸಿಲು’, ‘ಗುರು ಶಿಷ್ಯರು’, ಮೊದಲಾದ ಚಿತ್ರಗಳು ಅವರನ್ನು ಚಿತ್ರರಂಗದಲ್ಲಿ ಮತ್ತಷ್ಟು ಗಟ್ಟಿಗೊಳಿಸಿದುವು.

ವಿಷ್ಣುವರ್ಧನ್ ಅವರ ನಟನಾ ಶೈಲಿ, ಅವರ ಫೈಟಿಂಗ್ ಶೈಲಿ, ಅವರು ಎಡಗೈಗೆ ಬಳೆ ಧರಿಸಿ ಹೊಡೆದಾಡುವ ರೀತಿ ಎಲ್ಲವೂ ಯುವಕರನ್ನು ಅವರತ್ತ ಆಕರ್ಷಿಸಿದುವು. ಎಷ್ಟೋ ಯುವಕರು ಅಂದಿನ ದಿನಗಳಲ್ಲಿ ಬಳೆ ಧರಿಸಿ ಓಡಾಡುತ್ತಿದ್ದರು. ನಾಗರ ಹಾವಿನ ರಾಮಾಚಾರಿ ಇಮೇಜು ಚಿತ್ರರಂಗದಲ್ಲಿ, ಸುಮಾರು 15 ವರ್ಷಗಳ ಕಾಲ ಉಳಿದಿತ್ತು.

ಅಂಬರೀಷ್ “ಅಂತ”ದಲ್ಲಿ ಅಂತಹದೇ ಇಮೇಜನ್ನು ಮತ್ತಷ್ಟು ಸುಧಾರಣೆ ಮಾಡುವವರೆಗೆ ಅದು ಬಲವಾಗಿ ಬೇರೂರಿತ್ತು.

ಯಶಸ್ಸಿನ ಟ್ರ್ಯಾಕ್ ನೋಡಿದರೆ ವಿಷ್ಣುವರ್ಧನ್ ಕನ್ನಡದ ಸೂಪರ್‌ಸ್ಟಾರ್ ಎನ್ನಬೇಕು. ‘ಭೂತಯ್ಯನ ಮಗ ಅಯ್ಯು’, ‘ಸೊಸೆ ತಂದ ಸೌಭಾಗ್ಯ’, ‘ಗುರು ಶಿಷ್ಯರು’, ‘ಹೊಂಬಿಸಿಲು’, ‘ಬಂಧನ’, ‘ನೀ ಬರೆದ ಕಾದಂಬರಿ’, ‘ಮಲಯ ಮಾರುತ’, ‘ಮುತ್ತಿನ ಹಾರ’, ‘ಕರ್ಣ’, ‘ಯಜಮಾನ’, ‘ಲಾಲಿ’, ‘ಸುಪ್ರಭಾತ’, ‘ವೀರಪ್ಪ ನಾಯಕ’, ‘ಸೂರ್ಯವಂಶ’, ‘ಆಪ್ತಮಿತ್ರ’, ‘ಕೋಟಿಗೊಬ್ಬ’ ಹೀಗೆ ಅವರ  ಚಿತ್ರಗಳು ಸೂಪರ್‌ಹಿಟ್ ಆಗಿ ದಾಖಲೆ ಬರೆದಿವೆ.  ‘ಮುತ್ತಿನ ಹಾರ’ದಲ್ಲಿ ಅವರ ಅಭಿನಯವನ್ನು ಮರೆಯಲು ಹೇಗೆ ಸಾಧ್ಯವಾಗುತ್ತದೆ. ’ಬಂಧನ’ದ ‘ತ್ಯಾಗಮಯಿ’ಯನ್ನೂ, ’ಯಜಮಾನ’ದ ಗತ್ತನ್ನೂ ನೆನಪಿನಿಂದ ತೆಗೆದುಹಾಕಲು ಸಾಧ್ಯವಾಗುವುದಿಲ್ಲ.

