ದೋಹಾ: ಎಂ.ಸಿ.ಸಿ. ಥ್ರೋಬಾಲ್ ಪ್ರಶಸ್ತಿ ತುಳುಕೂಟ ಕತರ್ ಮುಡಿಲಿಗೆ |
ಪ್ರಕಟಿಸಿದ ದಿನಾಂಕ : 2008-10-28
ದೋಹಾ, ಅಕ್ಟೋಬರ್ 28: ಮಂಗಳೂರು ಕ್ರಿಕೆಟ್ ಕ್ಲಬ್ (ಎಂ.ಸಿ.ಸಿ) ಆಯೋಜಿಸಿದ್ದ ಏಳನೆಯ ವಾರ್ಷಿಕ ಎಮ್.ಸಿ.ಸಿ ಮಹಿಳಾ ಮುಕ್ತ ಥ್ರೋಬಾಲ್ ಪಂದ್ಯಾವಳಿಯಲ್ಲಿ ತುಳುಕೂಟ ಕತರ್ ತಂಡ ಅರ್ಹ ಜಯ ಪಡೆದುಕೊಂಡಿದೆ. ಅಂತಿಮ ಹಂತದಲ್ಲಿ ಹಿಂದಿನ ವಿಜೇತರಾದ ಕೊಂಕಣ್ ಸ್ಟಾರ್ಸ್ ತಂಡವನ್ನು 10-15.15-8,15-4 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಒಟ್ಟು ನಾಲ್ಕು ದಿನ ನಡೆದ ಪಂದ್ಯಾವಳಿ 16.17.23ಹಾಗೂ 24 ನೇ ಅಕ್ಟೋಬರ್ ನಂದು ಆಯೋಜಿಸಲಾಗಿತ್ತು. ಅಲ್ ವಖ್ರಾದ ಇಂಡಿಯಲ್ ಕ್ಲಬ್ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ತುಳುಕೂಟ, ಲಂಕಾ ಲಯನ್ಸ್, ಕತರ್ ತಮಿಜಾರ್ ಸಂಗಮ್, ಕೊಂಕಣ್ ಸ್ಟಾರ್ಸ್, ಇಂಡಿಯನ್ ಕ್ಲಬ್ ಅಲ್ ಖೋರ್ ಯುನೈಟೆಡ್ ಹಾಗೂ ಆಹ್ವಾನ ನೀಡಿದ ಎಮ್.ಸಿ.ಸಿ. ತಂಡಗಳು ಹಣಾಹಣಿ ನಡೆಸಿದ್ದವು.
ನಾಲ್ಕೂ ದಿನಗಳ ಪಂದ್ಯಗಳನ್ನು ವೀಕ್ಷಿಸಲು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು. ಮೂರನೆಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಎಮ್.ಸಿ.ಸಿ ಹಾಗೂ ಕತರ್ ತಮಿಜಾರ್ ಸಂಗಮ್ ತಂಡಗಳ ನಡುವೆ ಉತ್ತಮ ಸ್ಪರ್ಧೆ ಕಂಡುಬಂದಿತ್ತು. ಎಂ.ಸಿ.ಸಿ ಮೂರನೆಯ ಸ್ಥಾನಕ್ಕೆ ಪಾತ್ರವಾಯಿತು.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ದೋಹಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-28
|
|
|