ಅಜ್ಮಾನ್: ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಫಾರ್ಮ್.ಡಿ. ಹಾಗೂ ಡಿ.ಎಮ್.ಡಿ ಪದವಿಗಳ ಪ್ರಾರಂಭ |
ಪ್ರಕಟಿಸಿದ ದಿನಾಂಕ : 2008-10-28
ಅಕ್ಟೋಬರ್ 25 ರಂದು ನಡೆದ ಪ್ರಾರಂಭಿಕ -ವೈಟ್ ಕೋಟ್- ಸಮಾರಂಭ : ಭಾರತೀಯ ದೂತಾಧಿಕಾರಿ ಆಗಮನ
ಅಜ್ಮಾನ್, ಅಕ್ಟೋಬರ್ 28: ಕಳೆದ ಅಕ್ಟೋಬರ್ 25 ರಂದು ಹೊಸ ಪದವಿಗಳಾದ್ ಫಾರ್ಮ್.ಡಿ. ಹಾಗೂ ಡಿ.ಎಮ್.ಡಿ. ಪದವಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಪ್ರಮಾಣವಚನ ಸಮಾರಂಭವಾದ -ವೈಟ್ ಕೋಟ್ ಸೆರೆಮನಿ- ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಯು.ಎ.ಇ.ಯಲ್ಲಿ ಭಾರತೀಯ ದೂತಾಧಿಕಾರಿಯಾಗಿರುವ ಶ್ರೀ ವೇಣು ರಾಜಮಣಿಯವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಮ್.ಸಿ. ಅಧ್ಯಕ್ಷರಾದ ಶ್ರೀ ತುಂಬೆ ಮೊಹಿಯುದ್ದೀನ್ ಅವರು ವಹಿಸಿದ್ದರು.
ಬೋಸ್ಟನ್ ದಂತವೈದ್ಯ ವಿಶ್ವವಿದ್ಯಾಲಯದ ಡಾ. ರಾಲ್ಫ್ ಹಾಕಿನ್ಸ್ ಅವರು ವಿಶೇಷ ಆಹ್ವಾನಿತ ಅತಿಥಿಯಾಗಿದ್ದರು. ಅವರು ಪದವಿಗಳಿಗೆ ಸೇರಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವೈದ್ಯನಾಗುವವನ ವೃತ್ತಿಯ ಮಹತ್ವದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪಾಲಕ-ಬಂಧುವರ್ಗದವರು ಮಾತ್ರವಲ್ಲದೇ ಹಲವಾರು ಗಣ್ಯವ್ಯಕ್ತಿಗಳೂ ಉಪಸ್ಥಿತರಿದ್ದರು.
ವೈದ್ಯವೃತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಹೊಸ ಜೀವನಕ್ಕೆ ಆಹ್ವಾನಿಸಿದ ಪ್ರಮುಖ ಅಧಿಕಾರಿ ಪ್ರೊ. ಗೀತಾ ಅಶೋಕ್ ರಾಜ್ ಅವರು ವೈದ್ಯವೃತ್ತಿಯ ನಿಬಂಧನೆಗಳನ್ನು ವಿವರಿಸಿದರು. ನೂತನ ವಿದ್ಯಾರ್ಥಿಗಳು ಆ ಬಳಿಕ ಬಿಳಿಯ ಕೋಟುಗಳನ್ನು ಸಾಂಕೇತಿಕವಾಗಿ ತೊಟ್ಟು ವೈದ್ಯವೃತ್ತಿಯಲ್ಲಿ ತಮ್ಮ ಜೀವನವನ್ನು ಮುಡಿಪಾಗಿಡುವುದರ ಪ್ರತಿಜ್ಞೆ ಕೈಗೊಂಡರು.
ಪ್ರಸ್ತುತ ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್., ಬಿ.ಪಿ.ಟಿ. ಡಿ.ಎಮ್.ಡಿ. ಫಾರ್ಮ್.ಡಿ. ಜಿಎಮ್.ಸಿ-ಆರ್.ಎ.ಸಿ.ಜಿ.ಪಿ-ಫೆಲೋಶಿಪ್ (ನ್ಯೂಜಿಲ್ಯಾಂಡಿನ ಮೆಂಕೆಂಜೀ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ) ಪದವಿಗಳ ಪ್ರವೇಶಾವಕಾಶ ನೀಡುತ್ತಿದೆ. ಅಲ್ಲದೇ ಮೆಕ್ಯಾನಿಕಲ್ ಡಯಗ್ನೋಸಿಸ್ ಮತ್ತು ಥೆರಪಿ ಮೊದಲಾದವುಗಳಲ್ಲೂ ತರಬೇತಿ ನೀಡುತ್ತಿದೆ.
ನೋಂದಾವಣೆ ಹಾಗೂ ಹೆಚ್ಚಿನ ವಿವರಗಳಿಗೆ: www.gmu.ac.ae ತಾಣವನ್ನು ಸಂದರ್ಶಿಸಬಹುದಾಗಿದೆ.
ವರದಿಯ ವಿವರಗಳು |
 |
ಕೃಪೆ : ಗಲ್ಫ್ ವೈದ್ಯಕೀಯ ವಿಶ್ವವಿದ್ಯಾಲಯ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-28
|
|
|