 ಬೇರೆ ಭಾಷಾ ಚಿತ್ರರಂಗದಲ್ಲಿ ಇನ್ನೂರು ಚಿತ್ರಗಳಲ್ಲಿ ಅಭಿನಯಿಸಿ, ಇಷ್ಟೊಂದು ಹಿಟ್ ಚಿತ್ರಗಳನ್ನು ನೀಡಿದ ನಟನ ಸ್ಥಾನಮಾನವೇ ಮೇಲೇರುತ್ತದೆ. ಆದರೆ ವಿಷ್ಣು ಅವೆಲ್ಲದರಿಂದ ದೂರವಾದರೇ? ಏಕಾಂಗಿಯಾಗಿ ಉಳಿದರೆ? ಅವರನ್ನೂ ಕನ್ನಡ ಚಿತ್ರರಂಗದಲ್ಲಿ ಸೂಪರ್‌ಸ್ಟಾರ್ ಎಂದು ಯಾರೂ ಕರೆಯಲೇ ಇಲ್ಲ. ನಾಯಕತ್ವ ವಹಿಸಿಕೊಳ್ಳಿ ಎಂದು ದುಂಬಾಲು ಬೀಳಲಿಲ್ಲ. ಇತ್ತೀಚೆಗೆ ಚಿತ್ರರಂಗದ ಅಮೃತಮಹೋತ್ಸವ ಸಮಾರಂಭವಾದಾಗ ಅವರು ದೂರ ಉಳಿದರು. ತಮ್ಮ ಎಂದಿನ ವೇಷಭೂಷಣದಲ್ಲಿ, ಆಧ್ಯಾತ್ಮದ ಮಾತುಗಳಲ್ಲಿ ಮುಳುಗಿ ದಿನೇದಿನೇ ಖಿನ್ನರಾಗುತ್ತಲೇ ಹೋದರು. ಇದು ಒಬ್ಬ ನಾಯಕ ನಟನ ಮೌನರಾಗ.

ವಿಷ್ಣು ಹೆಸರಿನಲ್ಲಿ ಫಿಲ್ಮ್ ಸಿಟಿ
ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿ ಮಾದರಿಯಲ್ಲಿ ನಗರದ ಹೆಸರಘಟ್ಟದಲ್ಲಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಫಿಲಂ ಸಿಟಿ ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಡಾ.ರಾಜಕುಮಾರ್, ವಿಷ್ಣುವರ್ಧನ್ ನೆನಪಿನಲ್ಲಿ ಫಿಲಂ ಸಿಟಿ ಸ್ಥಾಪಿಸಬೇಕು ಎಂದು ಕಾಂಗ್ರೆಸ್‌ನ ವಿ.ಆರ್.ಸುದರ್ಶನ್, ಜೆಡಿಎಸ್‌ನ ವೈ.ಎಸ್.ವಿ.ದತ್ತ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಎಲ್ಲರೂ ಮೆಚ್ಚುವ ಹಾಗೆ ಈ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ ವಾರ್ತೆ / ಗಂಗಾಧರ ಮೊದಲಿಯಾರ್
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಹೋಗಿ ಬಾ ಯಜಮಾನ........
»ವಿಷ್ಣುವಿನ ‘ಯೋಗ’ ; ಅಶ್ವತ್ಥ್ ಯೋಗ್ಯತೆ’: ಶಿಷ್ಯನ ಬಗ್ಗೆ ಮೇಷ್ಟ್ರ ಗುಣಗಾನ
»ಮಂಡ್ಯ: ಹಲ್ಲೇಗೆರೆಯಲ್ಲಿ ಸ್ಮಶಾನ ಮೌನ
»ಮಂಡ್ಯ: ಅಗಲಿದ ‘ಸಾಮ್ರಾಟ’ನಿಗೆ ಅಭಿಮಾನಿಗಳ ಅಶ್ರುತರ್ಪಣ
»ಹುಟ್ಟೂರಲ್ಲೇ ಕೊನೆಯುಸಿರೆಳೆದ ವಿಷ್ಣು
»ಯಜಮಾನನ ನಿರ್ಗಮನ: ಅಭಿಮಾನಿಗಳ ಆಕ್ರೋಶ: ಅಂತಿಮ ದರ್ಶನದ ವೇಳೆ ಕಲ್ಲು ತೂರಾಟ, ದಾಂಧಲೆ ಲಾಠಿ ಪ್ರಹಾರ, ಅಶ್ರುವಾಯು ಸಿಡಿತ (updated news)
»ಸಾಹಸಸಿಂಹ, ನಟ ಭಾರ್ಗವ ಡಾ. ವಿಷ್ಣುವರ್ಧನ್ ಪಂಚಭೂತಗಳಲ್ಲಿ ಲೀನ...
»ಕನ್ನಡಿಗರಿಗೆ ಮತ್ತೊಂದು ಬರಸಿಡಿಲು....ನ್ಯಾಷನಲ್‌ಕಾಲೇಜ್ ಮೈದಾನದಲ್ಲಿ ಸಾರ್ವಜನಿಕ ದರ್ಶನ :.ಬಾಲಕೃಷ್ಣರವರ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ: .ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ೧೦ ಲಕ್ಷ ರು.
