| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಮಂಡ್ಯ: ಅಗಲಿದ ‘ಸಾಮ್ರಾಟ’ನಿಗೆ ಅಭಿಮಾನಿಗಳ ಅಶ್ರುತರ್ಪಣ |
ಪ್ರಕಟಿಸಿದ ದಿನಾಂಕ : 2009-12-31
ಮಂಡ್ಯ, ಡಿ.೩೦: ಕನ್ನಡದ ಹೆಸರಾಂತ ಚಿತ್ರನಟ ಡಾ. ವಿಷ್ಣುವರ್ಧನ್ ನಿಧನ ಸುದ್ದಿಯಿಂದ ದಿಗ್ಭ್ರಾಂತರಾದ ಜಿಲ್ಲೆಯ ಅಭಿಮಾನಿಗಳು, ಅಗಲಿದ ಕಲಾವಿದನಿಗೆ ಕಂಬನಿ ಮಿಡಿದಿದ್ದಾರೆ.
ಮುಂಜಾನೆ ವಿಷ್ಣುವರ್ಧನ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯಾದ್ಯಂತ ಅಭಿಮಾನಿಗಲು ವಿಷ್ಣು ಭಾವಚಿತ್ರವನ್ನಿಟ್ಟು ಹಾರಹಾಕಿ ಸಂತಾಪ ವ್ಯಕ್ತಪಡಿಸಿದರು.
ಬೆಸಗರಹಳ್ಳಿ, ಕೊಪ್ಪ, ಬಸರಾಳು ಸೇರಿದಂತೆ ಹಲವಾರು ಕಡೆ ವರ್ತಕರು ಸ್ವಯಂ ಪ್ರೇರಣೆಯಿಂದ ತಮ್ಮ ಅಂಗಡಿ ಮುಂಗಟ್ಟಗಳನ್ನು ಬಂದ್ ಮಾಡಿ ಗೌರವ ಸಲ್ಲಿಸಿದರು.
ಜಿಲ್ಲೆಯ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಚಿತ್ರಪ್ರದರ್ಶನ ರದ್ದುಪಡಿಸಲಾಯಿತು. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯಬೇಕಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡಲಾಯಿತು.
ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿಷ್ಣುವರ್ಧನ್ ಅಭಿಮಾನಿಗಳು ಹಲವೆಡೆ ನೆಚ್ಚಿನ ನಾಯಕನ ಭಾವಚಿತ್ರ ಹಿಡಿದು ಮೌನ ಮೆರವಣಿಗೆ ನಡೆಸಿ ಅಶ್ರುತರ್ಪಣ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಧ್ಯಕ್ಷ ಚಿದಂಬರ್, ಪೊತೇರ ಮಹದೇವ, ಅಶೋಕ್ ನೇತತ್ವದಲ್ಲಿ ಮಂಡ್ಯ ನಗರದ ಸಂಜಯ ವತ್ತದಲ್ಲಿ ಶ್ರದ್ಧಾಂಜಲಿ ಸಭೆ ನqಯಿತು.
ಮದ್ದೂರು ಪಟ್ಟಣದ ಪೇಟೆ ಬೀದಿಯಲ್ಲಿ ಆಟೋ ಚಾಲಕರು ವಿಷ್ಣುವರ್ಧನ್ ಭಾವಚಿತ್ರದ ಮೆರವಣಿಗೆ ನಡೆಸಿದರೆ, ಮಂಡ್ಯನಗರ ಮತ್ತಿತರ ಕಡೆಯೂ ಭಾವಚಿತ್ರ ಮೆರವಣಿಗೆ ನಡೆಸಲಾಯಿತು.
ಮಂಡ್ಯ ನಗರದ ಆನೆಕೆರೆ ಬೀದಿಯಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಹಾಗೂ ಸಂಜಯ ವತ್ತದಲ್ಲಿ ವಿಷ್ಣು ಸೇನಾ ಸಮಿತಿ ಕಾರ್ಯಕರ್ತರು ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಿದರು.
ಮದ್ದೂರು ಪಟ್ಟಣದ ವಿಷ್ಣು ಅಭಿಮಾನಿ ಕಷ್ಣಪ ಸೇರಿದಂತೆ ಹಲವಾರು ಕಡೆ ಅಭಿಮಾನಿಗಳು ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಅಗಲಿದ ಕಲಾವಿದನಿಗೆ ತಮ್ಮ ಭಾವಪೂರ್ಣ ನಮನ ಸಲ್ಲಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2009-12-31 00:00:00
|
|
|
|
|