ಗಂಭೀರವಾಗೇ ಉಳಿದ ದಾಸ್‌ಮುನ್ಶಿ ದೇಹಸ್ಥಿತಿ |
ಪ್ರಕಟಿಸಿದ ದಿನಾಂಕ : 2008-10-28
ನವದೆಹಲಿ, ಶನಿವಾರ, 25 ಅಕ್ಟೋಬರ್ 2008 ಮಾಹಿತಿ ಹಾಗೂ ಪ್ರಸರಣಾ ಸಚಿವ ಪ್ರಿಯ ರಂಜನ್ ದಾಸ್ ಮುನ್ಶಿಯವರ ದೇಹಸ್ಥಿತಿ ಗಂಭೀರವಾಗೇ ಉಳಿದುಕೊಂಡಿದೆ.
ಸಚಿವರ ಪರಿಸ್ಥಿತಿ ಗಂಭೀರವಾಗಿ ಉಳಿದುಕೊಂಡಿದ್ದು, ಅವರು ಕೃತಕ ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ ಎಂದು ಅಪೊಲೊ ಆಸ್ಪತ್ರೆಯ ನರತಜ್ಞ ಡಾ ವಿನೀತ್ ಸೂರಿ ತಿಳಿಸಿದ್ದಾರೆ.
ಅಕ್ಟೋಬರ್ 13ರಂದು ಏಮ್ಸ್‌ಗೆ ಸೇರಿಸಲಾಗಿದ್ದ 62 ವರ್ಷದ ದಾಸ್‌ಮುನ್ಶಿಯನ್ನು ಕಳೆದ ಸೋಮವಾರ ಹೆಚ್ಚಿನ ನರಸಂಬಂಧಿ ಚಿಕಿತ್ಸೆಗಾಗಿ ಇಂದ್ರಪ್ರಸ್ತ ಅಪೊಲೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಏಮ್ಸ್‌ನಲ್ಲಿ ಒಂದು ವಾರ ಇದ್ದ ದಾಸ್‌ಮುನ್ಶಿ ನಾಲ್ಕು ಅಂಗಗಳ ಯಾವುದೇ ರೀತಿಯ ಚಲನೆಯನ್ನು ತೋರಿಸಿರಲಿಲ್ಲ ಮತ್ತು ಅವರ ಕನೀನಿಕೆ ಅಚಲವಾಗಿದ್ದು, ಹಿಗ್ಗಿಕೊಂಡಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಅಮೆರಿಕದ ನರತಜ್ಞ ಡಾ. ಡೆನ್ ಹೇನ್ಲೇ ದಾಸ್‌ಮುನ್ಶಿ ಪರೀಕ್ಷೆಗಾಗಿ ಕಳೆದ ಶುಕ್ರವಾರ ಆಗಮಿಸಿದ್ದರು ಮತ್ತು ಚಿಕಿತ್ಸೆಗಾಗಿನ ಯಾವುದೇ ಸಾಧ್ಯತೆ ಬಗ್ಗೆ ಅರಿತುಕೊಳ್ಳಲು ಅವರ ಮೆದುಳಿನ ಇಇಜಿಯನ್ನು ಕೈಗೊಂಡಿದ್ದರು.
ಪ್ರಸಕ್ತ ಅವರ ನರವ್ಯವಸ್ಥೆ ಪರಿಸ್ಥಿತಿಯನ್ನು ಹತ್ತಿರದಿಂದ ಪರಿವೀಕ್ಷಿಸಲಾಗುತ್ತಿದೆ ಎಂದು ಅಪೊಲೊ ವೈದ್ಯರೊಬ್ಬರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್‌ದುನಿಯಾ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-10-28
|
|
|