ಪೇಜಾವರ ಸದಾಶಿವರಾವ್ ಸ್ಮಾರಕ ಪ್ರಶಸ್ತಿಗೆ ಅರ್‍ಜಿ ಆಹ್ವಾನ |
ಪ್ರಕಟಿಸಿದ ದಿನಾಂಕ : 2008-10-28
ಕನ್ನಡದ ಪ್ರತಿಭಾವಂತ ಹೊಸ ಕವಿಗಳಿಗೆ ಉತ್ತೇಜನ ನೀಡುವ ಸಲುವಾಗಿ ದಿ.ಪೇಜಾವರ ಸದಾಶಿವರಾವ್ ಸ್ಮಾರಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ರು.೩೦೦೦ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯ ವಿವರಗಳು ಕೆಳಕಂಡಂತಿವೆ.
೩೫ ವರ್‍ಷ ವಯಸ್ಸಿನೊಳಗಿರುವ ಯುವ ಕವಿಗಳು ತಮ್ಮ ಕವಿತೆಗಳನ್ನು ಕಳುಹಿಸಬಹುದು. ಬಹುಮಾನಕ್ಕೆ ಆಯ್ಕೆಯಾಗುವ ಕವಿಗಳ, ಹಿಂದಿನ ಎರಡು ವರ್‍ಷಗಳ ಕವನ ಸಂಕಲನವನ್ನು ಪರಿಗಣಿಸಲಾಗುವುದು.
ಕವನ ಸಂಕಲನದ ಮೂರು ಪ್ರತಿಗಳನ್ನು ಲಕೋಟೆ ಮೇಲೆ ಪೇಜಾವರ ಸದಾಶಿವ ಸ್ಮಾರಕ ಪ್ರಶಸ್ತಿಗಾಗಿ ಎಂದು ಸ್ಪಷ್ಟವಾಗಿ ನಮೂದಿಸಿ, ಡಿಸೆಂಬರ್ ೧೦, ೨೦೦೮ರ ಒಳಗಾಗಿ ಕಳುಹಿಸಿಕೊಡಬೇಕು ಮತ್ತು ಇದಕ್ಕೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಸ್ಪರ್‍ಧೆಗೆ ಕಳುಹಿಸಿದ ಕೃತಿ ತನ್ನ ಪ್ರಥಮ ಕಾವ್ಯ ಸಂಕಲನವೆಂಬ ಸ್ವಂತ ಪ್ರಮಾಣಪತ್ರವನ್ನು ಕೃತಿಗಳೊಂದಿಗೆ ಕಳುಹಿಸಬೇಕು.
ವಿಳಾಸ: ಮುಖ್ಯ ಕಾರ್‍ಯದರ್‍ಶಿಗಳು, ಕರ್‍ನಾಟಕ ಸಂಘ, ಛತ್ರಪತಿ ಶಿವಾಜಿ ಮಹರಾಜ್ ಮಾರ್‍ಗ, ಮಾತುಂಗ ರೋಡ್ ಸ್ಟೇಷನ್ ಬಳಿ(ಪಶ್ಚಿಮ), ಮುಂಬೈ-೪೦೦೦೧೬
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-28
|
|
|