ಅಬುಧಾಬಿ: ನಗರದಲ್ಲಿ ಅಕ್ಟೋಬರ್ 31 ರಂದು ಗಂಗುನ ಗಮ್ಮತ್ ತುಳುನಾಟಕ ಪ್ರದರ್ಶನ |
ಪ್ರಕಟಿಸಿದ ದಿನಾಂಕ : 2008-10-28
ಕೇರಳ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ಆಯೋಜಿತ ಕಾರ್ಯಕ್ರಮ : ಉಚಿತ ಪ್ರವೇಶ
ಅಬುಧಾಬಿ, ಅಕ್ಟೊಬರ್ 28: ಕಳೆದ ವಾರ ದುಬೈಯಲ್ಲಿ ಜಯಭೇರಿ ಬಾರಿಸಿದ ಅಂಬಲ್ತೆರೆ ವಿಷನ್ಸ್ ಪ್ರಸ್ತುತಪಡಿಸಿದ ಗಂಗುನ ಗಮ್ಮತ್ ತಂಡ ಈ ಶುಕ್ರವಾರ ಅಬುಧಾಬಿಯಲ್ಲಿ ಮರುಪ್ರದರ್ಶನ ನೀಡಲಿದೆ. ಅಕ್ಟೋಬರ್ 31 ರ ಸಂಜೆ 5 ಘಂಟೆಗೆ ಸರಿಯಾಗಿ ನಗರದ ಕೇರಳ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ನಾಟಕ ಪ್ರಾರಂಭವಾಗಲಿದ್ದು ಪ್ರವೇಶ ಉಚಿತವಾಗಿದೆ.
ನಾಟಕವನ್ನು ಪ್ರತಿಭಾವಂತ ನಟ ಹಾಗೂ ರಂಗಕರ್ಮಿ ವಿಶ್ವನಾಥ ಶೆಟ್ಟಿಯವರು ನಿರ್ದೇಶಿ ಗಂಗುವಿನ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಸುರೇಶ್ ಮಂಜೇಶ್ವರ ಅವರು ಈ ನಾಟಕವನ್ನು ಬರೆದಿದ್ದಾರೆ.
ಹಿಂದಿನ ವಾರ ಭರ್ಜರಿ ಯಶಸ್ಸು ಪಡೆದ ನಾಟಕ ಸಂಪೂರ್ಣವಾಗಿ ಸ್ಥಳೀಯ ಕಲಾವಿದರಿಂದ ಅಭಿನಯಿಸಲ್ಪಟ್ಟಿದ್ದು ಒಂದು ದಾಖಲೆಯಾಗಿದೆ. ಅಬುಧಾಬಿಯಲ್ಲಿ ತಂಡದ ಎರಡನೇ ಪ್ರದರ್ಶನವಾಗಿದೆ.
ಕಳೆದ ವಾರದ ನಾಟಕದ ಯಶಸ್ಸು ಅಬುಧಾಬಿಯ ಜನರಿಗೂ ಸಲ್ಲಬೇಕೆಂಬ ಕಾಳಜಿಯಿಂದ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರ್ ಆಹ್ವಾನವನ್ನು ಸ್ವೀಕರಿಸಿದ ತಂಡ ಎರಡನೆಯ ಪ್ರದರ್ಶನಕ್ಕಾಗಿ ಸಜ್ಜಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡವರನ್ನು ಸಂಪರ್ಕಿಸಬಹುದು ಸರ್ವೋತ್ತಮ ಶೆಟ್ಟಿ: 050-6125464 ಮನೋಹರ ತೋನ್ಸೆ:050-5212079 ಪ್ರದೀಪ್ ಕಿರೋಡಿಯಾನ್:050-4953432 ಬೆನೆಟ್ ಡಿಮೆಲ್ಲೋ:050-6429616 ಉಮೇಶ್ ರಾವ್:050-7721783 ಯೋಗೇಶ್ ಪ್ರಭು:050-6613735 ಸುಧೀರ್ ಶೆಟ್ಟಿ:050-7916782 ಪ್ರಶಾಂತ್ ಹೆಗಡೆ: 050-5213883 ಜೈರಾಮ್ ರೈ: 050-6228769
ವರದಿಯ ವಿವರಗಳು |
 |
ಕೃಪೆ : ಅಬುಧಾಬಿ ಕರ್ನಾಟಕ ಸಂಘ ಪ್ರಕಟಣೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-10-28
|
|
|