»ಹ್ರದಯಾಘಾತ: ಸಾಹಸಸಿ೦ಹ ಡಾ. ವಿಷ್ಣುವರ್ಧನ್ ಹಠಾತ್ ನಿಧನ

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರ್ನಾಟಕ]

»ಕನ್ನಡ ಭಾಷೆ, ಸಾಹಿತ್ಯ ಪರಂಪರೆಗೆ ಐತಿಹಾಸಿಕ ಹಿನ್ನೆಲೆಗಳಿವೆ: ಮೂಡಿಗೆರೆ: 3ನೆ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಶಂಕಿತ ಮಂಗನ ಕಾಯಿಲೆ ಪ್ರಕರಣ ಪತ್ತೆ: ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವ್ಯಕ್ತಿ ದಾಖಲು; ಡಿಎಚ್‌ಓ-ಜಿ.ಪಂ. ಸದಸ್ಯರ ಭೇಟಿ
»ಗುಜರಿ ಅಂಗಡಿಯಲ್ಲಿ ಗಿಲೆಟಿನ್ ಸ್ಫೋಟ: ಮಾಲಕನ ಸಾವು
»ಸರಕಾರಕ್ಕೆ ಆರು ತಿಂಗಳ ಆನಂದ: ಭ್ರಷ್ಟಾಚಾರ ಮುಕ್ತ ಆಡಳಿತವೇ ನನ್ನ ಗುರಿ: ಸದಾನಂದ ಗೌಡ
»ಎತ್ತಿನಹೊಳೆ ಯೋಜನೆಯಿಂದ ಪರಮಶಿವಯ್ಯ ವರದಿಗೆ ಹಿನ್ನಡೆಯಾದರೆ ಹೋರಾಟ: ಸಂಸದ ಬಸವರಾಜು ಎಚ್ಚರಿಕೆ
»ಹಾಸ್ಯನಟನ ಅಂತಿಮಯಾತ್ರೆಯುದ್ದಕ್ಕೂ ಕಣ್ಣೀರು: ಹುಟ್ಟೂರು ಕೊಡಿಗೆಹಳ್ಳಿಯಲ್ಲಿ ಕರಿಬಸವಯ್ಯ ಅಂತ್ಯ ಕ್ರಿಯೆ
»ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ
»ಬಿಎಸ್‌ವೈ ಕುಟುಂಬವನ್ನು ಮತ್ತೆ ಬೆಂಬತ್ತಿದ ಸಮನ್ಸ್: ಲೋಕಾಯುಕ್ತ ಕೋರ್ಟ್ ಆದೇಶ, ಮಾ.3ಕ್ಕೆ ಮುಂದಿನ ವಿಚಾರಣೆ
»ಶಿಕ್ಷಕರಿಗೆ ಅನುದಾನ ನೀಡದಿದ್ದರೆ ಸತ್ಯಾಗ್ರಹ: ಬಸವರಾಜ್
»ನಾನು ಘೋಷಣೆ ಮಾಡುವ ಮುಖ್ಯಮಂತ್ರಿಯಲ್ಲ: ಸದಾನಂದಗೌಡ
»ಇಲ್ರಿ.. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿಲ್ಲ: ಯಡ್ಡಿ
»`ಐಷಾರಾಮಿ ಜೀವನ: ನಾಗರಿಕತೆ ನಾಶ’: ಸುರೇಶ್ ಹೆಬ್ಳೀಕರ್
»ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ: ಮಾಹಿತಿ ಆಹ್ವಾನ
»ಒಳಮೀಸಲಾತಿ ವಿರುದ್ಧ ಒಗ್ಗಟ್ಟು:ಬಿಜೆಪಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶ(Updated)
»ಮಾಡು ಇಲ್ಲವೇ ಮಡಿ ಸ್ಥಿತಿ: ಯಡಿಯೂರಪ್ಪ ದಿಢೀರ್ ದೆಹಲಿಗೆ ದೌಡು
»ಜೈಲು ಗೋಡೆ ಎರಡು ಕೋಟಿ ನುಂಗಿತ್ತಾ..!
