ಕನ್ನಡಿಗರು ಯುಕೆ’ಯಿಂದ ನವೆಂಬರ್ 8ರಂದು ರಾಜ್ಯೋತ್ಸವ |
ಪ್ರಕಟಿಸಿದ ದಿನಾಂಕ : 2008-10-28
ರೆಡ್ಡಿಂಗ್: ಆಂಗ್ಲರ ನಾಡಿನಲ್ಲಿ ಕನ್ನಡ ರಾಜ್ಯೋತ್ಸವ. ಅನಿವಾಸಿ ಕನ್ನಡಿಗರ ಒಕ್ಕೂಟ ’ಕನ್ನಡಿಗರು ಯುಕೆ’ ವತಿಯಿಂದ ನವೆಂಬರ್ 8ರಂದು ಇಲ್ಲಿನ ಶಿನ್‌ಫೀಲ್ಡ್ ರಸ್ತೆಯಲ್ಲಿರುವ ಲೈಟನ್ ಪಾರ್‍ಕ್ ಸ್ಕೂಲ್ ವತಿಯಿಂದ ಕನ್ನಡ ರಾಜ್ಯೋತ್ಸವ ನಡೆಯಲಿದೆ.
ಮಧ್ಯಾಹ್ನ ೨ರಿಂದ ಸಂಜೆ ೬.೩೦ರವರೆಗೆ ಈ ಕಾರ್‍ಯಕ್ರಮ ನಡೆಯಲಿದೆ. ಪತ್ರಕರ್‍ತ ರವಿ ಬೆಳಗರೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಗೀತಾ ಕಟ್ಟಿ ಸಂಗೀತ ಕಾರ್‍ಯಕ್ರಮ ನೀಡಲಿದ್ದಾರೆ.
ಸಿಲ್ಲಿ ಲಲ್ಲಿ ಧಾರವಾಹಿಯ ಕಲಾವಿದರಾದ ರೂಪ ಮತ್ತು ಪ್ರಶಾಂತ್ ಕಾರ್‍ಯಕ್ರಮ ನಿರೂಪಿಸಲಿದ್ದಾರೆ. ಪಟ್ಟಾಭಿರಾಮನ್ ಅಳರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸ್ಥಳೀಯ ಪ್ರತಿಭೆಗಳಾದ ರಶ್ಮಿಯಿಂದ ಭರತನಾಟ್ಯ, ರಂಜಿನಿ ತಂಡದವರ ಕಿರುನಾಟಕ, ಅರುಣ್ ಕುಕ್ಕೆ ತಂಡದಿಂದ ಸಮೂಹಗಾನ, ಅರ್‍ಪಿತ, ಜ್ಯೋತಿ, ಅನು ಹಾಗೂ ಸೋನು ಅವರಿಂದ ನತ್ಯ ಪ್ರದರ್‍ಶನವೂ ಇದೆ ಎಂದು ಕನ್ನಡಿಗರು ಯುಕೆ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-28
|
|
|