»ಗೂಳಿ ಹೊರಕ್ಕೆ: ಕಳಂಕಿತ ಸಭಾಧ್ಯಕ್ಷರೇ ಎಂದಿದ್ದಕ್ಕೆ ಸದನದಿಂದ ಒಂದು ದಿನ ಅಮಾನತು (Updated)
»ಮಡೆಸ್ನಾನ ನಿಷೇಧಕ್ಕೆ ಯತ್ನ: ಡಾ.ಆಚಾರ್ಯ
»ಹೈಕಮಾಂಡ್ ತುರ್ತು ಬುಲಾವ್: ದಿಲ್ಲಿಗೆ ದೌಡಾಯಿಸಿದ ಬಿಎಸ್‌ವೈ
»ಶಾಲಾ ಮಕ್ಕಳ ಮೇಲೆ ಲಾಠಿ ಪ್ರಹಾರ: ಬಜ್ಪೆ ಇನ್ಸ್‌ಪೆಕ್ಟರ್ ಮೇಲೆ ಕ್ರಮದ ಭರವಸೆ
»ಹಿಂದುಳಿದವರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸಾವಿರ ಕೋಟಿ ರೂ. ಮೀಸಲು: ಸಿಎಂ
»ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ತಾಯಿ-ಮಗು ಮೃತ್ಯು
»ವಿರೋಧದ ಮಧ್ಯೆ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ: ಮಹಿಳಾ ವಿವಿಗೆ ಎಲ್ಲ ಜಿಲ್ಲೆಗಳನ್ನು ಸೇರಿಸಿ: ಮಾತಿನ ಚಕಮಕಿ
»ಭದ್ರಾ, ಕುದುರೆಮುಖ ಆದಿವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ: ಸಿಎಂ
»ಕೆಜಿಎಫ್ ತಾಲೂಕು ಕೇಂದ್ರಕ್ಕೆ ಆಗ್ರಹ: ಬಂದ್ ಯಶಸ್ವಿ
»ಕಳಪೆ ಬಿತ್ತನೆ ಬೀಜ ಪೂರೈಕೆ: ಕೈಗೆ ಬಂದ ತುತ್ತು ಬಾಯಿಗಿಲ್ಲ
»ರಾಜ್ಯದ ಆರ್ಥಿಕ ಸ್ಥಿತಿಯ ‘ಶ್ವೇತಪತ್ರ’ಕ್ಕೆ ಡಾ.ಜಿ.ಪರಮೇಶ್ವರ್ ಆಗ್ರಹ
»ಸುಬ್ರಹ್ಮಣ್ಯ ಸ್ವಾಮಿಗೆ ಡಾಕ್ಟರೇಟ್
»ಬಯಲುಸೀಮೆ ಆರು ಜಿಲ್ಲೆಗಳಿಗೆ ಕುಡಿಯುವ ನೀರು; ತಿಂಗಳಲ್ಲಿ ಎತ್ತಿನಹೊಳೆ ನಿರ್ಧಾರ. ನೇತ್ರಾವತಿ ತಿರುವು ಇಲ್ಲ..ಹೆಚ್ಚಿನ ನೀರನ್ನು ಬಳಸಿಕೊಳ್ಳುವ ಯೋಜನೆ
»`ಕೆನೆಪದರ' ಮಿತಿ ರೂ 3.5 ಲಕ್ಷಕ್ಕೆ ಹೆಚ್ಚಳ: ರಾಜ್ಯ ಸರ್ಕಾರ ತೀರ್ಮಾನ
»ಹಂಪಿ:ನಿಧಿ ಶೋಧ, ವಿಗ್ರಹಕ್ಕೆ ಕುತ್ತು
»ಡಿನೋಟಿಫಿಕೇಶನ್: ಮತ್ತೆ ಬಂಧನದ ಭೀತಿಯತ್ತ ಬಿ‌ಎಸ್‌ವೈ
»ಬೆಂಗಳೂರಿನಲ್ಲಿ ಸೀಟ್ ಬೆಲ್ಟ್ ನಿಯಮ ಜಾರಿ ...
»ಮೂಡಿಗೆರೆ ತಾಲೂಕು ಮೂರನೆ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಆಡಳಿತ ಭಾಷೆಯಾಗಿ ಕನ್ನಡ ಜಾರಿಗೊಳಿಸುವಲ್ಲಿ ಸರಕಾರ ವಿಫಲ; ಸಮ್ಮೇಳನಾಧ್ಯಕ್ಷ ಡಿ.ಬಿ.ಸುಬ್ಬೇಗೌಡ
»ಅಕ್ರಮ ನಿವೇಶನ ಆರೋಪ: ಉ.ಲೋಕಾಯುಕ್ತರ ರಾಜೀನಾಮೆಗೆ ನಿವೃತ್ತ ನ್ಯಾ. ಸಲ್ಡಾನಾ ಆಗ್ರಹ
»ಗಣಿ ವರದಿ ಚರ್ಚೆಗೆ ಪಟ್ಟು: ಕೊನೆಗೂ ಮಣಿದ ಸ್ಪೀಕರ್
» ‘ಸ್ಪೀಕರ್’ ಗದ್ದಲ: ಪಕ್ಷೇತರರಿಂದ ಸಭಾತ್ಯಾಗ; ಮೇಲ್ಮನೆಯಲ್ಲಿ ಎರಡನೆ ದಿನವೂ ಪ್ರತಿಧ್ವನಿಸಿದ ‘ಲೋಕ’ ಗದ್ದಲ
»ಸಿದ್ದಗಂಗಾ ಶ್ರೀಗಳು ಸಾಯಿಬಾಬಾರ ಪ್ರತಿರೂಪ: ಬಿಎಸ್‌ವೈ
»ಆರೆಸ್ಸೆಸ್ ಕಪಿಮುಷ್ಟಿಯಲ್ಲಿ ರಾಜ್ಯ ಸರಕಾರ; ಆರೆಸ್ಸೆಸ್ ದೇಶದ್ರೋಹಿ ಸಂಘಟನೆ: ಸಂಸದ ವಿಶ್ವನಾಥ್ ಆತಂಕ
»ಕಳೆದ ಬಜೆಟ್ ಯೋಜನೆಗಳು ಇನ್ನೂ ಅನುಷ್ಠಾನಗೊಂಡಿಲ್ಲ: ಕುವಾರಸ್ವಾಮಿ
»ದಲಿತ ಶಾಸಕರಿಗೆ ರಕ್ಷಣೆ ಇಲ್ಲ: ನಮ್ಮ ಬೇಡಿಕೆಯನ್ನು ಕಡೆಗಣಿಸಲಾಗುತ್ತಿದೆ: ಗೂಳಿಹಟ್ಟಿ
»ಕೆಜಿಎಫ್: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
»ಬಿಳಿಗಿರಿರಂಗನಬೆಟ್ಟದಲ್ಲಿ ಹೆಚ್ಚುವರಿ ಯಾತ್ರಿ ನಿವಾಸಕ್ಕೆ 77ಲಕ್ಷ ರೂ. ಮಂಜೂರು: ಜಿ.ಎನ್.ನಂಜುಂಡಸ್ವಾಮಿ
»ಹಿಂದೂ ವಿರೋಧಿ ಮತಾಂತರವಾದಿಗಳನ್ನು ಸದೆಬಡೆಯಿರಿ: ಪೇಜಾವರ ಶ್ರೀ ಕರೆ
»‘ನಿಜವಾದ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ’: ಅಣ್ಣಾ ಹಜಾರೆ
»ಅಗತ್ಯ ಬಿದ್ದಲ್ಲಿ ಬಿಎಸ್‌ವೈ ಮತ್ತೆ ಮುಖ್ಯಮಂತ್ರಿ: ನಾಯ್ಡು
»ವಿಧಾನ ಸಭೆ ಕಲಾಪಕ್ಕೆ ಆಗಮಿಸಿದ ಬೋಪಯ್ಯ: ರಾಜೀನಾಮೆಗೆ ಒತ್ತಾಯಿಸಿ ಅನರ್ಹ ಶಾಸಕರಿಂದ ಸಭಾತ್ಯಾಗ
»ಹರಪನಹಳ್ಳಿ: ಪೇಜಾವರ ಶ್ರೀಗಳಿಗೆ ಕಪ್ಪು ಬಟ್ಟೆ ಪ್ರದರ್ಶನ
»ಬಿಎಸ್‌ವೈ ಬೆಂಬಲಿಗರ ಹೊಸ ಗೇಮ್‌: ಶಾಸಕರ ಸಹಿ ಸಂಗ್ರಹ...
»ಹಿಂದೂ ಸಮಾವೇಶದ ನೆಲದಲ್ಲಿ ತಲೆ ಎತ್ತಲಿದೆ ಟೌನ್‌ಶಿಪ್: ಹಿಂದೂಗಳನ್ನು ಒಗ್ಗೂಡಿಸಿದ ಶಕ್ತಿ ಸ್ಥಳದ ಭಾವನಾತ್ಮಕತೆ ಉಳಿಸುವ ಯತ್ನ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri